SBI ಸೇರಿದಂತೆ 7 ಬ್ಯಾಂಕುಗಳ ಗ್ರಾಹಕರೇ ಎಚ್ಚರ!
ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಐಸಿಐಸಿಐ(ICICI), ಆಕ್ಸಿಸ್(AXIS), ಸಿಟಿ ಬ್ಯಾಂಕ್(Citi bank), ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅಥವಾ ಬ್ಯಾಂಕ್ ಆಫ್ ಬರೋಡಾಗೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದರೆ ಎಚ್ಚರಿಕೆಯಿಂದಿರುವುದು ಅಗತ್ಯ.
ನವದೆಹಲಿ: ನೀವು ಗೂಗಲ್ ಪ್ಲೇ ಸ್ಟೋರ್ ನಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಐಸಿಐಸಿಐ(ICICI), ಆಕ್ಸಿಸ್(AXIS), ಸಿಟಿ ಬ್ಯಾಂಕ್(Citi bank), ಇಂಡಿಯನ್ ಓವರ್ಸೀಸ್ ಬ್ಯಾಂಕ್ ಅಥವಾ ಬ್ಯಾಂಕ್ ಆಫ್ ಬರೋಡಾಗೆ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ್ದರೆ ಎಚ್ಚರಿಕೆಯಿಂದಿರುವುದು ಅಗತ್ಯ. ವರದಿಯೊಂದರ ಪ್ರಕಾರ, ಪ್ಲೇ ಸ್ಟೋರ್ ನಲ್ಲಿರುವ ಈ ಆಪ್ ಗಳು ನಕಲಿ ಎಂದು ಹೇಳಲಾಗಿದೆ. ಮಾಹಿತಿ ಪ್ರಕಾರ ಬ್ಯಾಂಕಿನ ಸಾವಿರಾರು ಗ್ರಾಹಕರ ಡಾಟಾ ಕಳವಾಗಿರುವ ಸಾಧ್ಯತೆಯಿದ್ದು, ಭವಿಷ್ಯದಲ್ಲಿ ಇದರ ದುರುಪಯೋಗವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಐಟಿ ಭದ್ರತೆಗೆ ಸಂಬಂಧಿಸಿದ ಕಂಪನಿಯಾದ ಸೊಫೋಸ್ ಲ್ಯಾಬ್ಸ್ ನೀಡಿದ ವರದಿಯಲ್ಲಿ ಈ ಹೇಳಿಕೆಯನ್ನು ನೀಡಲಾಗಿದೆ.
ಅನೇಕ ಉನ್ನತ ಬ್ಯಾಂಕುಗಳ ನಕಲಿ ಆಪ್:
ಸೋಫೋಸ್ ಲ್ಯಾಬ್ಸ್ ವರದಿಗಳಲ್ಲಿ, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸ್ಟೇಟ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸಿಟಿ ಬ್ಯಾಂಕ್ ಸೇರಿದಂತೆ ಹಲವು ಉನ್ನತ ಬ್ಯಾಂಕುಗಳ ನಕಲಿ ಅಪ್ಲಿಕೇಶನ್ ಬಗ್ಗೆ ಹೇಳಲಾಗಿದೆ. ಈ ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್ಗಳು ಬ್ಯಾಂಕಿನ ನಿಜವಾದ ಲಾಂಛನವನ್ನು ಹೊಂದಿದ್ದು, ಗ್ರಾಹಕರು ನೈಜ ಮತ್ತು ನಕಲಿ ಅಪ್ಲಿಕೇಶನ್ಗಳ ನಡುವೆ ಭಿನ್ನತೆಯನ್ನು ಕಂಡು ಹಿಡಿಯಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ. ಈ ಅಪ್ಲಿಕೇಶನ್ಗಳಲ್ಲಿರುವ ಮಾಲ್ವೇರ್ ಸಾವಿರಾರು ಗ್ರಾಹಕರ ಕ್ರೆಡಿಟ್ ಕಾರ್ಡ್ ಬಳಕೆದಾರರ ಮಾಹಿತಿಯನ್ನು ಕಳವು ಮಾಡಿರಬಹುದು ಎನ್ನಲಾಗಿದೆ.
ಎಸ್ಬಿಐನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ:
ವರದಿಯಲ್ಲಿ ಒಳಗೊಂಡಿರುವ ಬ್ಯಾಂಕುಗಳನ್ನು ಸಂಪರ್ಕಿಸಲಾಗಿದ್ದು, ಅಂತಹ ನಕಲಿ ಅಪ್ಲಿಕೇಶನ್ ಮಾಹಿತಿ ಇಲ್ಲ ಎಂದು ಬ್ಯಾಂಕುಗಳು ಹೇಳಿವೆ ಎನ್ನಲಾಗಿದೆ. ವರದಿಯಲ್ಲಿ ತಿಳಿಸಿದ ಅಪ್ಲಿಕೇಶನ್ನಿಂದ ಯಾವುದೇ ಬ್ಯಾಂಕಿನ ಮೇಲೆ ಯಾವುದೇ ಬ್ಯಾಂಕ್ ಪರಿಣಾಮ ಬೀರುವುದಿಲ್ಲ ಎಂದು ಸಿಟಿ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ಸೊಫೋಸ್ ಲ್ಯಾಬ್ನಿಂದ ತನ್ನ ಹೆಸರನ್ನು ವರದಿಯಿಂದ ತೆಗೆದು ಹಾಕಬೇಕೆಂದು ಬ್ಯಾಂಕ್ ಹೇಳಿದೆ. ಅದೇ ರೀತಿ, ಬ್ಯಾಂಕಿನ ಸೈಬರ್ ವಂಚನೆ ಇಲಾಖೆಗೆ ಈ ಬಗ್ಗೆ ತಿಳಿಸಲಾಗಿದೆ ಎಂದು Yes ಬ್ಯಾಂಕ್ ಹೇಳಿದೆ. ಎಸ್ಬಿಐನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.
ವರದಿಯ ಪ್ರಕಾರ, ಈ ಅಪ್ಲಿಕೇಶನ್ಗಳು ಕ್ಯಾಶ್ ಬ್ಯಾಕ್, ಉಚಿತ ಮೊಬೈಲ್ ಡೇಟಾ ಮತ್ತು ಬಡ್ಡಿ/ಸಾಲ ಸೇರಿದಂತೆ, ಒಂದು ಬಹುಮಾನವನ್ನು ಭರವಸೆ ನೀಡುವ ಮೂಲಕ ಡೌನ್ಲೋಡ್ ಮಾಡಲು ಮತ್ತು ಬಳಸಲು ಬಳಕೆದಾರರಿಗೆ ಪ್ರೋತ್ಸಾಹ ನೀಡುತ್ತವೆ. ಸೋಫೋಸ್ ಲ್ಯಾಬ್ಸ್ ಸಂಶೋಧಕ ಪಂಕಜ್ ಕೊಹ್ಲಿ ಹೇಳಿದ್ದಾರೆ.
ಈ ರೀತಿಯ ನಕಲಿ ಅಪ್ಲಿಕೇಶನ್ ಆಂಡ್ರಾಯ್ಡ್ ಹೊಸತೇನಲ್ಲ. ಅಂತಹ ಮಾಲ್ವೇರ್ಗಳು ಆಂಡ್ರಾಯ್ಡ್ ಅಪ್ಲಿಕೇಶನ್ ಪ್ಲೇ ಸ್ಟೋರ್ ನಲ್ಲಿ ವಿವಿಧ ರೀತಿಯಲ್ಲಿ ಮುಂದುವರಿಯುತ್ತಿದೆ ಎಂದು ಅವರು ಹೇಳಿದರು.
ರಕ್ಷಣೆ ಹೇಗೆ?
ಮಾಲ್ವೇರ್ನಿಂದ ಯಾವುದೇ ಡಾಟಾ ಕಳವಾಗದಂತೆ ರಕ್ಷಿಸಲು ಗ್ರಾಹಕರು ಯಾವಾಗಲೂ ಭದ್ರತೆ ಮತ್ತು ಇಂಟರ್ನೆಟ್ ಭದ್ರತೆಯನ್ನು ಒದಗಿಸುವ ಆಂಟಿವೈರಸ್ ತಂತ್ರಾಂಶವನ್ನು ಬಳಸುವಂತೆ ಪಂಕಜ್ ಕೊಹ್ಲಿ ಸೂಚನೆ ನೀಡಿದ್ದಾರೆ. ಇದು ಗ್ರಾಹಕರನ್ನು ಸುರಕ್ಷಿತವಾಗಿರಿಸುವುದರ ಜೊತೆಗೆ, ಈ ನಕಲಿ ಅಪ್ಲಿಕೇಶನ್ಗಳು ಮಾಹಿತಿಯ ಕಳ್ಳತನವನ್ನು ತಡೆಯುತ್ತದೆ ಎಂದು ಅವರು ತಿಳಿಸಿದ್ದಾರೆ.