ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿಯಬೇಕೆನ್ನುವ ಒತ್ತಾಸೆ  ಹಿನ್ನಲೆಯಲ್ಲಿ ಬಾಲಾಕೋಟದಲ್ಲಿರುವ ಜೈಶ್-ಎ-ಮೊಹಮ್ಮದ್ ಶಿಬಿರದ ಮೇಲೆ ವಾಯುಸೇನಾ ದಾಳಿ ಕೈಗೊಳ್ಳಲಾಗಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿಕೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

"ಈ ಸರ್ಜಿಕಲ್ ಸ್ಟ್ರೈಕ್ ದಾಳಿಯನ್ನು ಸಂಪೂರ್ಣ ಚುನಾವಣಾ ಉದ್ದೇಶಕ್ಕಾಗಿ ಮಾತ್ರ ಕೈಗೊಳ್ಳಲಾಗಿದೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಿಮಾನವನ್ನು ನಾವು ಕಳೆದುಕೊಂಡಿದ್ದೇವೆ. ಅದೃಷ್ಟವಶಾತ್ ಪೈಲೆಟ್ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಉಳಿದು ಗೌರವ ಪೂರಕವಾಗಿ ಪಾಕ್ ನಿಂದ ಮರಳಿದ್ದಾನೆ" ಎಂದು ಫಾರುಕ್ ಅಬ್ದುಲ್ಲಾ ತಿಳಿಸಿದರು. 


ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಅವರು ,ಬಿಜೆಪಿ ಎಲ್ಲ ರೀತಿಯಿಂದಲೂ ವಿಫಲವಾಗಿದೆ.ಆದ್ದರಿಂದ ಪಾಕ್ ನೊಂದಿಗೆ ಅಥವಾ ಕಾಶ್ಮಿರದಲ್ಲಿ ಆಗಾಗ ಈ ರೀತಿ ಹೊಡೆದಾಡುತ್ತಿದ್ದರೆ ಆಗ ಪ್ರಧಾನಿ ಮೋದಿ ಒಂದು ರೀತಿ ಅವತಾರ್ ತಾಳಿ ಅವರಿಲ್ಲದೆ ಭಾರತ ಉಳಿಯುವುದಿಲ್ಲ ಎನ್ನುವ ಹಾಗೆ ಬಿಂಬಿಸುವ ಪ್ರಯತ್ನ ಮಾಡುತ್ತಾರೆ ಎಂದು ತಿಳಿಸಿದರು.


ಇನ್ನು ಮುಂದುವರೆದು ಅವರು "ನಾನು ಅವರಿಗೆ ಹೇಳುವುದಿಷ್ಟೇ ಅವರು ಅಥವಾ ನಾನು ಬದುಕಿರುತ್ತೇನೋ ಇಲ್ಲವೋ, ಆದರೆ ಭಾರತ ಇದ್ದೆ ಇರುತ್ತದೆ ಮುಂದೆ ಸಾಗುತ್ತಲೇ ಇರುತ್ತದೆ ಎಂದು ಹೇಳಿದರು.