ಬೆಂಗಳೂರು : ಬಲ್ಗೇರಿಯನ್ ಅತೀಂದ್ರಿಯ ಬಾಬಾ ವಂಗಾ ಅವರ ಭವಿಷ್ಯವಾಣಿಗಳು ಆಗಾಗ್ಗೆ ಚರ್ಚೆಗೆ ಕಾರಣವಾಗುತ್ತಿರುತ್ತವೆ. ಸದ್ಯ ಭಾರತದ ಬಗ್ಗೆ ಅವರು ಹೇಳಿರುವ ಭವಿಷ್ಯವಾಣಿ ಒಂದು ಭಾರತೀಯರ ಕಳವಳ ಹೆಚ್ಚುವಂತೆ ಮಾಡಿದೆ. ಬಾಬಾ ವಂಗಾ ಅವರ ಭವಿಷ್ಯವಾಣಿಯ ಪ್ರಕಾರ, ಈ ವರ್ಷ ಭಾರತದಲ್ಲಿ ಗಂಭೀರ ಬಿಕ್ಕಟ್ಟು ಬರಲಿದೆ, ಇದು ದೇಶದಲ್ಲಿ ಬರಗಾಲದಂತಹ ಪರಿಸ್ಥಿತಿಗೆ ಕಾರಣವಾಗಬಹುದು. 2022 ವರ್ಷಗಳ ಹಿಂದೆ ಬಾಬಾರವರು ಅನೇಕ ಭವಿಷ್ಯವಾಣಿಗಳನ್ನು ಹೇಳಿದ್ದಾರೆ, ಅದರಲ್ಲಿ 2 ಭವಿಷ್ಯವಾಣಿಗಳು ಇಲ್ಲಿಯವರೆಗೆ ನಿಜವಾಗಿವೆಯಂತೆ.


COMMERCIAL BREAK
SCROLL TO CONTINUE READING

ಯಾರು ಈ ಬಾಬಾ ವಂಗಾ..?


ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿರುವ ಬಾಬಾ ವಂಗಾ 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದರು. ಕೇವಲ 12ನೇ ವಯಸ್ಸಿನಲ್ಲಿ ಅಪಘಾತದಲ್ಲಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡರು. ಬಾಬಾ ವಂಗಾ ತನ್ನ ಸ್ವಂತ ಕಣ್ಣುಗಳಿಂದ ನೋಡಲು ಸಾಧ್ಯವಾಗದಿದ್ದರೂ, ಭವಿಷ್ಯವನ್ನು ನೋಡುವ ವಿಶೇಷ ಶಕ್ತಿಯನ್ನು ಹೊಂದಿದ್ದಾರೆ. ದೇವರು ಅವರಿಗೆ ದಿವ್ಯ ದರ್ಶನ ನೀಡಿದ್ದನೆಂದು ಹೇಳಲಾಗುತ್ತದೆ.


ಇದನ್ನೂ ಓದಿ: Ravichandran: ಇಷ್ಟಪಟ್ಟು ಕಟ್ಟಿದ ಮನೆ ಖಾಲಿ ಮಾಡಿದ ರವಿಚಂದ್ರನ್, ಕಾರಣವೇನು ಗೊತ್ತಾ?


ಭಾರತಕ್ಕೆ ಬಾಬಾ ವಂಗಾ ಭವಿಷ್ಯ ಏನು..?


ವರದಿಯ ಪ್ರಕಾರ, ಬಾಬಾ ವಂಗಾ ಭಾರತದಲ್ಲಿ ಮಿಡತೆಗಳ ಹಾವಳಿ ಹೆಚ್ಚಾಗುತ್ತದೆ ಇದರಿಂದ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಹೇಳಿದರು. 2022 ರಲ್ಲಿ ಪ್ರಪಂಚದಾದ್ಯಂತ ತಾಪಮಾನದಲ್ಲಿ ಇಳಿಕೆಯಾಗಲಿದೆ ಎಂದು ಬಾಬಾ ವಂಗಾ ಹೇಳಿದ್ದಾರೆ, ಇದರಿಂದಾಗಿ ಮಿಡತೆಗಳ ಏಕಾಏಕಿ ಹೆಚ್ಚಾಗುತ್ತದೆ. ಈ ಮಿಡತೆಗಳ ಗುಂಪು ಭಾರತದ ಮೇಲೆ ದಾಳಿ ಮಾಡುತ್ತದೆ ಮತ್ತು ಬೆಳೆಗಳನ್ನು ನಾಶಪಡಿಸುತ್ತದೆ. ಇದು ದೇಶದಲ್ಲಿ ಕ್ಷಾಮ ಪರಿಸ್ಥಿತಿಗಳಿಗೆ ಕಾರಣವಾಗುತ್ತದೆ.


2022 ರ ಆರು ಮುನ್ಸೂಚನೆಗಳು


ಬಾಬಾ ವಂಗಾ ಅವರು 2022 ರ ವರ್ಷಕ್ಕೆ 6 ಮುನ್ಸೂಚನೆಗಳನ್ನು ನೀಡಿದ್ದಾರೆ. ಇದರಲ್ಲಿ ಸೈಬೀರಿಯಾದಿಂದ ಬಂದ ಹೊಸ ಮಾರಣಾಂತಿಕ ವೈರಸ್ ಬಿಟ್ಟು, ಏಲಿಯನ್‌ ದಾಳಿ, ಮಿಡತೆ ಹಾವಳಿ, ಕೆಲವು ದೇಶಗಳಲ್ಲಿ ಪ್ರವಾಹಗಳು ಮತ್ತು ಕೆಲವು ದೇಶಗಳಲ್ಲಿ ಬರಗಾಲದ ಬಗ್ಗೆಯೂ ಅವರು ಭವಿಷ್ಯ ನುಡಿದಿದ್ದಾರೆ. 


ಎರಡು ಭವಿಷ್ಯವಾಣಿಗಳು ನಿಜವಾಗಿವೆ


ಬಾಬಾ ವಂಗಾ ಏಷ್ಯಾದ ಕೆಲವು ದೇಶಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಿದ್ದರು, ಅದು ನಿಜವಾಗಿದೆ. ಆಸ್ಟ್ರೇಲಿಯಾದಲ್ಲಿ ಪ್ರವಾಹವು ಸಮಸ್ಯೆಯನ್ನು ಹೆಚ್ಚಿಸಿದೆ, ಪಾಕಿಸ್ತಾನದಲ್ಲಿ ಪ್ರವಾಹದಿಂದಾಗಿ ಪರಿಸ್ಥಿತಿ ಹದಗೆಡುತ್ತಿದೆ. ಇದಲ್ಲದೆ, ಇಟಲಿಯ ಅನೇಕ ನಗರಗಳು ಈ ವರ್ಷ ಬರಗಾಲದ ಸಮಸ್ಯೆಯಿಂದ ಬಳಲುತ್ತಿವೆ. ಅನೇಕ ನಗರಗಳಲ್ಲಿ ನೀರಿನ ಕೊರತೆ ಎದುರಾಗುವ ಬಗ್ಗೆ ಬಾಬಾ ವಂಗಾ ಅವರ ಭವಿಷ್ಯವಾಣಿ ನುಡಿದಿದ್ದರು. 


ಅನೇಕ ಭವಿಷ್ಯವಾಣಿಗಳು ನಿಜವಾಗಲಿಲ್ಲ


ಆದರೆ, ಬಾಬಾ ವಂಗ ಹೇಳಿದ್ದೆಲ್ಲ ನಿಜವಾಯಿತು ಎಂದಲ್ಲ. 2016 ರಲ್ಲಿ ಯುರೋಪ್‌ನಲ್ಲಿ ಒಂದು ದೊಡ್ಡ ಯುದ್ಧ ನಡೆಯಲಿದೆ, ಅದು ಇಡೀ ಖಂಡವನ್ನು ಶಾಶ್ವತವಾಗಿ ಕೊನೆಗೊಳಿಸುತ್ತದೆ. 2010 ರಿಂದ 2014 ರವರೆಗೆ ಜಗತ್ತಿನಲ್ಲಿ ಭೀಕರ ಪರಮಾಣು ಯುದ್ಧ ನಡೆಯತ್ತದೆ ಎಂದು ವಂಗ್‌ ಭವಿಷ್ಯ ನುಡಿದಿದ್ದರು. ಆದ್ರೆ ಅದು ನಿಜವಾಗಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.