ಕೋಟಾ: ಅಂತರರಾಷ್ಟ್ರೀಯ ಯೋಗ ದಿನದಂದು, ಯೋಗ ಗುರು ರಾಮ್ದೇವ್ ಅವರು ಗಿನ್ನೀಸ್ ವಿಶ್ವದಾಖಲೆಯನ್ನು ನಿರ್ಮಿಸುವ ಉದ್ದೇಶದಿಂದ ಸುಮಾರು 1.05 ಲಕ್ಷ ಸಮ್ಮುಖದಲ್ಲಿ ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದಾದ ನಂತರ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ರಾಮ್ ದೇವ್, "ಯೋಗವನ್ನು ಒಟ್ಟಾಗಿ 1.05 ಲಕ್ಷಕ್ಕೂ ಅಧಿಕ ಜನರು ಒಟ್ಟಿಗೆ ಯೋಗ ಮಾಡಿದ ದಾಖಲೆಗಾಗಿ ಅವರಿಗೆ ಪ್ರಮಾಣಪತ್ರವನ್ನು ಈಗಾಗಲೇ ನೀಡಲಾಗಿದೆ.ಹೆ. ಸೂರ್ಯ ನಮಸ್ಕಾರರು, ಪುಷ್-ಅಪ್ಗಳು, ವಿವಿಧ ಬಂಗಿಗಳನ್ನು ಪ್ರದರ್ಶಿಸಿದರು.


ಇದೆ ವೇಳೆ ಪತಂಜಲಿ ಆಯುರ್ವೇದ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ರಾಮ್ ದೇವ್ ಮತ್ತು ಪತಂಜಲಿ ಯೋಗಪೀಠದ ಸಹ-ಸಂಸ್ಥಾಪಕ ಆಚಾರ್ಯ ಬಾಲಕೃಷ್ಣ ಮತ್ತು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧಿಯಾ ಈ ಯೋಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಏತನ್ಮಧ್ಯೆ, ಉಪಾಧ್ಯಕ್ಷ ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜ್ನಾಥ್ ಸಿಂಗ್, ಸ್ಮೃತಿ ಇರಾನಿ, ಪಿಯುಶ್ ಗೋಯಲ್, ಪ್ರಕಾಶ್ ಜಾವಡೇಕರ್ ಮತ್ತು ಸುರೇಶ್ ಪ್ರಭು ಅವರು ದೇಶದಾದ್ಯಂತ ವಿವಿಧ ಭಾಗಗಳಲ್ಲಿ ಯೋಗವನ್ನು ಪ್ರದರ್ಶಿಸಿದರು.


ಜೂನ್ 21, 2015 ರಂದು ವಿಶ್ವದಾದ್ಯಂತ ಮೊದಲ ಬಾರಿಗೆ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಆಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 30,000 ಕ್ಕಿಂತ ಹೆಚ್ಚು ಜನರು ಹೊಸದಿಲ್ಲಿಯಲ್ಲಿ ರಾಜ್ಪಥ್ನಲ್ಲಿ ಯೋಗದ ಆಸನಗಳನ್ನು ಪ್ರದರ್ಶಿಸಿದರು.27 ಸೆಪ್ಟೆಂಬರ್ 2014 ರಂದು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯ (ಯುಎನ್ಜಿಎ) ಭಾಷಣದಲ್ಲಿ ಪ್ರಧಾನಿ ಮೋದಿ ಅಂತರರಾಷ್ಟ್ರೀಯ ದಿನದ ಯೋಗದ ಕಲ್ಪನೆಯನ್ನು ಮೊದಲ ಬಾರಿಗೆ ಪ್ರಸ್ತಾಪಿಸಿದ್ದರು.