Bank Strike : ಈ ಎರಡು ದಿನಕ್ಕೆ ಬ್ಯಾಂಕ್ ವ್ಯವಹಾರ ಇಟ್ಟುಕೊಳ್ಳಬೇಡಿ..!
ಬ್ಯಾಂಕಿಗೆ ಸಂಬಂಧಿಸಿದ ಪ್ರಮುಖ ಕೆಲಸಗಳನ್ನು ತಕ್ಷಣವೇ ಪೂರೈಸಿಕೊಳ್ಳಿ. ಮಾರ್ಚ್ 15-16ರಂದು ಬ್ಯಾಂಕ್ ಮುಷ್ಕರ ನಡೆಯಲಿದ್ದು, ಸೇವೆಗಳ ಮೇಲೆ ಪರಿಣಾಮ ಬೀರಲಿದೆ.
ನವದೆಹಲಿ : ಬ್ಯಾಂಕಿನ ಯಾವುದೇ ಪ್ರಮುಖ ಕೆಲಸಗಳು ಬಾಕಿ ಉಳಿದಿದ್ದರೆ, ತಕ್ಷಣವೇ ಅದನ್ನು ಮುಗಿಸಿಕೊಳ್ಳಿ. ಈ ತಿಂಗಳ ಎರಡು ದಿನಗಳಲ್ಲಿ ಬ್ಯಾಂಕ್ ಮುಷ್ಕರ (Bank strike) ನಡೆಯಲಿದೆ. ಮುಷ್ಕರದ ಪರಿಣಾಮ, ಬ್ಯಾಂಕಿಂಗ್ ಸೇವೆಗಳಿಗೆ ತೊಂದರೆಯಾಗಬಹುದು. ಈ ಬಗ್ಗೆ ಕೆನರಾ ಬ್ಯಾಂಕ್ (Canara Bank) ತನ್ನ ಗ್ರಾಹಕರಿಗೆ ತಿಳಿಸಿದೆ.
ಮಾರ್ಚ್ 15-16ರಂದು ನಡೆಯಲಿವೆ ಬ್ಯಾಂಕ್ ಯೂನಿಯನ್‌ಗಳ ಮುಷ್ಕರ :
United Forum of Bank Unions (UFBU) ಮಾರ್ಚ್ 15 ಮತ್ತು ಮಾರ್ಚ್ 16 ರಂದು ಮುಷ್ಕರವನ್ನು ಘೋಷಿಸಿದೆ ಎಂದು Indian Banks Association (IBA) ಹೇಳಿದೆ. ಪ್ರಸ್ತಾವಿತ ಮುಷ್ಕರ ದಿನದಂದು ಬ್ಯಾಂಕಿನ (Bank) ಶಾಖೆಗಳು ಮತ್ತು ಕಚೇರಿಗಳಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೂ ಮುಷ್ಕರ ಬ್ಯಾಂಕ್ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು ಎಂದು ಕೆನರಾ ಬ್ಯಾಂಕ್ ಹೇಳಿದೆ.
ಇದನ್ನೂ ಓದಿ : ಮನೆ ಕಟ್ಟುವ ಕನಸು ಇನ್ನು ನನಸು : SBI ನೀಡುತ್ತಿದೆ ಕಡಿಮೆ ಬಡ್ಡಿದರದಲ್ಲಿ ಹೋಂ ಲೋನ್
ಬ್ಯಾಂಕುಗಳ ವಿಲೀನದ ವಿರುದ್ಧ ಮುಷ್ಕರ :
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (AIBOC), NCBE, AIBOA, BEFI, INBEF, IBOC, NOBW, NOBO ಮತ್ತು AINBOF ಎರಡು ಬ್ಯಾಂಕುಗಳ ವಿಲೀನದ ವಿರುದ್ಧ ಮುಷ್ಕರವನ್ನು ಘೋಷಿಸಿದೆ.
ಬಜೆಟ್‌ನಲ್ಲಿ ಬ್ಯಾಂಕುಗಳ ವಿಲೀನದ ಘೋಷಣೆ :
2021 ರ ಬಜೆಟ್‌ನಲ್ಲಿ ಎರಡು ಸಾರ್ವಜನಿಕ ವಲಯದ ಬ್ಯಾಂಕುಗಳು ಮತ್ತು ಒಂದು ವಿಮಾ ಕಂಪನಿಯನ್ನು (Insurance company) ಖಾಸಗೀಕರಣಗೊಳಿಸಲು ಸರ್ಕಾರ ನಿರ್ಧರಿಸಿತ್ತು. ನಾಲ್ಕು ವರ್ಷಗಳಲ್ಲಿ ಸರ್ಕಾರವು ಈಗಾಗಲೇ 14 ಸರ್ಕಾರಿ ಬ್ಯಾಂಕುಗಳನ್ನು ವಿಲೀನಗೊಳಿಸಿದೆ. 2019 ರಲ್ಲಿ ಸರ್ಕಾರ IDBI ಬ್ಯಾಂಕಿನ ಬಹುಪಾಲು ಪಾಲನ್ನು LICಗೆ ಮಾರಾಟ ಮಾಡಿತ್ತು. ಪ್ರಸ್ತುತ, ದೇಶದಲ್ಲಿ 12 ಸರ್ಕಾರಿ ಬ್ಯಾಂಕುಗಳಿವೆ. ಈ ಪೈಕಿ ಎರಡು ಬ್ಯಾಂಕನ್ನು ವಿಲೀನಗೊಳಿಸಿದರೆ (Merge)ಸರ್ಕಾರಿ ಬ್ಯಾಂಕುಗಳ ಸಂಖ್ಯೆ 10ಕ್ಕೆ ಇಳಿಯಲಿದೆ.
ಇದನ್ನೂ ಓದಿ : Bank Holiday: ಮಾರ್ಚ್ ತಿಂಗಳಲ್ಲಿ 8 ದಿನ ಬ್ಯಾಂಕ್ ರಜೆ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.