Wedding Video: ವಧುವಿನ ಮುಂದೆ ನಕರ ತೋರಿಸಿದ ವರ, ಮುಂದೇನಾಯ್ತು ಈ ವಿಡಿಯೋ ನೋಡಿ

Wedding Video: ವಧು-ವರರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ವರನು ಸಿಹಿ ನಿರಾಕರಿಸಿದಾಗ, ವಧುವಿನ ಪ್ರತಿಕ್ರಿಯೆ ಏನಿರಬಹುದು ಎಂಬುದನ್ನು ಈ ವಿಡಿಯೋದಲ್ಲಿ ಕಾಣಬಹುದು.  

Written by - Yashaswini V | Last Updated : Nov 11, 2021, 10:21 AM IST
  • ವಧು ಸಾರ್ವಜನಿಕವಾಗಿ ವರನನ್ನು ಅವಮಾನಿಸಿದಳು
  • ವಧುವಿನ ಕೋಪದ ನೋಟ ನೋಡಿದ ಜನರು ಬೆಚ್ಚಿಬಿದ್ದರು
  • ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ವೈರಲ್ ಆಗಿದೆ
Wedding Video: ವಧುವಿನ ಮುಂದೆ ನಕರ ತೋರಿಸಿದ ವರ, ಮುಂದೇನಾಯ್ತು ಈ ವಿಡಿಯೋ ನೋಡಿ title=
Wedding Video: ಸಿಹಿ ತಿನ್ನಲು ನಿರಾಕರಿಸಿದ ವರ, ವಧುವಿನ ಪ್ರತಿಕ್ರಿಯೆಗೆ ಬೆಚ್ಚಿಬಿದ್ದ ಜನ

Wedding Video: ಮದುವೆ ಮನೆ ಎಂದರೆ ಸಣ್ಣ ಪುಟ್ಟ ಗಲಾಟೆ ಆಗುವುದು ಸಹಜವೇ. ವರನ ಕುಟುಂಬದ ಸದಸ್ಯರು ಅವರ ಮಾತಿಗೆ ಅಂಟಿಕೊಂಡರೆ, ವಧುವಿನ ಕುಟುಂಬ ಸದಸ್ಯರು ಅವರ ಮನವೊಲಿಸಲು ನೂರು ಮಾರ್ಗಗಳನ್ನು ಹುಡುಕುತ್ತಾರೆ. 
ಮದುವೆಮನೆಯಲ್ಲಿ ವಧು-ವರ ಇಬ್ಬರೂ ಆಕರ್ಷಣೆಯ ಕೇಂದ್ರ ಬಿಂದು. ಅಂತಹ ಸಂದರ್ಭದಲ್ಲಿ ಇಬ್ಬರ ನಡುವೆ ನಡೆಯುವ ಚಿಕ್ಕ-ಪುಟ್ಟ ಕೀಟಲೆ, ತಮಾಷೆಯ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸದ್ದು ಮಾಡುತ್ತವೆ. ಇತ್ತೀಚಿಗೆ ಅಂತಹದ್ದೇ ವಿಡಿಯೋ ಒಂದು ಹೆಚ್ಚು ವೈರಲ್ ಆಗುತ್ತಿದೆ. 

ಸಾರ್ವಜನಿಕವಾಗಿ ವರನನ್ನು ಅವಮಾನಿಸಿದ ವಧು:
ಇಂಟರ್‌ನೆಟ್‌ನಲ್ಲಿ ವೈರಲ್ (Viral Video) ಆಗುತ್ತಿರುವ ಈ ವೀಡಿಯೊದಲ್ಲಿ ಮಂಟಪದಲ್ಲಿ ವರ ಸಿಹಿ ತಿನ್ನಲು ನಕರ ಮಾಡುತ್ತಿರುವುದು ಕಂಡು ಬರುತ್ತಿದೆ. ಆದರೆ ಸಿಹಿ ತಿನ್ನಲು ನಿರಾಕರಿಸಿದ ವರನಿಗೆ ವಧುವಿನ ಪ್ರತಿಕ್ರಿಯೆ ಏನು ಎಂಬ ದೃಶ್ಯ ಸದ್ಯ ವೈರಲ್ ಆಗುತ್ತಿದೆ. 

ಇದನ್ನೂ ಓದಿ - Viral Video: ಸಮುದ್ರದಲ್ಲಿ ದೈತ್ಯ ಹಾವಿನ ಜಲಕ್ರೀಡೆ, ನೋಡಿ ವೈರಲ್ ವಿಡಿಯೋ

ವಾಸ್ತವವಾಗಿ, ಮದುವೆಯಲ್ಲಿ ವರನಿಗೆ ಸಿಹಿ ತಿನ್ನಿಸುವ ಶಾಸ್ತ್ರದ ವೇಳೆ ವಧು ವರನ  (Bride Groom) ಬಾಯಿಗೆ ಸಿಹಿ ತಿನ್ನಿಸಲು ಮುಂದಾಗುತ್ತಾಳೆ. ಈ ಸಂದರ್ಭದಲ್ಲಿ ವಧು ಬಾಯಿಗೆ ಸಿಹಿ ಹಾಕುವುದನ್ನು ತಡೆಯಲು ಪ್ರಯತ್ನಿಸುತ್ತಾನೆ. ಇದಕ್ಕೆ ಕೋಪಗೊಂಡ ವಧು ಯಾರೂ ನಿರೀಕ್ಷಿಸದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾಳೆ. ಸಿಹಿ ತಿನ್ನಲು ನಿರಾಕರಿಸಿದ ವರ ಸ್ವಭಾವದಿಂದ ಕುಪಿತಳಾದ ವಧು ಸಿಹಿಯನ್ನು (ರಸಗುಲ್ಲ) ಆತನ ಹಿಂದೆ ಬಿಸಾಡಿದ್ದಾಳೆ.  ವಧುವಿನ ಈ ರಿಯಾಕ್ಷನ್ ಕಂಡ ಜನ ಬೆರಗಾಗಿದ್ದಾರೆ. 

ಇದನ್ನೂ ಓದಿ - Cat Viral Video: ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೆಕ್ಕು ವಾಷಿಂಗ್ ಮೆಷಿನ್‌ನಲ್ಲಿ ಏನು ಮಾಡಬಹುದು! ಈ ವೈರಲ್ ವಿಡಿಯೋ ನೋಡಿ

ವಧುವಿನ ಕೋಪದ ನೋಟ ನೋಡಿದ ಜನರು ಬೆಚ್ಚಿಬಿದ್ದರು:
ವಧುವಿನ ಈ ಕೋಪದ ಲುಕ್ ನೋಡಿದ ನಂತರ, ಅಲ್ಲಿ ನೆರೆದಿದ್ದ ಜನ ಬೆರಗಾದಂತೆ ಅವರನ್ನೇ ನೋಡುತ್ತಿದ್ದಾರೆ. ಕೆಲವೇ ಸೆಕೆಂಡ್ ಗಳ ಈ ವಿಡಿಯೋ ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದೆ. ವೀಡಿಯೋ ವೈರಲ್ ಆದ ನಂತರ ಜನರು ವಧುವಿನ ಕೃತ್ಯದ ಬಗ್ಗೆ ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ  (Social Media) ಈ ವಿಡಿಯೋವನ್ನು ಜನರು ತುಂಬಾ ಇಷ್ಟಪಡುತ್ತಿದ್ದಾರೆ. ಹೈದರಾಬಾದಿ ಕಾಮಿಡಿ ಹೆಸರಿನ ಖಾತೆಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ  (Instagram)  ಈ ವಿಡಿಯೋ ಅಪ್‌ಲೋಡ್ ಮಾಡಿದ ತಕ್ಷಣ, ಜನರು ಅದನ್ನು ತುಂಬಾ ಇಷ್ಟಪಟ್ಟಿದ್ದಾರೆ. ಅನೇಕ ಇತರ ಬಳಕೆದಾರರು ಈ ವೀಡಿಯೊಗೆ ತಮ್ಮ ಪ್ರತಿಕ್ರಿಯೆಯನ್ನು ಸಹ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News