ನವದೆಹಲಿ: ಪಾನ್ ಕಾರ್ಡ್ ಅತ್ಯಗತ್ಯ ದಾಖಲೆಗಳಲ್ಲಿ ಒಂದಾಗಿದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಅಥವಾ ಬ್ಯಾಂಕ್ನಲ್ಲಿ ಖಾತೆಯನ್ನು ತೆರೆಯಲು ಮಾತ್ರವಲ್ಲದೆ, ಪ್ರತಿ ಹಣಕಾಸು ವ್ಯವಹಾರಕ್ಕಾಗಿ ಪ್ಯಾನ್ ಕಾರ್ಡ್ ಅಗತ್ಯವಿದೆ. ಇದೀಗ ಶಾಪಿಂಗ್ ಮಾಡಲು ಕೂಡ ಸರ್ಕಾರ ಪ್ಯಾನ್ ಕಾರ್ಡ್ ಅನ್ನು ಕಡ್ಡಾಯ ಮಾಡಿದೆ. ಪ್ಯಾನ್ ಕಾರ್ಡ್ ನಿಮ್ಮ ಹಣಕಾಸಿನ ಸ್ಥಿತಿಯನ್ನು ತೋರಿಸುವ ಡಾಕ್ಯುಮೆಂಟ್ ಆಗಿದೆ. ಆದರೆ, ನಿಮ್ಮ ಪಾನ್ ಕಾರ್ಡ್ ಅನುಪಯುಕ್ತ ಆಗುವ ಸಾಧ್ಯತೆಗಳಿವೆ? ಹೌದು, ಅದು ಸಾಧ್ಯ. ಆಗಸ್ಟ್ 31 ರ ವೇಳೆಗೆ ನೀವು ಈ ತುರ್ತು ಕೆಲಸವನ್ನು ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅನುಪಯುಕ್ತ ಆಗಬಹುದು.


COMMERCIAL BREAK
SCROLL TO CONTINUE READING

ಪ್ಯಾನ್-ಆಧಾರ್ ಲಿಂಕ್ ಮಾಡುವುದು ಅಗತ್ಯ
ನಿಮ್ಮ ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಕಾರ್ಡ್ ಅನ್ನು ಸಂಪರ್ಕಿಸುವುದು ಅಗತ್ಯವಾಗಿದೆ. ನಿಮ್ಮ PAN ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲು ಆಗಸ್ಟ್ 31ರ ವರೆಗೆ ಗಡುವು ನೀಡಲಾಗಿದೆ. ಒಂದುವೇಳೆ ಪ್ಯಾನ್ ಅನ್ನು ಆಧಾರ್ ನೊಂದಿಗೆ ಲಿಂಕ್ ಮಾಡದೆ ಹೋದರೆ ಭವಿಷ್ಯದಲ್ಲಿ ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸರ್ಕಾರ ಈಗಾಗಲೇ ಅಂತಹ ಎಚ್ಚರಿಕೆಯನ್ನು ನೀಡಿದೆ. 


ಗಡುವಿನ ನಂತರ ಪ್ಯಾನ್ ಅನುಪಯುಕ್ತ
ಕಳೆದ ವರ್ಷ, ಆದಾಯ ತೆರಿಗೆ ರಿಟರ್ನ್ಗಳನ್ನು ಭರ್ತಿ ಮಾಡಲು ಪ್ಯಾನ್ ಕಾರ್ಡ್ ನೊಂದಿಗೆ ಆಧಾರ್ ಸೇರಿಸಲು ತೆರಿಗೆದಾರರಿಗೆ ಸರ್ಕಾರ ಸೂಚಿಸಿದೆ. ಆದಾಗ್ಯೂ, ಮಾರ್ಚ್ 31, 2018ರ ವರೆಗಿದ್ದ ಆಧಾರ್ ಪ್ಯಾನ್ ಲಿಂಕ್ ಗಡುವನ್ನು ಹೆಚ್ಚಿಸಲಾಯಿತು. ಈ ವರ್ಷದ ಆಗಸ್ಟ್ 31 ರ ಕೊನೆಯ ಗಡುವನ್ನು ವಿಸ್ತರಿಸಲಾಗಿದೆ. ಪ್ಯಾನ್ ಕಾರ್ಡ್ ತೆರಿಗೆದಾರರ ಆಧಾರ್ ಗೆ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ಅನ್ನು ರದ್ದುಗೊಳಿಸಬಹುದು. ಹಿಂದೆ, ಸುಮಾರು 30 ಕೋಟಿ ಪ್ಯಾನ್ ಕಾರ್ಡ್ ನಲ್ಲಿ 25% ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾಗಿದೆ. ಇವುಗಳಲ್ಲಿ, 30 ಮಿಲಿಯನ್ ಪ್ಯಾನ್ಗಳನ್ನು ಕಳೆದ ವರ್ಷ ಆಧಾರ್ ಗೆ ಸೇರಿಸಲಾಗಿದೆ.


ಕೆಲವು ಪ್ಯಾನ್ ಕಾರ್ಡ್ ಅನ್ನು ಈಗಾಗಲೇ ನಿಷ್ಕ್ರಿಯಗೊಳಿಸಲಾಗಿದೆ
ಕಳೆದ ವರ್ಷ ರಿಟರ್ನ್ಸ್ ಸಲ್ಲಿಸಿದ ಸಮಯದಲ್ಲಿ 11.44 ಲಕ್ಷ ಪಾನ್ ಕಾರ್ಡ್ಗಳನ್ನು ಸರ್ಕಾರ ನಿಷ್ಕ್ರಿಯಗೊಳಿಸಿದೆ. ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ವ್ಯಕ್ತಿಯೊಬ್ಬರಿಗೆ ಹಂಚಿಕೆಯಾದ ಪ್ರಕರಣಗಳಲ್ಲಿ ಹೀಗೆ ಮಾಡಲಾಗಿದೆ ಎಂದು ಹಣಕಾಸು ಸಚಿವ ಸಹ ಸಂಸತ್ತಿನಲ್ಲಿ ತಿಳಿಸಿದ್ದಾರೆ.