ನವದೆಹಲಿ: ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಂಪನಿ ಕಾಂಗ್ರೆಸ್ ಪಕ್ಷಕ್ಕೆ ರಫೆಲ್ ಒಪ್ಪಂದದ ವಿಚಾರವಾಗಿ ಎಚ್ಚರಿಕೆ ನೀಡಿದೆ.



COMMERCIAL BREAK
SCROLL TO CONTINUE READING

ಕಾಂಗ್ರೆಸ್ ಗೆ ಎಚ್ಚರಿಕೆ ನೀಡಿರುವುದನ್ನು ಸ್ವತಃ ಕಾಂಗ್ರೆಸ್ ವಕ್ತಾರ ಜೈವೀರ್ ಶೇರ್ಗಿಲ್ ಬಹಿರಂಗಪಡಿಸಿದ್ದಾರೆ.ಈ ಕುರಿತಾಗಿ ಅವರು ತಮ್ಮ ಟ್ವೀಟ್ ನಲ್ಲಿ ತಿಳಿಸಿರುವ ಅವರು ಅನಿಲ್ ಅಂಬಾನಿ ಅವರು ರಫೆಲ್ ಒಪ್ಪಂದದ ವಿಚಾರವಾಗಿ ಮಾತನಾಡಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಅವರು ಬೆದರಿಕೆ ಒಡ್ಡಿದ್ದಾರೆ.ಇದಕ್ಕೆ ನನ್ನ ಪ್ರತಿಕ್ರಿಯೆ- ನಾನು ಕಾಂಗ್ರೆಸ್ ನ ಯೋಧ ಮತ್ತು ಹೆಮ್ಮೆ ಪಂಜಾಬಿಗ ನೋಟಿಸ್ ಗಳಿಗೆ ಹೆದರುವುದಿಲ್ಲ.ಈ ದೇಶದ ತೆರಿಗೆ ಪಾವತಿದಾರರು ಹೆಚ್ಚಿಗೆ 42000 ಕೋಟಿ ರೂಗಳನ್ನು ಏಕೆ ನೀಡಲಾಯಿತು" ಎಂದು ಅವರು ಟ್ವೀಟ್ ಮಾಡಿದ್ದಾರೆ.


ಇತ್ತೀಚಿಗೆ ಅನಿಲ್ ಅಂಬಾನಿ ಅವರು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಗೆ ರಫೇಲ್ ವಿಚಾರವಾಗಿ ಪಟ್ಟಭದ್ರ ಶಕ್ತಿಗಳು ತಪ್ಪು ಮಾಹಿತಿ ನೀಡಿವೆ ಎಂದು ಪತ್ರ ಬರೆದಿದ್ದರು.