Small Business Idea: ಸರ್ಕಾರದ ಸಹಾಯದಿಂದ ಈ ಲಾಭದಾಯಕ ವ್ಯವಹಾರ ಪ್ರಾರಂಭಿಸಿ, ಲಕ್ಷ ಲಕ್ಷ ಗಳಿಸಿ

ಇತ್ತೀಚಿನ ದಿನಗಳಲ್ಲಿ ಪೇಪರ್ ಕಪ್‌ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ನೀವು ಕಡಿಮೆ ವೆಚ್ಚದಲ್ಲಿ ಈ ವ್ಯವಹಾರ ಪ್ರಾರಂಭಿಸಬಹುದು ಮತ್ತು ಹೆಚ್ಚಿನ ಲಾಭವನ್ನು ಗಳಿಸಬಹುದು.

Written by - Puttaraj K Alur | Last Updated : Dec 12, 2021, 08:55 PM IST
  • ನೀವು ಬಳಸಿ ಬಿಸಾಡಬಹುದಾದ ಪೇಪರ್ ಕಪ್ ವ್ಯವಹಾರ ಪ್ರಾರಂಭಿಸಿ ಕೈತುಂಬಾ ಗಳಿಸಬಹುದು
  • ಕೇಂದ್ರ ಸರ್ಕಾರವು ಈ ವ್ಯವಹಾರ ಪ್ರಾರಂಭಿಸಲು ಮುದ್ರಾ ಯೋಜನೆಯಡಿ ಸಾಲ ನೀಡುತ್ತದೆ
  • ಇದು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ನೀಡುವ ಸೂಪರ್ ಡೂಪರ್ ಬ್ಯುಸಿನೆಸ್ ಐಡಿಯಾ
Small Business Idea: ಸರ್ಕಾರದ ಸಹಾಯದಿಂದ ಈ ಲಾಭದಾಯಕ ವ್ಯವಹಾರ ಪ್ರಾರಂಭಿಸಿ, ಲಕ್ಷ ಲಕ್ಷ ಗಳಿಸಿ title=
ಲಾಭದಾಯಕ ಪೇಪರ್ ಕಪ್ ಬ್ಯುಸಿನೆಸ್ ಪ್ಲಾನ್

ನವದೆಹಲಿ: ಮಾಲಿನ್ಯದಿಂದ ಹದಗೆಡುತ್ತಿರುವ ಪರಿಸ್ಥಿತಿಯ ನಡುವೆ ಕೇಂದ್ರ ಸರ್ಕಾರವು ಪ್ಲಾಸ್ಟಿಕ್ ಅನ್ನು ನಿಷೇಧಿಸಿದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಸಹ ಲಾಭದಾಯಕ ವ್ಯವಹಾರ(Small Business Idea) ಮಾಡಲು ಬಯಸಿದರೆ ಇದು ನಿಮಗೆ ಉತ್ತಮ ಅವಕಾಶ. ನೀವು ಬಳಸಿ ಬಿಸಾಡಬಹುದಾದ ಕಾಗದದ ಕಪ್‌ಗಳ ವ್ಯಾಪಾರವನ್ನು ಪ್ರಾರಂಭಿಸಬಹುದು.

ಇತ್ತೀಚಿನ ದಿನಗಳಲ್ಲಿ ಪೇಪರ್ ಕಪ್‌(Paper Cup Business Idea)ಗಳಿಗೆ ಬೇಡಿಕೆ ತುಂಬಾ ಹೆಚ್ಚಾಗಿದೆ. ನೀವು ಕಡಿಮೆ ವೆಚ್ಚದಲ್ಲಿ ಈ ವ್ಯವಹಾರ ಪ್ರಾರಂಭಿಸಬಹುದು ಮತ್ತು ಹೆಚ್ಚಿನ ಲಾಭವನ್ನು ಗಳಿಸಬಹುದು. ಈ ಉದ್ಯಮ ಆರಂಭಿಸಲು ಮುದ್ರಾ ಯೋಜನೆಯಡಿ ಸರ್ಕಾರವೂ ನಿಮಗೆ ಸಹಾಯ ಮಾಡುತ್ತಿದೆ. ಹಾಗಾದರೆ ಈ ಅದ್ಭುತ ವ್ಯವಹಾರದ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಿರಿ.

ಇದನ್ನೂ ಓದಿ: ನಿಮಗೆ Post Office ನೀಡುತ್ತಿದೆ ಮಿಲಿಯನೇರ್ ಆಗುವ ಅವಕಾಶ! ಈ ಯೋಜನೆಯಲ್ಲಿ ₹417 ಹೂಡಿಕೆ ಮಾಡಿ

ಸರ್ಕಾರ ಸಹಾಯಧನ ನೀಡುತ್ತದೆ

ಕೇಂದ್ರ ಸರ್ಕಾರದ ಮುದ್ರಾ ಸಾಲ(Mudra Loan)ದಿಂದಲೂ ಈ ವ್ಯವಹಾರಕ್ಕೆ ಸಹಾಯ ಲಭ್ಯವಿರುವುದು ಗಮನಿಸಬೇಕಾದ ಸಂಗತಿ. ಮುದ್ರಾ ಯೋಜನೆಯಡಿ ಸರ್ಕಾರವು ನಿಮಗೆ ಸಹಾಯಧನ ನೀಡುತ್ತದೆ. ಈ ಯೋಜನೆಯಡಿ ನೀವು ಒಟ್ಟು ಯೋಜನಾ ವೆಚ್ಚದ ಶೇ.25 ರಷ್ಟನ್ನು ಹೂಡಿಕೆ ಮಾಡಬೇಕಾಗುತ್ತದೆ. ಮುದ್ರಾ ಯೋಜನೆಯಡಿ ಸರ್ಕಾರವು ಶೇ.75ರಷ್ಟು ಸಾಲ ನೀಡಲಿದೆ. ಇದನ್ನು ಬಳಸಿಕೊಂಡು ನೀವು ಈ ವ್ಯವಹಾರವನ್ನು ಶುರು ಮಾಡಬಹುದು.

ಯಾವ ವಸ್ತುಗಳು ಬೇಕಾಗುತ್ತವೆ..?

ಈ ವ್ಯವಹಾರ ಪ್ರಾರಂಭಿಸಲು ನಿಮಗೆ ಯಂತ್ರದ ಅಗತ್ಯವಿರುತ್ತದೆ. ಇದು ವಿಶೇಷವಾಗಿ ದೆಹಲಿ, ಹೈದರಾಬಾದ್, ಆಗ್ರಾ ಮತ್ತು ಅಹಮದಾಬಾದ್ ಸೇರಿದಂತೆ ಅನೇಕ ನಗರಗಳಲ್ಲಿ ಲಭ್ಯವಿರುತ್ತದೆ. ಇಂತಹ ಯಂತ್ರಗಳನ್ನು ತಯಾರಿಸಲು ಇಂಜಿನಿಯರಿಂಗ್ ಕೆಲಸ ಮಾಡುವ ಕಂಪನಿಗಳಿವೆ. ನಿಮಗೆ ಬೇಕಾದ ರೀತಿಯ ಯಂತ್ರಗಳನ್ನು ಒದಗಿಸಿಕೊಡುತ್ತಾರೆ. ಈ ವ್ಯವಹಾರ(Small Skill Business) ಮಾಡಲು ನಿಮಗೆ 500 ಚದರ ಅಡಿ ಪ್ರದೇಶ ಬೇಕಾಗುತ್ತದೆ. ಯಂತ್ರೋಪಕರಣಗಳು, ಉಪಕರಣಗಳು ಮತ್ತು ಪೀಠೋಪಕರಣಗಳು, ಬಣ್ಣ, ವಿದ್ಯುತ್ ಸೇರಿದಂತೆ ಇತರೆ ಸೆಟ್ ಅಪ್ ಗಳಿಗೆ ಸುಮಾರು 10.70 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ನೀವು ನುರಿತ ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಮಾಡಿದರೆ ತಿಂಗಳಿಗೆ ಸುಮಾರು 35 ಸಾವಿರ ರೂ. ಖರ್ಚಾಗುತ್ತದೆ.

ಇದನ್ನೂ ಓದಿ: LIC Pension Scheme: ಒಮ್ಮೆ ಹಣ ಠೇವಣಿ ಮಾಡಿದರೆ ಜೀವನಪೂರ್ತಿ ಸಿಗಲಿದೆ ಪಿಂಚಣಿ

ಎಷ್ಟು ಲಾಭ ಸಿಗುತ್ತದೆ?

ಯಾರೂ ಬೇಕಾದರೂ ಈ ಉದ್ಯಮವನ್ನು ಪ್ರಾರಂಭಿಸಬಹುದು. ನೀವು ವರ್ಷದಲ್ಲಿ 300 ದಿನ ಕೆಲಸ ಮಾಡಿದರೆ ಸುಮಾರು 2.20 ಕೋಟಿ ಯೂನಿಟ್ ಪೇಪರ್ ಕಪ್(Paper Cup Business)ಗಳನ್ನು ತಯಾರಿಸಬಹುದು. ನೀವು ಮಾರುಕಟ್ಟೆಯಲ್ಲಿ 1 ಕಪ್ ಅಥವಾ ಲೋಟಕ್ಕೆ ಸುಮಾರು 30 ಪೈಸೆಗೆ ಮಾರಾಟ ಮಾಡಬಹುದು. ಈ ರೀತಿ ಇದು ನಿಮಗೆ ಬಂಪರ್ ಲಾಭವನ್ನು ನೀಡುತ್ತದೆ. ನಿಮ್ಮ ಬಜೆಟ್ ಗೆ ತಕ್ಕಂತೆ ಈ ವ್ಯವಹಾರ ಪ್ರಾರಂಭಿಸಿದರೆ ನೀವು ಕೈತುಂಬಾ ಗಳಿಸಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News