ದೆಹಲಿ : ಬಾಬಾ ಕಾ ಡಾಬಾ (Baba Ka Dhaba) ಖ್ಯಾತಿಯ ತಾತ ಕಾಂತ ಪ್ರಸಾದ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ.. ಸೋಷಿಯಲ್ ಮೀಡಿಯಾದ (Social Media) ಇತ್ತೀಚಿನ ಸೆನ್ಸೇಶನ್ ಕಾಂತಾ ಪ್ರಸಾದ್. ಸೋಷಿಯಲ್ ಮೀಡಿಯಾ ಓರ್ವ ವ್ಯಕ್ತಿಯ ಬದುಕನ್ನು ಹೇಗೆ ಬದಲಿಸಬಲ್ಲದು ಎಂಬುದನ್ನು ನಿರೂಪಿಸಿದ್ದು, ಬಾಬಾ ಕಾ ಡಾಬಾ ಪ್ರಕರಣ. ದೆಹಲಿಯ ರಸ್ತೆ ಬದಿಯಲ್ಲಿ ಡಾಬಾ ನಡೆಸಿಕೊಂಡು ಬದುಕುತ್ತಿದ್ದವರು 80 ವರ್ಷದ ಕಾಂತಾಪ್ರಸಾದ್ ದಂಪತಿ. 


COMMERCIAL BREAK
SCROLL TO CONTINUE READING

ಕೊರೋನಾ ಕಾರಣದಿಂದ ಬದುಕು ಅಲ್ಲೋಲ ಕಲ್ಲೋಲ ಆಗಿ ಹೋಗಿತ್ತು. ಜೀವನ ದುಸ್ತರ ಆಗಿತ್ತು. ಲಾಕ್ ಡೌನ್ ನಂತರ ಬದುಕು ರೂಪಿಸಿಕೊಳ್ಳಲು ದೆಹಲಿಯಲ್ಲಿ ಹೆಣಗಾಡುತ್ತಿದ್ಚವರಲ್ಲಿ ಕಾಂತಾ ಪ್ರಸಾದ್ (Kanta Prasad) ಕೂಡಾ ಒಬ್ಬರು.  ಯುಟ್ಯೂಬರ್ ಗೌರವ್ ವಾಸನ್ (Gaurav Wasan)  ಬಾಬಾ ಬದುಕನ್ನು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು, ಸಹಾಯ ಮಾಡುವಂತೆ ಜನರನ್ನು ಕೋರಿದ್ದರು.  ಸಾಕಷ್ಟು ಮಂದಿ ಬಾಬಾ  ಸಂಕಷ್ಟಕ್ಕೆ ಮರುಗಿದ್ದರು. ಅವರ ಕಷ್ಟಕ್ಕೆ ತಮ್ಮಿಂದಾದಷ್ಟು ಸಹಾಯ ಮಾಡಿದ್ದರು. ವ್ಯಾಪಾರವಿಲ್ಲದೇ ಸೊರಗಿದ್ದ ಕಾಂತಾ ಪ್ರಸಾದ್ ಅವರ ದೆಹಲಿಯ ಮಾಲವೀಯ ನಗರದ ಡಾಬಾ ಮರುಕ್ಷಣವೇ ಜನರಿಂದ ತುಂಬಿ ಹೋಯಿತು.  ಕಾಂತಾ ಪ್ರಸಾದ್ ದಂಪತಿಗೆ ನೆರವಿನ ಮಹಾಪೂರ ಹರಿದು ಬಂತು. 


ಯೂಟ್ಯೂಬ್‌ನಲ್ಲಿ ಈವರೆಗಿನ ಅತಿದೊಡ್ಡ ದಾಖಲೆ, 24 ಗಂಟೆಗಳಲ್ಲಿ ವಿಶ್ವಪ್ರಸಿದ್ಧವಾದ ವಿಡಿಯೋ


ಬಾಬಾ ಕಾ ಡಾಬಾ ಪ್ರಕರಣದಲ್ಲಿ ಟ್ವಿಸ್ಟ್..!
ಬಾಬಾ ಕಾ ಡಾಬಾ  ಪ್ರಕರಣಕ್ಕೆ ಈಗ ಮತ್ತೊಂದು ಟ್ವಿಸ್ಟ್ ಬಂದಿದೆ. ಕಾಂತಾ ಪ್ರಸಾದ್ ಯುಟ್ಯೂಬರ್ ಗೌರವ್ ವಾಸನ್ ವಿರುದ್ಧವೇ ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದ್ದಾರೆ. ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.  ನನ್ನ ಕಷ್ಟಕ್ಕೆ ಸ್ಪಂದಿಸಿ ಬಂದ ಲಕ್ಷಾಂತರ ರೂಪಾಯಿ ಹಣದಲ್ಲಿ ಮೋಸ ನಡೆದಿದೆ ಎಂದು ಆರೋಪಿಸಿದ್ದಾರೆ.  ಜನರು ನನಗೆ ನೀಡಿದ್ದ ಹಣ ಗೌರವ್ ವಾಸನ್ ಪತ್ನಿಯ ಖಾತೆಗೆ ಜಮೆ ಆಗಿದೆ ಎಂದು ಹೇಳಿದ್ದಾರೆ. ಗೌರವ್ ಉದ್ದೇಶಪೂರ್ವಕವಾಗಿಯೇ ದಾನಿಗಳಿಗೆ ತನ್ನ ಪತ್ನಿ, ಸಂಬಂಧಿಕರು ಹಾಗೂ ಸ್ನೇಹಿತರ ನಂಬರ್ ಕೊಟ್ಟಿದ್ದು, ದಾನದ ರೂಪದಲ್ಲಿ ಬಂದ ಹಣದ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.  ದಾನದ ರೂಪದಲ್ಲಿ ಬಂದಿರುವ ಹಣದ ವಿವರ ನೀಡುವಂತೆ ಎಷ್ಟುಹೇಳಿದರೂ, ಯಾವುದೇ ವಿವರ ಕೊಡಲು ಗೌರವ್ ಮುಂದೆ ಬರುತ್ತಿಲ್ಲ. ನನಗೆ ಕೇವಲ ಎರಡು ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಉಳಿದ ಹಣ ಏನಾಯಿತು ಗೊತ್ತಿಲ್ಲ. ಹಾಗಾಗಿ ಗೌರವ್ ವಿರುದ್ಧ ವಂಚನೆ, ವಿಶ್ವಾಸದ್ರೋಹ ಹಾಗೂ ಒಳಸಂಚಿನ ಆರೋಪ ಮಾಡಿದ್ದಾರೆ ಕಾಂತಾ ಪ್ರಸಾದ್.


ಟಿಕ್‌ಟಾಕ್‌ಗೆ ಟಕ್ಕರ್ ನೀಡಲು ಮುಂದಾದ Youtube
 
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು (Delhi Police) ಕಾಂತಾ ಪ್ರಸಾದ್ ಎಂಬವರು ದೂರು ಸಲ್ಲಿಸಿದ್ದಾರೆ. ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಇನ್ನೂ ಎಫ್ ಐಆರ್ ದಾಖಲಿಸಿಲ್ಲ ಎಂದು ಹೇಳಿದ್ದಾರೆ. 


ಈ ಪ್ರಕರಣ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗುತ್ತಿದೆ. ನೆಟ್ಟಿಗರು ಕೂಡಾ ಈ ಪ್ರಕರಣದಲ್ಲಿ ಎರಡು ರೀತಿಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಕೆಲವರು ಬಾಬಾ ಕಾ ಡಾಬಾ ತಾತನಿಗೆ ಮೋಸ  ಆಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.  ಇನ್ನು ಕೆಲವರು ಗೌರವ್ ವಿರುದ್ಧ ಆರೋಪ ಮಾಡುವ ಮುನ್ನ ಕೂಲಂಕುಷವಾಗಿ ತನಿಖೆ ನಡೆಸಬೇಕೆಂದು ಹೇಳಿದ್ದಾರೆ.