ಕೋಲ್ಕತಾ: ಕರ್ನಾಟಕದ ಇಂದಿರಾ, ತಮಿಳುನಾಡಿನ ಅಮ್ಮಾ ಕ್ಯಾಂಟೀನ್‌ ರೀತಿ ಬಡವರಿಗೆ 5 ರು.ಗೆ ಊಟ ನೀಡುವ ‘ಮಾ’ ಕ್ಯಾಂಟೀನ್‌ ಯೋಜನೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಚಾಲನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಸರ್ಕಾರ ಯೋಜನೆಗೆ ಚಾಲನೆ ನೀಡಿದೆ. ಮಾ ಕ್ಯಾಂಟೀನ್(Maa Canteen)‌ನಲ್ಲಿ 5 ರು.ಗೆ ಒಂದು ಪ್ಲೇಟ್‌ ಅನ್ನ, ದಾಲ್‌, ತರಕಾರಿ ಅಥವಾ ಎಗ್‌ಕರಿ ದೊರೆಯಲಿದೆ. ಪ್ರತಿ ಊಟಕ್ಕೆ ಸರ್ಕಾರ 15 ರು.ಸಬ್ಸಿಡಿ ನೀಡಲಿದ್ದು, ಗ್ರಾಹಕರಿಂದ ಕೇವಲ 5 ರು. ಶುಲ್ಕ ಪಡೆಯಲಾಗುವುದು.


ವಾರದಲ್ಲಿ 3-3 ದಿನಗಳ ಕಾಲ ಪತ್ನಿ-ಪ್ರಿಯತಮೆಯರಲ್ಲಿ ಹಂಚಿಕೆಯಾದ ಪತಿ ! ಪ್ರಕರಣ ಏನು?


ಸ್ವಯಂಸೇವಾ ಸಂಸ್ಥೆಗಳು ಪ್ರತಿನಿತ್ಯ ಮಧ್ಯಾಹ್ನ 1ಗಂಟೆಯಿಂದ 3 ಗಂಟೆಯವರೆಗೆ ಕ್ಯಾಂಟೀನ್‌ ಅನ್ನು ನಡೆಸಲಿವೆ. ಹಂತ ಹಂತವಾಗಿ ರಾಜ್ಯದೆಲ್ಲೆಡೆ ‘ಮಾ’ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗುವುದು ಎಂದು ಮಮತಾ ಬ್ಯಾನರ್ಜಿ(Mamata Banerjee) ಹೇಳಿದ್ದಾರೆ.


Smriti Irani: 'ರಾಹುಲ್‌ ತಾಕತ್ತಿದ್ದರೆ ಗುಜರಾತ್‌ನಿಂದ ಸ್ಪರ್ಧಿಸಲಿ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.