Param Bir Sing Letter To CM Latest News: 'ನಾವು ಹೊಸ ದಾರಿಯ ಹುಡುಕಾಟದಲ್ಲಿದ್ದೇವೆ', ಸಂಜಯ್ ರಾವುತ್ ಅವರ ಈ ಟ್ವೀಟ್ ನ ಅರ್ಥ ಏನು?

Param Bir Sing Letter To CM Latest News - ಶಿವಸೇನಾ ವಕ್ತಾರ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಇಂದು ಬೆಳ್ಳಂಬೆಳಗ್ಗೆ ಶಾಯರಿ ಹೇಳುವ ಮಾದರಿಯಲ್ಲಿ ಟ್ವೀಟ್ ವೊಂದನ್ನು ಮಾಡಿದ್ದಾರೆ. ಅವರ ಈ ಟ್ವೀಟ್ ಗೆ ಉತ್ತರ ನೀಡಿರುವ NCP ವಕ್ತಾರ ಕ್ಲಾಯಿಡ್ ಕಾಸ್ಟ್ರೋ, 'ಹಮ್ ಸಾಥ್ ಚಲೇ, ಕಾರವಾಂ ಬನತಾ ಗಯಾ, ಮುಷ್ಕಿಲೆ ಆತೀ ರಹೀ, ಸಾಥ್ ಚಲತೆ ರಹೇ ಹಮ್... (ನಾವು ಒಂದಾಗಿ ಸಾಗಿದೇವು, ತಂಡ ನಿರ್ಮಾಣಗೊಂಡಿತು, ಕಠಿಣ ಪ್ರಸಂಗಗಳು ಎದುರಾದವು, ನಾವು ಒಂದಾಗಿ ಸಾಗೋಣ)' ಎಂದು ಹೇಳಿದ್ದಾರೆ.

Written by - Nitin Tabib | Last Updated : Mar 21, 2021, 11:20 AM IST
  • ಮಹಾ ರಾಜಕೀಯದಲ್ಲಿ ಮತ್ತೆ ಬಿರುಗಾಳಿಯ ಸಂಕೇತ!
  • ಅನಿಲ್ ದೇಶಮುಖ್ ಮೇಲೆ ಭ್ರಷ್ಟಾಚಾರ ಆರೋಪ ಪ್ರಕರಣ.
  • ಹೊಸ ದಾರಿಯ ಹುಡುಕಾಟದಲ್ಲಿದ್ದೇವೆ ಎಂದು ಸಂಜಯ್ ರಾವುತ್ ಟ್ವೀಟೋಕ್ತಿ.
Param Bir Sing Letter To CM Latest News: 'ನಾವು ಹೊಸ ದಾರಿಯ ಹುಡುಕಾಟದಲ್ಲಿದ್ದೇವೆ', ಸಂಜಯ್ ರಾವುತ್ ಅವರ ಈ ಟ್ವೀಟ್ ನ ಅರ್ಥ ಏನು? title=
Sanjay Raut (File Photo)

ಮುಂಬೈ: Param Bir Sing Letter To CM Latest News - ಮಹಾರಾಷ್ಟ್ರದಲ್ಲಿ ರಾಜಕೀಯ ಚಟುವಟಿಕೆಗಳು ಪುನಃ ಗರಿಗೆದರಿವೆ. ಮಾಹಾರಾಷ್ಟ್ರದ ಮುಖ್ಯಮಂತ್ರಿಗೆ ಪತ್ರ ಬರೆದಿರುವ ಮುಂಬೈ ಪೊಲೀಸ್ ಮಾಜಿ ಕಮಿಷನರ್ ಪರಮಬೀರ್ ಸಿಂಗ್ (Param Bir Singh), ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ (Anil Deshmukh) ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸದ್ಯ ಈ ಪ್ರಕರಣ ಮೈಲೇಜ್ ಪಡೆಯಲಾರಂಭಿಸಿದೆ. ಇವೆಲ್ಲದರ ನಡುವೆ ಶಿವಸೇನೆಯ ವಕ್ತಾರ ಹಾಗೂ ರಾಜ್ಯಸಭಾ ಸಂಸದರಾಗಿರುವ ಸಂಜಯ್ ರಾವುತ್ (Sanjay Raut) ಇಂದು ಬೆಳ್ಳಂಬೆಳಗ್ಗೆ ಶಾಯರಿ ಹೇಳುವ ಮಾದರಿಯಲ್ಲಿ ಟ್ವೀಟ್ ವೊಂದನ್ನು ಮಾಡಿದ್ದಾರೆ. ಅವರು, ಗೀತ ರಚನೆಕಾರ ಜಾವೇದ್ ಅಖ್ತರ್ ಅವರ ಶಾಯರಿಯೊಂದನ್ನು ಟ್ವೀಟ್ ಮಾಡಿದ್ದಾರೆ. ತಮ್ಮ ಟ್ವೀಟ್ ನಲ್ಲಿ ಅವರು, 'ಶುಭ್ ಪ್ರಭಾತ್, ಹಮ್ ಕೊ ತೋ ಬಸ್ ತಲಾಷ್ ನಯೇ ರಾಸ್ತೊಂಕಿ ಹೈ, ಹಮ್ ಹೈ ಮುಸಾಫಿರ್ ಐಸೆ ಜೋ ಮಂಝಿಲ್ ಸೆ ಆಯೇ ಹೈ (ಶುಭ ಮುಂಜಾವು, ನಾವು ಹೊಸ ದಾರಿಯ ಹುಡುಕಾಟದಲ್ಲಿದ್ದೇವೆ, ನಾವು ಗಮ್ಯಸ್ಥಾನದಿಂದ ಬಂದ ಪ್ರಯಾಣಿಕರು)'  ಎಂದು ಬರೆದಿದ್ದಾರೆ.

ಸಂಜಯ್ ರಾವುತ್ ಅವರ ಈ ಟ್ವೀಟ್ ಬಳಿಕ ಹೊಸ ಸಮೀಕರಣದ ಸಂಕೇತ ಎಂದು ಭಾವಿಸಲಾಗುತ್ತಿದೆ. ಏಕೆಂದರೆ ಮಾಹಾರಾಷ್ಟ್ರದಲ್ಲಿ ಶಿವಸೇನಾ-NCP ಹಾಗೂ ಕಾಂಗ್ರೆಸ್ ನ ಮಹಾವಿಕಾಸ್ ಆಘಾಡಿ ಸರ್ಕಾರ ಅಸ್ತಿತ್ವದಲ್ಲಿದೆ. ಇನ್ನೊಂದೆಡೆ ರಾಜ್ಯ ಸರ್ಕಾರದಲ್ಲಿ ಗೃಹ ಸಚಿವ ಅನಿಲ್ ದೇಶ್ಮುಖ್ NCP ಪಕ್ಷದಿಂದ ಬಂದವರಾಗಿದ್ದಾರೆ. ಏತನ್ಮಧ್ಯೆ ಅವರ ಮೇಲೆ ಹೊರಿಸಲಾಗಿರುವ ಭ್ರಷ್ಟಾಚಾರದ ಆರೋಪಗಳ ಬಳಿಕ ಸಂಜಯ್ ರಾವುತ್ ಮಾಡಿರುವ ಈ ಟ್ವೀಟ್ ಶಿವಸೇನಾ-NCP ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ಸಂಕೇತ ನೀಡುತ್ತಿದೆಯೇ? ಎಂಬ ಚರ್ಚೆ ಮಹಾ ರಾಜಕೀಯ ವಲಯದಲ್ಲಿ ತೀವ್ರಗೊಂಡಿದೆ.

ಇನ್ನೊಂದೆಡೆ ಸಂಜಯ್ ರಾವುತ್ ಅವರ ಈ ಟ್ವೀಟ್ ಗೆ ಉತ್ತರ ನೀಡಿರುವ NCP ವಕ್ತಾರ ಕ್ಲಾಯಿಡ್ ಕಾಸ್ಟ್ರೋ, 'ಹಮ್ ಸಾಥ್ ಚಲೇ, ಕಾರವಾಂ ಬನತಾ ಗಯಾ, ಮುಷ್ಕಿಲೆ ಆತೀ ರಹೀ, ಸಾಥ್ ಚಲತೆ ರಹೇ ಹಮ್... ಬಿಛಾಯೆ ವೋ ಕಾಂಟೆ, ದೇತೇ ರಹೇ ಗಮ್, ಮುಸಾಫೀರ್ ಹೈ ... ಮಂಝಿಲ್ ತೋ ಪಾಯೇಂಗೆ ಹಮ್ (ನಾವು ಒಂದಾಗಿ ಸಾಗಿದೇವು, ತಂಡ ನಿರ್ಮಾಣಗೊಂಡಿತು, ಕಠಿಣ ಪ್ರಸಂಗಗಳು ಎದುರಾದವು, ನಾವು ಒಂದಾಗಿ ಸಾಗೋಣ... ಅವರು ಮುಳ್ಳುಗಳನ್ನು ಹರಡಲಿ, ದುಃಖವನ್ನು ನೀಡಲಿ, ಪ್ರಯಾನಿಕರಾಗಿದ್ದೇವೆ, ಗಮ್ಯಸ್ಥಾನ ಸಿಕ್ಕೆ ಸಿಗುತ್ತದೆ)' ಎಂದು ಹೇಳಿದ್ದಾರೆ.

ಇದನ್ನೂ ಓದಿ-ಪರಮ್ ಬೀರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದಮೆ - ಅನಿಲ್ ದೇಶ್ ಮುಖ್

ತಮ್ಮ ಮೇಲಿನ ಆರೋಪಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ್ದ ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಖ್ (Anil Deshmukh), ತಮ್ಮ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿರುವ ಮುಂಬೈ ಮಾಜಿ ಪೋಲೀಸ್ ಆಯುಕ್ತ ಪರಮಬೀರ್ ಸಿಂಗ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ. ಇದಕ್ಕೂ ಮೊದಲು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದ ಅವರು, ಸಿಂಗ್ ಅವರ ಆರೋಪಗಳನ್ನು ನಿರಾಕರಿಸಿದ್ದರು. ದೇಶ್ಮುಖ್ ಅವರು ಪೋಲೀಸ್ ಅಧಿಕಾರಿಗಳಿಗೆ ಬಾರ್, ರೆಸ್ಟೋರೆಂಟ್ ಹಾಗೂ ಇತರೆ ಇಂತಹ ವ್ಯಾಪಾರಿಗಳಿಂದ ಪ್ರತಿ ತಿಂಗಳು 100 ಕೋಟಿ ರೂ. ವಸೂಲಿ ಮಾಡಲು ಹೇಳಿದ್ದರು ಎಂದು ಸಿಂಗ್ ಆರೋಪಿಸಿದ್ದಾರೆ.

ಇದನ್ನೂ ಓದಿ-ತಿಂಗಳಿಗೆ ‘₹ 100 ಕೋಟಿ ಹಫ್ತಾ’ ಕೇಳಿದ ಗೃಹಸಚಿವ..!

ಈ ಕುರಿತು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಅವರಿಗೆ ಪತ್ರ ಬರೆದಿರುವ ಪರಮಬೀರ್ ಸಿಂಗ್, ಬಾರ್, ರೆಸ್ಟೋರೆಂಟ್ ಹಾಗೂ ಇತರೆ ಇಂತಹ ಪ್ರತಿಷ್ಠಾನಗಳಿಂದ ಅನಿಲ್ ದೇಶ್ಮುಖ್  ತಿಂಗಳಿಗೆ 100 ಕೋಟಿ ರೂ. ವಸೂಲಿ ,ಮಾಡುವ ಗುರಿಹೊಂದಿರುವುದಾಗಿ ಅವರು  ಸಚಿನ್ ವಝೆಗೆ ಹೇಳಿದ್ದರು. ಇದರಲ್ಲಿ ಅರ್ಧದಷ್ಟು ಹಣ ನಗರದಲ್ಲಿ ನಡೆಯುತ್ತಿರುವ 1750 ಬಾರ್, ರೆಸ್ಟೋರೆಂಟ್ ಹಾಗೂ ಇಂತಹ ಇತರ ಪ್ರತಿಷ್ಠಾನಗಳಿಂದ ವಸೂಲಿ ಮಾಡಲಾಗುವುದು ಎಂದಿದ್ದಾರೆ.

ಇದನ್ನೂ ಓದಿ-ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆಗೆ ಕೊರೊನಾ ಧೃಢ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News