ಕಳೆದ ಕೆಲವು ವರ್ಷಗಳಲ್ಲಿ,ಭೂಮಿ ವಿನಾಶದ ಬಗ್ಗೆ ಅನೇಕ ವದಂತಿಗಳು ಕೇಳಿ ಬರುತ್ತಿವೆ. ಆದರೆ ಪ್ರತಿ ಇದು ಕೇವಲ ವದಂತಿಯಷ್ಟೇ ಎನ್ನುವುದು ಸಾಬೀತಾಗಿದೆ. ತಮ್ಮ ಭವಿಷ್ಯವಾಣಿಗಳಿಗೆ ಪ್ರಸಿದ್ಧರಾದ ಬಾಬಾ ವೆಂಗಾ ಮತ್ತು ನಾಸ್ಟ್ರಾಡಾಮಸ್  ಮುಂಬರುವ ವರ್ಷಗಳಲ್ಲಿ ಪ್ರಳಯ ಸಂಭವಿಸುವ ಬಗ್ಗೆ ಮಾತನಾಡಿದ್ದಾರೆ. ಇದಾದ  ಬೆನ್ನಲೇ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ದಕ್ಷಿಣ ಕ್ಯಾಲಿಫೋರ್ನಿಯಾದ ಎನ್ಸಿನಿಟಾಸ್ ಬೀಚ್ ನಲ್ಲಿ ಸತತ ಮೂರನೇ ಬಾರಿಗೆ  ಸತ್ತ ಓರ್ಫಿಶ್ ಕಂಡು ಬಂದಿದೆ. ಜಪಾನಿನ ಜಾನಪದ ನಂಬಿಕೆಯ ಪ್ರಕಾರ, ಇದು ತ್ಯಂತ ಕೆಟ್ಟ ಶಕುನ. ಜಪಾನಿನಲ್ಲಿ ಈ ಮೀನನ್ನು "ಡೂಮ್ಸ್ಡೇ ಫಿಶ್" ಅಥವಾ "ಫಿಶ್ ಆಫ್ ದಿ ಲಾಸ್ಟ್ ಡೇ" ಎಂದು ಕರೆಯಲಾಗುತ್ತದೆ. ಸಾಮಾನ್ಯ ಭಾಷೆಯಲ್ಲಿ ಇದನ್ನು "ಪ್ರಳಯದ ಮೀನು" ಎಂದು ಕರೆಯಲಾಗುತ್ತದೆ.


COMMERCIAL BREAK
SCROLL TO CONTINUE READING

ದಕ್ಷಿಣ ಕ್ಯಾಲಿಫೋರ್ನಿಯಾದ ಎನ್ಸಿನಿಟಾಸ್ ಬೀಚ್‌ನಲ್ಲಿ ಸತ್ತ ಓರ್ಫಿಶ್ ಪತ್ತೆಯಾಗಿದ್ದು, ಈ ವರ್ಷ ಮೂರನೇ ಬಾರಿಗೆ ಈ ಅಪರೂಪದ ಮೀನು ಮೃತ ಸ್ಥಿತಿಯಲ್ಲಿ ಕಾಣಿಸಿಕೊಂಡಿದೆ. ಈ ಮೀನು ಸುಮಾರು 10 ಅಡಿ ಉದ್ದವಿದ್ದು ನವೆಂಬರ್ 6 ರಂದು ಪತ್ತೆಯಾಗಿತ್ತು. 


ಇದನ್ನೂ ಓದಿ :ಬಿಗ್ ಟೆಕ್ ಕಂಪನಿಗಳಿಂದ ಡಿಜಿಟಲ್ ಮಾಧ್ಯಮ ಸಂಸ್ಥೆಗಳಿಗೆ ಬೆದರಿಕೆ - ಕೇಂದ್ರ ಸರ್ಕಾರ


ಕ್ಯಾಲಿಫೋರ್ನಿಯಾದಲ್ಲಿ ಕೆಲವೇ ತಿಂಗಳುಗಳಲ್ಲಿ ಕಾಣಿಸಿಕೊಂಡ ಮೂರನೇ ಮೀನು ಇದಾಗಿದೆಯಾದರೂ, ಜಪಾನಿನ ಜಾನಪದ ಪ್ರಕಾರ ಇದನ್ನು ಕೆಟ್ಟ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಇದನ್ನು ಮುಂಬರುವ ಭೂಕಂಪದ ಮುನ್ನುಡಿ ಎಂದು ಹೇಳಲಾಗುತ್ತದೆ. 


ಜಪಾನಿನ ಜಾನಪದ ಪ್ರಕಾರ, ಓರ್ಫಿಶ್ ಸಮುದ್ರ ದೇವರು ರ್ಯುಜಿನ್ ಸೇವಕರನ್ನು ಪ್ರತಿನಿಧಿಸುತ್ತದೆ. ಆದ್ದರಿಂದ ಇದನ್ನು "ರ್ಯುಗು ನೋ ತ್ಸುಕೈ" ಎಂದೂ ಕರೆಯುತ್ತಾರೆ. ಅಂದರೆ ಸಮುದ್ರ ದೇವರ ಅರಮನೆಯ ಸಂದೇಶವಾಹಕ.


ಓರ್ಫಿಶ್ ಹೇಗೆ ಸತ್ತಿರುವುದು ಹೇಗೆ ? : 
ಎನ್ಸಿನಿಟಾಸ್ ಕರಾವಳಿಯಲ್ಲಿ ಸತ್ತು ಬಿದ್ದಿರುವ ಓರ್ಫಿಶ್ ಸಾವಿಗೆ ಕಾರಣ ಏನು  ಎನ್ನುವುದು ತಿಳಿದು ಬಂದಿಲ್ಲ. ಆದರೆ ಅದರ ಸಾವಿನ ಕಾರಣವನ್ನು ಪತ್ತೆ ಹಚ್ಚಲು  ಶವಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಮೀನನ್ನು ನಂತರ ಸಿಸ್ರಿಪ್ಸ್‌ನ ಮೆರೈನ್ ವರ್ಟಿಬ್ರೇಟ್ ಕಲೆಕ್ಷನ್‌ನಲ್ಲಿ ಭವಿಷ್ಯದ ಅಧ್ಯಯನಕ್ಕಾಗಿ ಸಂರಕ್ಷಿಸಲಾಗುವುದು. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ಆಗಸ್ಟ್‌ನಲ್ಲಿ, ಸ್ಯಾನ್ ಡಿಯಾಗೋದ ಲಾ ಜೊಲ್ಲಾ ಕೋವ್‌ನಲ್ಲಿ 12 ಅಡಿ ಉದ್ದದ ಓರ್‌ಫಿಶ್ ಕಂಡುಬಂದಿದೆ. ನಂತರ ಸೆಪ್ಟೆಂಬರ್ ನಲ್ಲಿ ಆರೆಂಜ್ ಕೌಂಟಿಯ ಹಂಟಿಂಗ್ಟನ್ ಬೀಚ್ ನಲ್ಲಿ ಮತ್ತೊಂದು ಸತ್ತ ಓರ್ಫಿಶ್ ಕಂಡುಬಂದಿದೆ. ವಿಜ್ಞಾನಿಗಳ ಪ್ರಕಾರ, ಓರ್ಫಿಶ್ ಆಳವಾದ ಸಮುದ್ರದ ಮೀನಾಗಿದ್ದು ಅವುಗಳ ಸಂಖ್ಯೆ ತುಂಬಾ ಕಡಿಮೆ. ಕಳೆದ 100 ವರ್ಷಗಳಲ್ಲಿ, ದಕ್ಷಿಣ ಕ್ಯಾಲಿಫೋರ್ನಿಯಾ ನೀರಿನಲ್ಲಿ ಕೇವಲ 25 ಓರ್ಫಿಶ್ ಗಳನ್ನು  ಮಾತ್ರ ನೋಡಲಾಗಿದೆ.


ವಿಜ್ಞಾನಿಗಳು ಹೇಳುವುದೇನು ?:
ಕಳೆದ ಕೆಲವು ತಿಂಗಳುಗಳಲ್ಲಿ ಮೂರು ಓರ್ಫಿಶ್ ಕರಾವಳಿಯನ್ನು ಹೇಗೆ ತಲುಪಿದೆ ಎನ್ನುವುದನ್ನು ಊಹಿಸಲು ವಿಜ್ಞಾನಿಗಳಿಗೂ ಸಾಧ್ಯವಾಗುತ್ತಿಲ್ಲ. SIPRIPS ತಜ್ಞ ಬೆನ್ ಫ್ರೇಬಲ್ ಪ್ರಕಾರ, ಓರ್ಫಿಶ್ ದಡ ತಲುಪಲು ಕಾರಣವೆಂದರೆ ಎಲ್ ನಿನೋ ಮತ್ತು ಲಾ ನಿನಾದಂತಹ ಹವಾಮಾನ ಪರಿಸ್ಥಿತಿಗಳ ಪರಿಣಾಮ. ಸಮುದ್ರದ ಪರಿಸ್ಥಿತಿಯಲ್ಲಿನ ಬದಲಾವಣೆಗಳು ಮತ್ತು ನಮ್ಮ ಕರಾವಳಿಯ ಸಮೀಪವಿರುವ ಓರ್ಫಿಶ್ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಈ ಆಳ ಸಮುದ್ರದ ಮೀನುಗಳು ದಡಕ್ಕೆ ಬರಲು ಕಾರಣವಾಗಬಹುದು ಎಂದು ಹೇಳಿದ್ದಾರೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.