Bank Fraud: ಇತ್ತೀಚಿನ ದಿನಗಳಲ್ಲಿ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚಿಗೆ ಬ್ಯಾಂಕ್ ಅಧಿಕಾರಿಯಂತೆ ನಟಿಸಿ ವ್ಯಕ್ತಿಯೊಬ್ಬನ ಖಾತೆಯಿಂದ 2.40 ಲಕ್ಷ ರೂ.ಗಳನ್ನು ಡ್ರಾ ಮಾಡಿರುವ ಪ್ರಕರಣ ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಏನಿದು ಪ್ರಕರಣ?
ದೂರುದಾರ ವಿಠ್ಠಲ ಯಶ್ವಂತ್ ಪಾಂಡೆ (56) ನಾಗಪುರದ ಕಂಪ್ಟಿ ನಿವಾಸಿಯಾಗಿದ್ದು, ಶುಕ್ರವಾರ ವ್ಯಕ್ತಿಯೊಬ್ಬರಿಂದ ಕರೆ ಬಂದಿದೆ. ಯಶವಂತ್ ಪ್ರಕಾರ, ವ್ಯಕ್ತಿ ತನ್ನನ್ನು ಯೋಗೇಶ್ ಶರ್ಮಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (State Bank Of India) ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ ಮತ್ತು ಅವರಿಂದ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಕೇಳಿದ್ದಾನೆ.


ಇದನ್ನೂ ಓದಿ-  ಕೇರಳದಲ್ಲಿ COVID-19 ರೂಪಾಂತರದ ಓಮಿಕ್ರಾನ್‌ನ ಮೊದಲ ಪ್ರಕರಣ ದೃಢ


ಒಂದೇ ಒಂದು ಫೋನ್ ಕರೆಯಿಂದ 2.4 ಲಕ್ಷ ರೂಪಾಯಿ ವಂಚನೆ:
ಯಶವಂತ್ ಆರೋಪಿಯನ್ನು ಬ್ಯಾಂಕಿನ ಅಧಿಕಾರಿ ಎಂದು ತಪ್ಪಾಗಿ ಭಾವಿಸಿ ಕಾರ್ಡ್‌ನ ಎಲ್ಲಾ (Card Details) ವಿವರಗಳನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ದುಷ್ಕರ್ಮಿಗಳು ಯಶವಂತ್ ಅವರ ಬ್ಯಾಂಕ್ ಖಾತೆಯಿಂದ 2,40,807 ರೂ. ಡ್ರಾ ಮಾಡಿದ್ದಾರೆ.


ಇದನ್ನೂ ಓದಿ- Vatican ಹಾಗೂ Mecca ಮಾದರಿಯಲ್ಲಿ ರಾಮಮಂದಿರ ಕ್ಷೇತ್ರದ ಅಭಿವೃದ್ಧಿ, VHP ಘೋಷಣೆ


ಘಟನೆ ಬಳಿಕ ಪೊಲೀಸರಿಗೆ ದೂರು;
ಇದಾದ ನಂತರ ಯಶವಂತ್ ಹೊಸಕ್ಯಾಂಪ್ಟಿ ಠಾಣೆಗೆ ತೆರಳಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.


ಇಂತಹ ಕರೆ, ಸಂದೇಶದ ಬಗ್ಗೆ ಎಚ್ಚರ:
ವಾಸ್ತವವಾಗಿ ಬ್ಯಾಂಕ್ ಆಗಾಗ್ಗೆ ತನ್ನ ಗ್ರಾಹಕರಿಗೆ ಇಂತಹ ವಂಚನೆ ಬಗ್ಗೆ ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಯಾವುದೇ ಬ್ಯಾಂಕ್ ಕರೆ ಅಥವಾ ಸಂದೇಶದ ಮೂಲಕ ಗ್ರಾಹಕರಿಗೆ ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಸಂಬಂಧಿಸಿದಂತೆ ಯಾವುದೇ ಮಾಹಿತಿಯನ್ನು ಕೇಳುವುದಿಲ್ಲ. ಗ್ರಾಹಕರು ಯಾರೊಂದಿಗೂ ಕರೆ ಅಥವಾ ಸಂದೇಶದ ಮೂಲಕ ತಮ್ಮ ಬ್ಯಾಂಕ್ ವಿವರಗಳನ್ನು ಹಂಚಿಕೊಳ್ಳದಂತೆ ಸಲಹೆ ನೀಡುತ್ತಲೇ ಇರುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.