ನವದೆಹಲಿ: ಅಮೇರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಗುರುವಾರ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಲಿದ್ದಾರೆ. ಡಿಸೆಂಬರ್ 1 ರಂದು ಟೌನ್ ಹಾಲ್ ಸಭೆ ನಡೆಸಲು ದೆಹಲಿಗೆ ಆಗಮಿಸಲಿರುವ ಒಬಾಮ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.


COMMERCIAL BREAK
SCROLL TO CONTINUE READING

ಜನವರಿಯಲ್ಲಿ ಒಬಾಮಾ ಶ್ವೇತಭವನವನ್ನು ತೊರೆದ ನಂತರ ಇದು ಇಬ್ಬರು ನಾಯಕರ ನಡುವಿನ ಮೊದಲ ಭೇಟಿಯಾಗಿದೆ.


ಮೋದಿ ಮತ್ತು ಒಬಾಮಾ ಸೆಪ್ಟೆಂಬರ್ 2014 ಮತ್ತು ಸೆಪ್ಟೆಂಬರ್ 2016 ನಡುವೆ ಎಂಟು ಬಾರಿ ಭೇಟಿಯಾಗಿದ್ದರು. ಇದು ಯಾವುದೇ ಎರಡು ವಿಶ್ವ ನಾಯಕರ ನಡುವಿನ ಸಭೆಗಳಿಗಿಂತ ಹೆಚ್ಚಿನದಾಗಿದೆ. ಫ್ರಾನ್ಸ್ ಮತ್ತು ಯುಕೆ ಮುಂತಾದ ಇತರ ಸಾಂಪ್ರದಾಯಿಕ ಯುಎಸ್ ಮಿತ್ರರಾಷ್ಟ್ರಗಳಂತೆ ಭಾರತವು ಅನೇಕ ಸಾಮಾನ್ಯ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪರಿಗಣಿಸಲಾಗಿದ್ದರೂ, ಯು.ಎಸ್. ಅಧ್ಯಕ್ಷರೊಂದಿಗೆ ಭಾರತದ ಪ್ರಧಾನ ಮಂತ್ರಿ ನಡೆಸಿದ ಸಭೆಗಳಲ್ಲಿ ಇದು ಹೆಚ್ಚಿನದಾಗಿದೆ. 


ಒಬಾಮ ಅವರು ಕೊನೆಯ ಭೇಟಿ ಜನವರಿ 2015 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮೊದಲ ಅಮೇರಿಕಾ ಅಧ್ಯಕ್ಷ ಎಂಬ ಹೆಗ್ಗಳಿಕೆಗೆ ಒಬಾಮ ಪಾತ್ರರಾಗಿದ್ದರು. ಬರಾಕ್ ಮತ್ತು ಮಿಚೆಲ್ ಒಬಾಮ ಅವರು  ತಾಜ್ ಮಹಲ್ಗೆ ಭೇಟಿ ನೀಡಬೇಕಿತ್ತು. ಆದರೆ ಅಂತಿಮ ಹಂತದಲ್ಲಿ ಆ ಭೇಟಿ ರದ್ದಾಗಿತ್ತು. 


ಒಬಾಮ ಅವರು ಅಧಿಕಾರ ವಹಿಸಿಕೊಂಡ ನಂತರ ಭಾರತಕ್ಕೆ ಎರಡು ಬಾರಿ ಭೇಟಿ ನೀಡಿದ ಅಮೆರಿಕದ ಮೊದಲ ಅಧ್ಯಕ್ಷರಾಗಿದ್ದರು. ಈ ಹಿಂದೆ 2010ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಅವರು ಭೇಟಿ ನೀಡಿದ್ದರು.


ಒಬಾಮ ಅವರು ಈ ಬಾರಿಯ ಭಾರತ ಭೇಟಿಯಲ್ಲಿ ಗುರುವಾರ ನಡೆಯಲಿರುವ ನಾಯಕತ್ವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಅವರು ಶುಕ್ರವಾರ ಸುಮಾರು 300 ಜನರೊಂದಿಗೆ ಟೌನ್ ಹಾಲ್ ಸಭೆಯನ್ನು ನಡೆಸಲಿದ್ದಾರೆ. ಒಬಾಮಾ ಫೌಂಡೇಶನ್ ಈ ಸಭೆಯನ್ನು ಆಯೋಜಿಸಿದ್ದು, ಭಾರತದಾದ್ಯಂತ ಯುವ ನಾಯಕರೊಂದಿಗೆ ಒಬಾಮ ಸಂವಾದ ನಡೆಸಲಿದ್ದಾರೆ.


ಟೌನ್ ಹಾಲ್ ಸಭೆಯನ್ನು ಪ್ರಕಟಿಸಿರುವ ಒಬಾಮಾ ಫೌಂಡೇಶನ್ ಈ ವೀಡಿಯೊ ಸಂದೇಶವನ್ನು ಮಾಜಿ ಯುಎಸ್ ಅಧ್ಯಕ್ಷರಿಂದ ಪೋಸ್ಟ್ ಮಾಡಿದೆ.>


ಒಬಾಮ ಅವರ ಭಾರತ ಭೇಟಿಯು ಚೀನಾ ಮತ್ತು ಫ್ರಾನ್ಸ್ಗಳನ್ನು ಒಳಗೊಂಡಿರುವ ಮೂರು ರಾಷ್ಟ್ರ ಪ್ರವಾಸದ ಭಾಗವಾಗಿದೆ. ಈ ಪ್ರವಾಸದಲ್ಲಿ ಅವರು ಚೀನಾದಲ್ಲಿ ಚೀನೀ ಅಧ್ಯಕ್ಷ ಕ್ಸಿ ಜಿಂಪಿಂಗ್ ಅವರನ್ನು ಕೂಡ ಭೇಟಿಯಾಗಲಿದ್ದಾರೆ.