ನವದೆಹಲಿ: ಭಾರತೀಯ ರಾಜಕೀಯದಲ್ಲಿ ಉತ್ತುಂಗದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ 1957ರಿಂದಲೂ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಆದರೆ ಅವರು ಎಂದಿಗೂ ಸೋಲಲಿಲ್ಲ. ಅವರು ರಾಜಕೀಯದಲ್ಲಿ ಮಾನವ ಮೌಲ್ಯಗಳಿಗೆ ಒಲವು ತೋರಿದ್ದರು. ಸ್ವಾತಂತ್ರ್ಯದ ನಂತರ ದೀರ್ಘಾವಧಿ ಆಳ್ವಿಕೆ ನಡೆಸಿದ್ದ ನೆಹರು-ಗಾಂಧಿ ಕುಟುಂಬದೊಂದಿಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸಂಬಂಧ ಸಹಜವಾಗಿತ್ತು. 


COMMERCIAL BREAK
SCROLL TO CONTINUE READING

ನೆಹರು ಕುಟುಂಬದ ಮೂರು ಪೀಳಿಗೆಗಳೊಂದಿಗೆ ಅಟಲ್ ಜೀ ಅವರ ಸಂಬಂಧದ ಬಗೆಗಿನ ಕಥೆಗಳನ್ನು ನೋಡೋಣ:


ರಾಜೀವ್ ಗಾಂಧಿಗೆ ಅವರ ಕೃತಜ್ಞತೆಯನ್ನು ವ್ಯಕ್ತಪಡಿಸಿದಾಗ...
1987 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದರು. ಆ ಸಮಯದಲ್ಲಿ ಅವರ ಚಿಕಿತ್ಸೆ ಅಮೆರಿಕಾದಲ್ಲಿ ಮಾತ್ರ ಸಾಧ್ಯವಿತ್ತು. ಆದರೆ ಆರ್ಥಿಕ ಪರಿಸ್ಥಿತಿಯಿಂದಾಗ್ಗಿ, ಅವರು ಯುಎಸ್ ತಲುಪಲು ಸಾಧ್ಯವಿರಲಿಲ್ಲ. ಏತನ್ಮಧ್ಯೆ, ಆಗಿನ ಪ್ರಧಾನಿ ರಾಜೀವ್ ಗಾಂಧಿಗೆ ವಾಜಪೇಯಿ ಅವರ ಅನಾರೋಗ್ಯದ ಬಗ್ಗೆ ತಿಳಿಯಿತು. ಆವರು ವಾಜಪೇಯಿ ಅವರನ್ನು ತಮ್ಮ ಕಚೇರಿಗೆ ಕರೆಸಿದರು. ಅದರ ನಂತರ ಅವರು ನ್ಯೂಯಾರ್ಕ್ನಲ್ಲಿ ಭಾರತ ನಿಯೋಗವನ್ನು ಭೇಟಿ ಮಾಡಿ ಎಂದು ರಾಜೀವ್ ಗಾಂಧಿ ತಿಳಿಸಿದರು. ಹಾಗಾಗಿ ಅಟಲ್ ಜೀ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು. ಈ ಘಟನೆಯನ್ನು ಇತ್ತೀಚೆಗೆ ಬಿಡುಗಡೆಯಾದ ದಿ ಡೆವಿಲ್ಸ್ ಅಡ್ವೊಕೇಟ್ನಲ್ಲಿ ಪ್ರಕಟವಾದ ಪುಸ್ತಕದಲ್ಲಿ ಪ್ರಖ್ಯಾತ ಪತ್ರಕರ್ತ ಕರಣ್ ಥಾಪರ್ ಅವರು ಉಲ್ಲೇಖಿಸಿದ್ದಾರೆ. 1991 ರಲ್ಲಿ ರಾಜೀವ್ ಗಾಂಧಿಯವರ ಹತ್ಯೆಯ ನಂತರ, ಅಟಲ್ ಬಿಹಾರಿ ವಾಜಪೇಯಿ ಅವರನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಇದನ್ನು ಸಾರ್ವಜನಿಕವಾಗಿ ಮೊದಲ ಬಾರಿಗೆ ಹೇಳಿದ್ದಾರೆ ಎಂದು ಥಾಪರ್ ಬರೆದಿದ್ದಾರೆ. "ನಾನು ನ್ಯೂಯಾರ್ಕ್ ಗೆ ಹೋಗಿ ಚಿಕಿತ್ಸೆ ಪಡೆದು ಇಂದು ಜೀವಂತವಾಗಿರುವುದಕ್ಕೆ ರಾಹುಲ್ ಗಾಂಧಿ ಕಾರಣ" ಎಂದು ಹೇಳಿದ್ದರು.


ವಾಸ್ತವವಾಗಿ, ಅವರು ನ್ಯೂಯಾರ್ಕ್ ನಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಹಿಂದಿರುಗಿದ ಬಳಿಕ ಇಬ್ಬರೂ ನಾಯಕರು ಯಾರೊಂದಿಗೂ ಈ ಘಟನೆಯ ಬಗ್ಗೆ ಉಲ್ಲೇಖಿಸಲಿಲ್ಲ. ಈ ಸಂದರ್ಭದಲ್ಲಿ, ಅಟಲ್' ಜೀ ಅಂಚೆ ಪತ್ರ ಕಳುಹಿಸುವ ಮೂಲಕ ರಾಜೀವ್ ಗಾಂಧಿಯವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ರಾಜೀವ್ ಗಾಂಧಿಯವರ ಮರಣದ ನಂತರ, ಅಟಲ್ ಬಿಹಾರಿ ವಾಜಪೇಯಿ ಸ್ವತಃ ಕರಣ್ ಥಾಪರ್ ಕಾರ್ಯಕ್ರಮದಲ್ಲಿ ಈ ವಿಷಯದ ಬಗ್ಗೆ ಹೇಳಿದಾಗ, ಇಡೀ ಜಗತ್ತಿಗೆ ಅದರ ಬಗ್ಗೆ ತಿಳಿಯಿತು.



ಇಂದಿರಾ ಗಾಂಧಿಯನ್ನು 'ದುರ್ಗಾ' ಎಂದು ಕರೆದಿದ್ದ ಅಟಲ್ ಬಿಹಾರಿ ವಾಜಪೇಯಿ?
1971 ರಲ್ಲಿ ಇಂಡೋ-ಪಾಕ್ ಯುದ್ಧದ ಹಿನ್ನೆಲೆಯಲ್ಲಿ, ಅಟಲ್ ಬಿಹಾರಿ ವಾಜಪೇಯಿ ಅವರ ಭಾಷಣದಲ್ಲಿ ಇಂದಿರಾ ಗಾಂಧಿಯನ್ನು ಸಂಸತ್ತಿನಲ್ಲಿ "ದುರ್ಗಾ" ಎಂದು ಕರೆದರು. ಆ ಸಮಯದಲ್ಲಿ ಅವರು ವಿರೋಧ ಪಕ್ಷದ ನಾಯಕರಾಗಿದ್ದರೂ, ಯುದ್ಧದಲ್ಲಿ ಭಾರತದ ಗಮನಾರ್ಹ ಯಶಸ್ಸಿನಿಂದಾಗಿ ಅವರು ಇಂದಿರಾ ಗಾಂಧಿಯವರನ್ನು ದುರ್ಗಾ ಎಂದು ಕರೆದರು. ಆ ಯುದ್ಧದಲ್ಲಿ ಬಾಂಗ್ಲಾದೇಶ ಉದಯಿಸಿತು ಮತ್ತು ಪಾಕಿಸ್ತಾನದ 93,000 ಸೈನಿಕರನ್ನು ಭಾರತೀಯ ಸೇನೆ ಬಂಧಿಸಿತು. ಅದಾಗ್ಯೂ, ನಂತರದ ದಿನಗಳಲ್ಲಿ ವಾಜಪೇಯಿ ಇಂತಹ ಹೇಳಿಕೆಯನ್ನು ನೀಡಿದ್ದರೆ ಅಥವಾ ಇಲ್ಲವೇ? ಎಂಬ ವಿವಾದ ಸೃಷ್ಟಿಯಾಗಿತ್ತು.


ಈ ಬಗ್ಗೆ ಹಿರಿಯ ಪತ್ರಕರ್ತ ವಿಜಯ್ ತ್ರಿವೇದಿ ಅವರ ಪುಸ್ತಕ "ಹರ್ ನಹಿ ಮಾನೂಂಗ- ಏಕ್ ಅಟಲ್ ಜೀವನ್ ಗಾಥಾ" ದಲ್ಲಿ ಈ ವಿಷಯದ ಬಗ್ಗೆ ಉಲ್ಲೇಖಿಸಲಾಗಿದೆ. ಒಂದು ಸಭೆಯಲ್ಲಿ ವಾಜಪೇಯಿ ಅವರು, "ಇಂದಿರಾ ಅವರ ತಂದೆ ನೆಹರೂ ಅವರಿಂದ ಏನನ್ನೂ ಕಲಿಯಲಿಲ್ಲ. ನಾನು ಅವರನ್ನು ದುರ್ಗಾ ಎಂದು ಕರೆದುದರ ಬಗ್ಗೆ ನನಗೆ ಬೇಸರವಿದೆ" ಎಂದು ಹೇಳಿರುವುದನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.


ಈ ಘಟನೆಯ ಬಳಿಕ ಸುಮಾರು ಎರಡು ದಶಕಗಳ ನಂತರ, ವಾಜಪೇಯಿ ದೇಶದ ಪ್ರಧಾನಮಂತ್ರಿಯಾಗಿದ್ದಾಗ, ಪ್ರಸಿದ್ಧ ಟಿವಿ ಪತ್ರಕರ್ತ ರಜತ್ ಶರ್ಮಾ ಅವರಿಗೆ ಸಂದರ್ಶನವೊಂದರಲ್ಲಿ ಅವರು ದುರ್ಗಾ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದರು. ಸಂದರ್ಶನದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಅವರನ್ನು ದುರ್ಗಾ ಎಂದು ಹೇಳಲಿಲ್ಲ. ಆದರೆ ಕೆಲವು ಪತ್ರಿಕೆಗಳು ಈ ರೀತಿಯ ಸುದ್ದಿಗಳನ್ನು ಅವರು ಕೇಳಿದ ಆಧಾರದ ಮೇಲೆ ಮುದ್ರಿಸಿಕೊಂಡವು. ನಾನು ಮರುದಿನ ಅದನ್ನು ನಿರಾಕರಿಸಿದ್ದೇನೆ, ಆದರೂ ಎಲ್ಲೋ ಒಂದು ಮೂಲೆಯಲ್ಲಿ ಅದನ್ನು ಮರುಸಂಪರ್ಕಿಸಲಾಗುತ್ತಿದೆ ಎಂದು ಹೇಳಿದ್ದರು.



ನೆಹರೂ ಅವರೊಂದಿಗಿನ ಸಂಬಂಧ
1957 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ಬಲರಾಂಪುರದ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಬಂದಾಗ, ಅವರ ಭಾಷಣಗಳು ಆಗಿನ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರನ್ನು ಪ್ರಭಾವಿಸಿತು. ಪಂಡಿತ್ ನೆಹರೂ ವಿದೇಶಾಂಗ ವ್ಯವಹಾರಗಳಲ್ಲಿ ವಾಜಪೇಯಿ ಅವರ ಅಪಾರ ಹಿಡಿತವನ್ನು ಮನಗಂಡರು. ಆ ಸಮಯದಲ್ಲಿ, ವಾಜಪೇಯಿ ಅವರು ಲೋಕಸಭೆಯಲ್ಲಿ ಕೊನೆಯ ಬೆಂಚುಗಳಲ್ಲಿ ಕುಳಿತುಕೊಳ್ಳುತ್ತಿದ್ದರು. ಅದಾಗ್ಯೂ, ಪಂಡಿತ್ ನೆಹರೂ ಅವರ ಭಾಷಣಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದರು.


ಹಿರಿಯ ಪತ್ರಕರ್ತ ಕಿಂಗ್ ಶುಕ್ ನಾಗ್, ಈ ಸ್ಟೇಟ್ಸ್ಮನ್ ನಾಯಕರ ಸಂಬಂಧಕ್ಕೆ ಸಂಬಂಧಿಸಿದ ಕೆಲವು ವಿಷಯಗಳ ಬಗ್ಗೆ ತಮ್ಮ ಪುಸ್ತಕ 'ಅಟಲ್ ಬಿಹಾರಿ ವಾಜಪೇಯಿ-ಎ ಮ್ಯಾನ್ ಫಾರ್ ಆಲ್ ಸೀಸನ್' ನಲ್ಲಿ ಉಲ್ಲೇಖಿಸಿದ್ದಾರೆ. ವಾಸ್ತವವಾಗಿ, ಬ್ರಿಟೀಷ್ ಪ್ರಧಾನಿ ಭಾರತಕ್ಕೆ ಬಂದಾಗ, ಪಂಡಿತ್ ನೆಹರೂ ಅವರು ವಾಜಪೇಯಿ ಅವರನ್ನು ವಿಶೇಷ ಶೈಲಿಯಲ್ಲಿ ಪರಿಚಯಿಸಿದಾಗ, "ಅವರು ವಿಪಕ್ಷದ ಉದಯೋನ್ಮುಖ ಯುವ ನಾಯಕರು. ಯಾವಾಗಲೂ ನನ್ನನ್ನು ಟೀಕಿಸುತ್ತಾರೆ, ಆದರೆ ಇವರನ್ನು ನಾನು ಭವಿಷ್ಯದ ಅನೇಕ ಸಾಧ್ಯತೆಗಳನ್ನು ನೋಡುತ್ತೇನೆ" ಎಂದು ಹೇಳಿದ್ದರು ಎಂಬುದನ್ನು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.


ಅಂತೆಯೇ, ಪಂಡಿತ್ ನೆಹರೂ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಭವಿಷ್ಯದ ಪ್ರಧಾನ ಮಂತ್ರಿ ಎಂದು ವಿದೇಶಿ ಅತಿಥಿಯೋಬ್ಬರಿಗೆ ಪರಿಚಯಿಸಿದ್ದರು ಎಂದು ಹೇಳಲಾಗುತ್ತದೆ.