ನವದೆಹಲಿ: ಈ ವಾರ ಮತ್ತೊಮ್ಮೆ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಮಾರ್ಚ್ 27ರಿಂದ ಸಾಲು ಸಾಲು ರಜೆಗಳಿವೆ. ಹೀಗಾಗಿ ಮಾರ್ಚ್ 27 ಏಪ್ರಿಲ್ 4 ರ ಅವಧಿಯಲ್ಲಿ ಬ್ಯಾಂಕ್ ವ್ಯವಹಾರ ಕಷ್ಟ. ಈ ಅವಧಿಯಲ್ಲಿ ಕೇವಲ 2 ದಿನಗಳು ಮಾತ್ರ ಬ್ಯಾಂಕ್ ಕಾರ್ಯ ನಿರ್ವಹಿಸಲಿದೆ.


COMMERCIAL BREAK
SCROLL TO CONTINUE READING

ಎಲ್ಲಾ ಭಾನುವಾರ, 2 ಮತ್ತು 4ನೇ ಶನಿವಾರ ಸರ್ಕಾರಿ ರಜೆ(Govt Holiday) ಇರುತ್ತದೆ. ಭಾನುವಾರ ಹಾಗೂ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ಬ್ಯಾಂಕ್ ರಜಾದಿನವಿರಲಿದೆ. ಬ್ಯಾಂಕ್ ಸಿಬ್ಬಂದಿಗಳ ಒಕ್ಕೂಟವು ಮಾರ್ಚ್ 15ರಿಂದ ಎರಡು ದಿನ ಮುಷ್ಕರಕ್ಕೆ ಕರೆ ನೀಡಿದ್ದರಿಂದ ಈಗಾಗಲೇ ಆ ವಾರದಲ್ಲಿ ನಾಲ್ಕು ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಿದೆ.


Remote Voting: '2024 ರ ಲೋಕಸಭಾ ಚುನಾವಣೆ ವೇಳೆಗೆ 'ರಿಮೋಟ್ ವೋಟಿಂಗ್' ವ್ಯವಸ್ಥೆ'


ಮಾರ್ಚ್ ಕೊನೆವಾರದಲ್ಲಿಸಾಲು ಸಾಲು ರಜೆ: ಬಿಹಾರದಲ್ಲಿ ಬಿಹಾರ ರಾಜ್ಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಾರ್ಚ್ 30ರಂದು ಬ್ಯಾಂಕುಗಳಿಗೆ ರಜೆ(Bank Holiday) ಇರಲಿದೆ. ಮಾರ್ಚ್ 27 ನಾಲ್ಕನೇ ಶನಿವಾರ ಎಂದು ರಜೆ ಇರಲಿದೆ. ಮಾರ್ಚ್ 28 ಭಾನುವಾರದ ರಜೆ, ಮಾರ್ಚ್ 29, 30 ರಂದು ಹೋಳಿ ಹಬ್ಬ(Holi Festival 2021)ದ ಅಂಗವಾಗಿ ದೇಶದೆಲ್ಲೆಡೆ ರಜೆ ಸಿಗಲಿದೆ. ಮಾರ್ಚ್ 31 ಆರ್ಥಿಕ ವರ್ಷದ ಕೊನೆ ದಿನದಂದು ಬ್ಯಾಂಕ್ ಜೊತೆಗೆ ಗ್ರಾಹಕರು ವ್ಯವಹರಿಸಲು ಆಸ್ಪದವಿರುವುದಿಲ್ಲ. ಏಪ್ರಿಲ್ 1 ರಂದು ಬ್ಯಾಂಕ್ ಅಕೌಂಟಿಂಗ್ ಕಾರ್ಯ ನಡೆಯಲಿದೆ, ಏಪ್ರಿಲ್ 2ರಂದು ಗುಡ್ ಫ್ರೈಡೇ(Good Friday) ಅಂಗವಾಗಿ ರಜೆ ಘೋಷಿಸಲಾಗಿದೆ. ಏಪ್ರಿಲ್ 3ರಂದು ಬ್ಯಾಂಕ್ ಓಪನ್ ಇರಲಿದೆ. ಏಪ್ರಿಲ್ 4 ರಂದು ಭಾನುವಾರದ ರಜೆ ಇರಲಿದೆ.


Param Bir Sing Letter To CM Latest News: 'ನಾವು ಹೊಸ ದಾರಿಯ ಹುಡುಕಾಟದಲ್ಲಿದ್ದೇವೆ', ಸಂಜಯ್ ರಾವುತ್ ಅವರ ಈ ಟ್ವೀಟ್ ನ ಅರ್ಥ ಏನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.