ನವದೆಹಲಿ: ಜಗತ್ತನ್ನು ರೂಪಿಸಿದ 100 ಕಾದಂಬರಿಗಳ ಪಟ್ಟಿಯನ್ನು ಬಿಬಿಸಿ ಮಂಗಳವಾರದಂದು ಪ್ರಕಟಿಸಿದೆ. ಈ ಪಟ್ಟಿಯನ್ನು ಬಿಬಿಸಿ ಪ್ರಮುಖ ಬರಹಗಾರರು, ಮೇಲ್ವಿಚಾರಕರು ಮತ್ತು ವಿಮರ್ಶಕರ ಸಮಿತಿ ಮೂಲಕ ಪಟ್ಟಿಯನ್ನು ಸಿದ್ದಪಡಿಸಿದೆ.


COMMERCIAL BREAK
SCROLL TO CONTINUE READING

ಈ ಬಿಬಿಸಿ ರಚಿಸಿದ ಈ ಪಟ್ಟಿಯಲ್ಲಿ ಟೈಮ್ಸ್ ಲಿಟರರಿ ಸಪ್ಲಿಮೆಂಟ್‌ನ ಸಂಪಾದಕ ಸ್ಟಿಗ್ ಅಬೆಲ್, ಬ್ರಾಡ್‌ಫೋರ್ಡ್ ಸಾಹಿತ್ಯ ಉತ್ಸವದ ನಿರ್ದೇಶಕ ಸೈಮಾ ಅಸ್ಲಾಮ್, ಲೇಖಕರಾದ ಜುನೋ ಡಾಸನ್, ಕಿಟ್ ಡಿ ವಾಲ್ ಮತ್ತು ಅಲೆಕ್ಸಾಂಡರ್ ಮೆಕ್‌ಕಾಲ್ ಸ್ಮಿತ್ ಮತ್ತು ಪತ್ರಕರ್ತ ಮರಿಯೆಲ್ಲಾ ಫ್ರಾಸ್ಟ್ರಪ್ ಅವರನ್ನು ಒಳಗೊಂಡಿದೆ.


ಈ ಪುಸ್ತಕಗಳನ್ನು ಪ್ರಮುಖವಾಗಿ ಅಸ್ಮಿತೆ, ಪ್ರೀತಿ, ಲೈಂಗಿಕತೆ ಮತ್ತು ಪ್ರಣಯ, ಸಾಹಸ, ಜೀವನ, ಸಾವು ಮತ್ತು ಇತರ ಜಗತ್ತು, ರಾಜಕೀಯ, ಅಧಿಕಾರ ಮತ್ತು ಪ್ರತಿಭಟನೆ, ವರ್ಗ ಮತ್ತು ಸಮಾಜ, ವಯಸ್ಸು, ಕುಟುಂಬ ಮತ್ತು ಸ್ನೇಹ, ಅಪರಾಧ ಮತ್ತು ಸಂಘರ್ಷ ಮತ್ತು ಸಿದ್ದ ನಿಯಮಗಳನ್ನು ಮುರಿಯುವ ಎಂದು 10 ವಿಭಾಗಗಳಾಗಿ ವಿಂಗಡಿಸಲಾಗಿದೆ.


ಈ ಪಟ್ಟಿಯಲ್ಲಿ ಭಾರತದ ಐವರು ಲೇಖಕರ ಪುಸ್ತಕಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಅದರಲ್ಲಿ ಪ್ರಮುಖವಾಗಿ ಅರುಂಧತಿ ರಾಯ್ ಅವರ ಗಾಡ್ ಆಫ್ ಸ್ಮಾಲ್ ಥಿಂಗ್ಸ್ , ಸಲ್ಮಾನ್ ರಷ್ದಿ ಅವರ ದಿ ಮೂರ್ಸ್ ಲಾಸ್ಟ್ ಸೈ, ಆರ್.ಕೆ.ನಾರಾಯಣ್ ಅವರ ಸ್ವಾಮಿ ಅಂಡ್ ಫ್ರೆಂಡ್ಸ್ ,ವಿಕ್ರಂ ಸೇಥ್ ಅವರ ಸುಟೆಬಲ್ ಬಾಯ್, ಮತ್ತು ವಿಎಸ್.ನೈಪಾಲ್ ಅವರ ಎ ಹೌಸ್ ಫಾರ್ ಮಿಸ್ಟರ್ ಬಿಸ್ವಾಸ್ ಕೃತಿಗಳು ಸೇರಿವೆ.


ಪಾಕಿಸ್ತಾನದ ಲೇಖಕಿ ಕಮಿಲಾ ಶಮ್ಸಿ ಮತ್ತು ಬ್ರಿಟಿಷ್-ಪಾಕಿಸ್ತಾನಿ ಬರಹಗಾರ ಮೊಹ್ಸಿನ್ ಹಮೀದ್ ಅವರ ಹೋಮ್ ಫೈರ್ ಮತ್ತು ದಿ ರಿಲಕ್ಟಂಟ್ ಫಂಡಮೆಂಟಲಿಸ್ಟ್ ಪುಸ್ತಕಗಳ ಪಟ್ಟಿಯಲ್ಲಿದ್ದಾರೆ.