Bank Holiday: ಮಾರ್ಚ್‌ ತಿಂಗಳಲ್ಲಿ 8  ದಿನ ಬ್ಯಾಂಕ್ ರಜೆ..!

ರಿಸರ್ವ್‌ ಬ್ಯಾಂಕ್‌ನಿಂದ ಮಾರ್ಚ್‌ ತಿಂಗಳ ಬ್ಯಾಂಕ್‌ಗಳ ರಜಾ ಪಟ್ಟಿ ಬಿಡುಗಡೆಯಾಗಿದೆ.

Last Updated : Feb 26, 2021, 01:56 PM IST
  • ರಿಸರ್ವ್‌ ಬ್ಯಾಂಕ್‌ನಿಂದ ಮಾರ್ಚ್‌ ತಿಂಗಳ ಬ್ಯಾಂಕ್‌ಗಳ ರಜಾ ಪಟ್ಟಿ ಬಿಡುಗಡೆಯಾಗಿದೆ.
  • ದೇಶಾದ್ಯಂತ ಒಟ್ಟು 11 ದಿನಗಳ ರಜೆ ಬ್ಯಾಂಕ್‌ಗಳಿಗೆ ಇರಲಿದೆ.
  • ಐದು ದಿನಗಳು ವಿಶೇಷ ಸಂದರ್ಭಗಳ ರಜೆಯಾಗಿದ್ದರೆ, ಇನ್ನುಳಿದವು ಶನಿವಾರ, ಭಾನುವಾರದ ರಜೆಗಳು.
Bank Holiday: ಮಾರ್ಚ್‌ ತಿಂಗಳಲ್ಲಿ 8  ದಿನ ಬ್ಯಾಂಕ್ ರಜೆ..! title=

ಬೆಂಗಳೂರು: ರಿಸರ್ವ್‌ ಬ್ಯಾಂಕ್‌ನಿಂದ ಮಾರ್ಚ್‌ ತಿಂಗಳ ಬ್ಯಾಂಕ್‌ಗಳ ರಜಾ ಪಟ್ಟಿ ಬಿಡುಗಡೆಯಾಗಿದೆ. ದೇಶಾದ್ಯಂತ ಒಟ್ಟು 11 ದಿನಗಳ ರಜೆ ಬ್ಯಾಂಕ್‌ಗಳಿಗೆ ಇರಲಿದೆ.

ಇವುಗಳು ಶನಿವಾರ, ಭಾನುವಾರಗಳನ್ನು ಒಳಗೊಂಡಿವೆ. ಐದು ದಿನಗಳು ವಿಶೇಷ ಸಂದರ್ಭಗಳ ರಜೆ(Holiday)ಯಾಗಿದ್ದರೆ, ಇನ್ನುಳಿದವು ಶನಿವಾರ, ಭಾನುವಾರದ ರಜೆಗಳು.

ಯಶ್ ಅಣ್ಣ, ಸಿದ್ದರಾಮಯ್ಯ ಸರ್ ನನ್ನ ಅಂತ್ಯಕ್ರಿಯೆಗೆ ಬರಬೇಕು..! ಡೆತ್ ನೋಟಿನಲ್ಲಿ ಅಭಿಮಾನಿಯ ಕೊನೆಯಾಸೆ.!

ಆದರೆ ಬ್ಯಾಂಕ್‌(Banks)ಗಳ ರಜೆಗಳು ಎಲ್ಲಾ ರಾಜ್ಯಗಳಿಗೂ ಒಂದೇ ತೆರನಾಗಿ ಇರುವುದಿಲ್ಲ. ಅಂದರೆ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಪ್ರತಿ ಭಾನುವಾರಗಳಂದು ಬ್ಯಾಂಕ್‌ಗಳ ರಜೆ ಎಲ್ಲೆಡೆ ಮಾಮೂಲು. ಆದರೆ ಹಬ್ಬದ ವಿಷಯಕ್ಕೆ ಬಂದಾಗ ಆಯಾ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯ ರಜೆಗಳು ಇರಲಿವೆ.

Dr Ashwath Narayan: ಅತಿಥಿ ಉಪನ್ಯಾಸಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ ಡಿಸಿಎಂ ಅಶ್ವತ್ಥ್ ನಾರಾಯಣ!

ರಾಜ್ಯದಲ್ಲಿ ಅತಿಥಿ ಉಪನ್ಯಾಸಕರು ಅನ್ನೋ ಕಲ್ಪನೆಯನ್ನು ರದ್ದುಗೊಳಿಸಿ, ಎಲ್ಲರನ್ನು

ಉಡುಪಿ ಕೃಷ್ಣಮಠದಲ್ಲಿ ಶೃದ್ದಾ ಭಕ್ತಿಯಿಂದ ನೆರವೇರಿದ ಪರ್ಯಾಯ ಪೂರ್ವಭಾವಿ ಅಕ್ಕಿ ಮುಹೂರ್ತ

ಇನ್ನು, ಕರ್ನಾಟಕ(Karnataka)ದ್ದು ಮಾತ್ರ ಹೇಳುವುದಾದರೆ, ಬ್ಯಾಂಕ್‌ಗೆ ಒಟ್ಟಾರೆ ರಜೆ ಈ ರೀತಿ ಇವೆ:

ಮಾರ್ಚ್​ 7: ಭಾನುವಾರ

ಮಾರ್ಚ್​ 11 (ಗುರುವಾರ): ಮಹಾಶಿವರಾತ್ರಿ

ಮಾರ್ಚ್ 13: ಎರಡನೇ ಶನಿವಾರ

ಮಾರ್ಚ್ 14: ಭಾನುವಾರ

ಮಾರ್ಚ್​ 21: ಭಾನುವಾರ

ಮಾರ್ಚ್​ 27: ನಾಲ್ಕನೇ ಶನಿವಾರ

ಮಾರ್ಚ್​ 28: ಭಾನುವಾರ

ಮಾರ್ಚ್‌ 30 (ಸೋಮವಾರ): ಹೋಳಿ

ಬಿಜೆಪಿಯವರು ಮಾಡುತ್ತಿರುವ ರಾಮಜಪ ಅಧಿಕ್ಕಾರಕ್ಕಾಗಿ ಮಾತ್ರ: HD Kumaraswamy

ಇದರ ಜತೆಗೆ ಕೇಂದ್ರ ಸರ್ಕಾರದ ಬ್ಯಾಂಕ್​ ಖಾಸಗೀಕರಣವನ್ನ ವಿರೋಧಿಸಿ ಅನೇಕ ಬ್ಯಾಂಕ್​ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿದ್ದು, ಹಾಗೇನಾದರೂ ಆದಲ್ಲಿ, ಇನ್ನೂ ಕೆಲವು ದಿನಗಳು ಬ್ಯಾಂಕ್‌ಗಳು ಕಾರ್ಯನಿರ್ವಹಿಸಲಾರವು. ಬ್ಯಾಂಕ್​ ಒಕ್ಕೂಟಗಳು ಮಾರ್ಚ್​ 10ರಂದು ದೆಹಲಿ ಸಂಸತ್ತಿನತ್ತ ಮೆರವಣಿಗೆ ನಡೆಸಲು ಯೋಜನೆ ರೂಪಿಸಿವೆ. ಇದೊಮ್ಮೆ ನಡೆದರೆ ಅನಿರ್ದಿಷ್ಟಾವಧಿಯವರೆಗೆ ಬ್ಯಾಂಕ್‌ಗಳು ಬಂದ್‌ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News