ಕೊರೆಯುವ ಚಳಿಗೆ ತತ್ತರಿಸಲಿದೆ ರಾಜ್ಯ !ಡಿಸೆಂಬರ್, ಜನವರಿಯಲ್ಲಿ ದಾಖಲಾಗಲಿದೆ 8 ರಿಂದ 10 ಡಿಗ್ರಿ ಉಷ್ಣಾಂಶ !ಆವರಿಸಲಿದೆ ಶೀತ ವಾತಾವರಣ

ಫೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಎನ್ನಲಾಗಿದೆ. ಹೀಗಾಗಿ ಡಿಸೆಂಬರ್ ನಿಂದ ಮಾರ್ಚ್ ವರೆಗೂ ಉಷ್ಣಾಂಶದಲ್ಲಿ ಇಳಿಕೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 

ಬೆಂಗಳೂರು : ಇದೀಗ ಚಳಿಗಾಲದಲ್ಲಿ ಕೂಡಾ ಉತ್ತರಭಾರತದ ಹಾಗೆ ರಾಜ್ಯದಲ್ಲಿಯೂ ಕೊರೆಯುವ ಚಳಿ ಕಾಡಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ಈ ವರ್ಷದ ಹವಾಮಾನವೇ ವಿಚಿತ್ರವಾಗಿದೆ. ಬೇಸಿಗೆಯಲ್ಲಿ  ಬಿಸಿಲ ತಾಪ ತಡೆಯುವುದೇ ಸಾಧ್ಯವಾಗದೇ ಹೋಗಿತ್ತು. ಹಿಂದೆಂದೂ ಕಾಣದ ಉರಿ ಬಿಸಿಲು ರಾಜ್ಯವನ್ನು ಬಾಧಿಸಿತ್ತು. ಮಳೆಗಾಲದಲ್ಲಿಯೂ ಹಾಗೆಯೇ. ಸಾಕು ಸಾಕು ಎನ್ನುವಷ್ಟು ಮಳೆಯಾಗಿದೆ. ಮಳೆಗಾಲ ಮುಗಿದರೂ ಇನ್ನೂ ಕೂಡಾ ಅಲ್ಲಲ್ಲಿ ಮಳೆ ಸುರಿಯುತ್ತಲೇ ಇದೆ.   

2 /6

ಇದೀಗ ಚಳಿಗಾಲದಲ್ಲಿ ಕೂಡಾ ಉತ್ತರಭಾರತದ ಹಾಗೆ ರಾಜ್ಯದಲ್ಲಿಯೂ ಕೊರೆಯುವ ಚಳಿ ಕಾಡಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ.    

3 /6

ಫೆಸಿಫಿಕ್ ಮಹಾಸಾಗರದ ಮೇಲ್ಮೈ ಉಷ್ಣಾಂಶದಲ್ಲಿ ಭಾರೀ ಇಳಿಕೆಯಾಗುವ ಸಾಧ್ಯತೆ ಎನ್ನಲಾಗಿದೆ. ಹೀಗಾಗಿ ಡಿಸೆಂಬರ್ ನಿಂದ ಮಾರ್ಚ್ ವರೆಗೂ ಉಷ್ಣಾಂಶದಲ್ಲಿ ಇಳಿಕೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. 

4 /6

ಈ ಬಾರಿ ಚಳಿಗಾಲದಲ್ಲಿ ಹವಾಮಾನ ಇಲಾಖೆಯ ಭಾಷೆಯಲ್ಲಿ ಲಾ-ನಿನೋ ಎಂದು ಕರೆಯಲ್ಪಡುವ ಕನಿಷ್ಠ ಉಷ್ಣಾಂಶ ಈ ಬಾರಿ ದಾಖಲಾಗಲಿದೆ. ನವೆಂಬರ್ ಅಂತ್ಯದಿಂದ ಡಿಸೆಂಬರ್‌ವರೆಗೂ ತಡೆಯಲಾಗದ ಚಳಿ ಇರಲಿದೆಯಂತೆ. ಜನವರಿಯಿಂದ ಮಾರ್ಚ್‌ವರೆಗೂ ಇದೇ ಉಷ್ಣಾಂಶ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

5 /6

ಉತ್ತರಭಾರತದಿಂದ ರಾಜ್ಯಕ್ಕೆ  ತಂಪು ಹವೆ ಬೀಸಲಿರುವ ಕಾರಣ, ಉಷ್ಣಾಂಶವು ಕನಿಷ್ಠ ಮಟ್ಟಕ್ಕೆ ಇಳಿಯುವ ಸಾಧ್ಯತೆಇದೆ. ಹಾಗಾಗಿ ಡಿಸೆಂಬರ್ ಹಾಗೂ ಜನವರಿಯಲ್ಲಿ ಉಷ್ಣಾಂಶ 8ರಿಂದ 10 ಡಿಗ್ರಿ ಇಳಿಯುವ ಸಾಧ್ಯತೆ ಎನ್ನಲಾಗಿದೆ.   

6 /6

ಬೆಂಗಳೂರಿನಲ್ಲಿ ಡಿಸೆಂಬರ್ ಹಾಗೂ ಜನವರಿಯಲ್ಲಿ 12ರಿಂದ 14ಡಿಗ್ರಿ ಸೆಲ್ಸಿಯಸ್ ಇಳಿಯುವ ಸಾಧ್ಯತೆ ಇದೆಯಂತೆ. ಬೆಳಗ್ಗೆ 4 ಗಂಟೆಯಿಂದ 8ಗಂಟೆಯವರೆಗೂ ಶೀತ ವಾತಾವರಣ ಸೃಷ್ಟಿಯಾಗಲಿದೆಯಂತೆ. ಇದರಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.