ನವದೆಹಲಿ: ನವೆಂಬರ್ 22 ರಿಂದ ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ ಭಾರತದ ಮೊದಲ ಡೇ-ನೈಟ್ ಟೆಸ್ಟ್ ಪಂದ್ಯದ ಆರಂಭಿಕ ದಿನದಂದು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸಲಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ಶೇಖ್ ಹಸೀನಾ ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಹಜರತ್ ಶಹಜಲಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಗಮಿಸಲಿದ್ದು, ಬೆಳಿಗ್ಗೆ 10: 25 ಕ್ಕೆ (ಐಎಸ್ಟಿ) ನೇತಾಜಿ ಸುಭಾಸ್ ಚಂದ್ರ ಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಶುಕ್ರವಾರ ಒಂದು ದಿನದ ಭೇಟಿಗಾಗಿ ಕೋಲ್ಕತ್ತಾದಲ್ಲಿ ಇರಲಿರುವ ಶೇಖ್, ಮಧ್ಯಾಹ್ನ 12:15 ರ ಸುಮಾರಿಗೆ ಈಡನ್ ಗಾರ್ಡನ್‌ಗೆ ತಲುಪಲಿದ್ದಾರೆ. ಅವರು ಮಧ್ಯಾಹ್ನ 12:30 ಕ್ಕೆ ಮಮತಾ ಬ್ಯಾನರ್ಜಿಯೊಂದಿಗೆ ಹಾಜರಿರುತ್ತಾರೆ ಎನ್ನಲಾಗಿದೆ.


ಪಂದ್ಯದ ಮೊದಲ ದಿನದ ಮೊದಲ ಅಧಿವೇಶನವನ್ನು ವೀಕ್ಷಿಸಲು ಮಾತ್ರ ಬಾಂಗ್ಲಾದೇಶ ಪ್ರಧಾನಿ ಉಳಿಯುತ್ತಾರೆ. ನಂತರ ಅವರು ಟೀಸ್ತಾ ನೀರಿನ ಹಂಚಿಕೆಯಂತಹ ವಿಷಯ ಚರ್ಚೆಗಾಗಿ ಬ್ಯಾನರ್ಜಿಯೊಂದಿಗೆ ಸಭೆ ನಡೆಸಲಿದ್ದಾರೆ.