ನವದೆಹಲಿ : ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ (SBI) ಉದ್ಯೋಗಕ್ಕೆ ಸುವರ್ಣಾವಕಾಶ ಬಂದಿದೆ. ಕ್ಲೆರಿಕಲ್ ಕೇಡರ್‍ನಲ್ಲಿ ಜ್ಯೂನಿಯರ್ ಅಸೋಶಿಯೆಟ್ ಸ್ಥಾನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 5000 ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಮೇ 17ರ ತನಕ ಅರ್ಜಿ ಸಲ್ಲಿಸಬಹುದಾಗಿದೆ.  ಆಸಕ್ತರು sbi.co.in, bank.sbi/careers ಲಿಂಕ್ ಓಪನ್ ಮಾಡಿ ಅರ್ಜಿ ಸಲ್ಲಿಸಬಹುದಾಗಿದೆ. 


COMMERCIAL BREAK
SCROLL TO CONTINUE READING

ಅರ್ಹತೆ:
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ಪದವಿ


ಇದನ್ನೂ ಓದಿ : ಇದು ಸುವರ್ಣಾವಕಾಶ ..! 8ನೇ ಕ್ಲಾಸ್ ಪಾಸಾದರೂ ಸಾಕು, ರೈಲ್ವೆಯಲ್ಲಿ ನೌಕರಿ


ವಯೋಮಿತಿ : 
ಅಭ್ಯರ್ಥಿಗಳು 20 ರಿಂದ 28ರ ವಯಸ್ಸಿನ ಒಳಗಿರಬೇಕು. ವಯೋಮಿತಿ ವಿಸ್ತರಣೆ ವಿಚಾರಕ್ಕೆ ಕುರಿತಂತೆ ಸಂಬಂಧ ಪಟ್ಟ ನೊಟೀಫಿಕೇಶನ್ (Notification) ನೋಡಬಹುದು. 1, ಏಪ್ರಿಲ್‍ಗೆ ಅನ್ವಯವಾಗಿ ವಯೋಮಿತಿ ಲೆಕ್ಕಾಚಾರ ನಡೆಯುತ್ತದೆ


ಮುಖ್ಯ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭ : 27 ಏಪ್ರಿಲ್, 2021
ಅರ್ಜಿ ಸಲ್ಲಿಕೆಗೆ ಕೊನೆಯ ದಿನ : 17 ಮೇ, 2021


ಆಯ್ಕೆ ಪ್ರಕ್ರಿಯೆ:
ಆನ್ ಲೈನ್ (Online) ಪ್ರಾಥಮಿಕ ಪರೀಕ್ಷೆ, ಆನ್ ಲೈನ್ ಮುಖ್ಯ ಪರೀಕ್ಷೆ ಮತ್ತು ಅಭ್ಯರ್ಥಿಯ ಪ್ರಾದೇಶಿಕ ಭಾಷೆಯ ಪರೀಕ್ಷೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ


ಇದನ್ನೂ ಓದಿ : Zee Digital: 13 ಬ್ರಾಂಡ್‌ಗಳ ಪ್ರೋಗ್ರೆಸ್ಸಿವ್ ವೆಬ್ ಅಪ್ಲಿಕೇಶನ್‌ಗಳನ್ನು ಪ್ರಾರಂಭಿಸಿದ ಜೀ ಡಿಜಿಟಲ್


ಅರ್ಜಿ ಶುಲ್ಕ:
ಜನರಲ್/ಒಬಿಸಿ (OBC)/ಇಡಬ್ಲುಎಸ್ ಕೆಟಗರಿಗೆ 750 ರೂಪಾಯಿ
ಎಸ್ ಸಿ/ಎಸ್ ಟಿ/ ಪಿಡಬ್ಲುಡಿ ಕೆಟಗರಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ
ಆಯ್ಕೆಯಾದ ಅಭ್ಯರ್ಥಿಗೆ 17,900 ರೂಪಾಯಿಯಿಂದ 47,920ರ ತನಕ ವೇತನ (Salary) ಇರಲಿದೆ.


ಇದನ್ನೂ ಓದಿ : ಭಾರತೀಯ ನೌಕಾಪಡೆಯಲ್ಲಿ 2500 ಹುದ್ದೆಗಳಿಗೆ ನೇಮಕಾತಿ..!10+2 ಪಾಸ್ ಆಗಿದ್ದರೆ ಸುವರ್ಣಾವಕಾಶ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.