ನವದೆಹಲಿ: ವಿಶ್ವ ಹಾಗೂ ಭಾರತದಲ್ಲಿ ಮುಂದುವರೆದಿರುವ ಕೊರೊನಾ ವೈರಸ್ ಸಂಕಷ್ಟದ ನಡುವೆ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕ್ರಮ PM CARES fund ಬಳಿಕ ಹಲವು ಸ್ಥಿತಿವಂತರು ಈ ನಿಧಿಗೆ ತಮ್ಮ ಕೊಡುಗೆಗಳನ್ನು ಘೋಶಿಸುತ್ತಿದ್ದಾರೆ. ಇದೀಗ ಈ ಪಟ್ಟಿಯಲ್ಲಿ ಯೋಗ ಗುರು ಬಾಬಾ ರಾಮದೇವ್ ಕೂಡ ಸೇರ್ಪಡೆಯಾಗಿದ್ದಾರೆ. ಬಾಬಾ ರಾಮದೇವ್ ತಮ್ಮ ಪತಂಜಲಿ ಸಂಸ್ಥೆಯ ವತಿಯಿಂದ ರೂ. 25 ಕೋಟಿ ರೂ. ಈ ನಿಧಿಗೆ ಕೊರುಗೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ ಯೋಗ ಗುರು ಬಾಬಾ ರಾಮದೇವ್, ಪ್ರಧಾನಿ ನರೇಂದ್ರ ಮೋದಿ ಆರಂಭಿಸಿರುವ PMCARES ನಿಧಿಗೆ ತಮ್ಮ ಸಂಸ್ಥೆ ಪತಂಜಲಿ 25 ಕೋಟಿ ರೂ. ಕೊಡುಗೆಯನ್ನು ನೀಡಲಿದೆ ಎಂದು ಹೇಳಿದ್ದಾರೆ.


ಗಾಯತ್ರಿ ಪರಿವಾರದ ಮುಖ್ಯಸ್ಥ ಡಾ. ಪ್ರವೀಣ್ ಪಾಂಡ್ಯಾ ಕೂಡ 1 ಕೋಟಿ ರೂ. ಕೊಡುಗೆ ನೀಡಿದ್ದಾರೆ
ಕೊರೊನಾ ಸಂಕಷ್ಟದ ಹಿನ್ನೆಲೆ ಹರಿದ್ವಾರದ ಶಾಂತಿಕುಂಜ್ ಸಂಸ್ಥಾನ, ಗಾಯತ್ರಿ ಪರಿವಾರದ ಮುಖ್ಯಸ್ಥ ಡಾ. ಪ್ರವೀಣ್ ಪಾಂಡ್ಯಾ ಅವರೂ ಕೂಡ ಇತ್ತೀಚಿಗೆ ಪ್ರಧಾನಿ ಪರಿಹಾರ ನಿಧಿಗೆ ಒಂದು ಕೋಟಿ ರೂ. ಕೊಡುಗೆಯನ್ನು ನೀಡಿದ್ದಾರೆ.


TVS ಮೋಟರ್ಸ್ ಕೂಡ 'PM-CARES' ಕೋಶಕ್ಕೆ 25 ಕೋಟಿ ರೂ. ಕೊಡುಗೆ ನೀಡಲಿದೆ.
TVS ಮೋಟರ್ಸ್ ಕಂಪನಿ ಸೋಮವಾರ ಕೊವಿಡ್-19  ಮಹಾಮಾರಿ ವಿರುದ್ಧ ಹೋರಾಟ ನಡೆಸಲು ಪ್ರಧಾನಿ ಪರಿಹಾರ ನಿಧಿಗೆ 25 ಕೋಟಿ  ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. TVS ಕ್ರೆಡಿಟ್ ಸರ್ವಿಸೆಸ್ ಲಿಮಿಟೆಡ್, ಸುಂದರಂ-ಕ್ಲೇಟನ್ ಲಿಮಿಟೆಡ್ ಹಾಗೂ ಸಮೂಹದ ಇತರೆ ಕಂಪನಿಗಳ ವತಿಯಿಂದ ಈ ಕೊಡುಗೆ ನೀಡಲಿದೆ ಎಂದು ಹೇಳಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಂಪನಿ, ಈ ಕೊಡುಗೆ  ಸಮೂಹದ CSR ಶಾಖೆ ಶ್ರೀನಿವಾಸ್ ಸರ್ವಿಸೆಸ್ ಟ್ರಸ್ಟ್ (SST) ಮಾಧ್ಯಮದ ಮೂಲಕ ನಡೆಸಲಾಗುವ ಚಟುವಟಿಗೆಗಳನ್ನು ಇದರಲ್ಲಿ ಶಾಮೀಲಾಗಿಲ್ಲ ಎಂದಿದೆ. 


L&T ಕಂಪನಿ PM ಕೆಯರ್ಸ್ ಫಂಡ್ ಗೆ 150 ಕೋಟಿ ಕೊಡುಗೆ ನೀಡುವುದಾಗಿ ಹೇಳಿದೆ 
ಇಂಜಿನಿಯರಿಂಗ್ ಹಾಗೂ ನಿರ್ಮಾಣ ಕ್ಷೇತ್ರದ ಪ್ರಮುಖ ಕಂಪನಿ ಲಾರ್ಸನ್ ಅಂಡ್ ಟರ್ಬೋ ಸೋಮವಾರ ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸಲು ಪ್ರಧಾನಿ ಪರಿಹಾರ ನಿಧಿಗೆ ರೂ.150 ಕೋಟಿ ಪರಿಹಾರ ನೀಡುವುದಾಗಿ ಘೋಷಿಸಿದೆ. ಅಷ್ಟೇ ಅಲ್ಲ ಸುಮಾರು 1.60 ಲಕ್ಷ ಗುತ್ತಿಗೆ ಆಧಾರದ ಕಾರ್ಮಿಕರಿಗೆ ಸಹಾಯ ಧನವಾಗಿ ಪ್ರತಿ ತಿಂಗಳು ರೂ.500 ಕೋಟಿ ಪ್ರಸ್ತಾಪ ಸಲ್ಲಿಸಿರುವುದಾಗಿ ಹೇಳಿಕೊಂಡಿದೆ.