ಆನ್ಲೈನ್ ಫುಡ್ ಆರ್ಡರ್ ಮಾಡ್ತಿರಾ? ಹಾಗಿದ್ರೆ ನಿಮಗಿದೆ ಶಾಕಿಂಗ್ ನ್ಯೂಸ್!
ಈ ವೀಡಿಯೋ ವೈರಲ್ ಆದ ಕೂಡಲೇ ಕಂಪನಿ ತನ್ನ ಟ್ವಿಟ್ಟರ್ ಮೂಲಕ ಗ್ರಾಹಕರಲ್ಲಿ ಕ್ಷಮೆ ಯಾಚಿಸಿದೆ.
ನವದೆಹಲಿ: ಮನೆಯಲ್ಲಿ ಅಡುಗೆ ಮಾಡೋದಿಕ್ಕೆ ಬೇಸರವಾಗಿ ಏನಾದರೂ ಹೊರಗಡೆ ಫುಡ್ ಆರ್ಡರ್ ಮಾಡೋ ಅಭ್ಯಾಸ ಇರುವವರು ಈ ವೀಡಿಯೋ ನೋಡಿದ್ರೆ ಖಂಡಿತಾ ಶಾಕ್ ಆಗ್ತೀರಾ!
ಹೌದು, ಆನ್ಲೈನ್ ಪುಡ್ ಆರ್ಡರ್ ಡೆಲಿವರಿ ಮಾಡುವ ಸಿಬ್ಬಂದಿಯೋರ್ವ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಊಟದ ಪೊಟ್ಟಣವನ್ನು ತೆಗೆದು ರಸ್ತೆ ಮಧ್ಯದಲ್ಲೇ ತಿನ್ನುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ವೀಡಿಯೋದಲ್ಲಿ ಝೊಮಾಟೊ ಡೆಲಿವರಿ ಸಿಬ್ಬಂದಿಯೋರ್ವ ಗ್ರಾಹಕರಿಗೆ ತಲುಪಿಸಬೇಕಾದ ತಿಂಡಿಯನ್ನು ದಾರಿಯಲ್ಲಿ ಅರ್ಧ ತಿಂದು ಉಳಿದದ್ದನ್ನು ಹಾಗೆಯೇ ಪ್ಯಾಕ್ ಮಾಡಿಟ್ಟ ದೃಶ್ಯವನ್ನು ಮಧನ್ ಚಿಕ್ನಾ ಎಂಬವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
ಈ ವೀಡಿಯೋ ವೈರಲ್ ಆದ ಕೂಡಲೇ ಕಂಪನಿ ತನ್ನ ಟ್ವಿಟ್ಟರ್ ಮೂಲಕ ಗ್ರಾಹಕರಲ್ಲಿ ಕ್ಷಮೆ ಯಾಚಿಸಿದೆ. ಒಂದು ವೇಳೆ ಈ ವೀಡಿಯೋ ಸತ್ಯವೇ ಆಗಿದ್ದಲ್ಲಿ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.