ಉದ್ಯೋಗ ಹುಡುಕುವವರಿಗೆ ದೇಶದಲ್ಲಿದೆ ಬೆಸ್ಟ್ ಕಂಪನಿಗಳು!
ಭಾರತದಲ್ಲಿ ತಂತ್ರಜ್ಞಾನ ಉದ್ಯಮದ ಕ್ಷೇತ್ರದಲ್ಲಿ ಅಡೋಬ್(Adobe) ಅತ್ಯುತ್ತಮ ಕಂಪೆನಿಗಳಲ್ಲಿ ಒಂದಾಗಿದೆ. ಇದರ ನಂತರದ ಸ್ಥಾನದಲ್ಲಿ ಎನ್ವಿಡಿಯಾ(Nvidia) ಮತ್ತು ಮೈಕ್ರೋಸಾಫ್ಟ್(Microsoft) ಕಂಪನಿಗಳಿವೆ.
ನವದೆಹಲಿ: ಭಾರತದಲ್ಲಿ ತಂತ್ರಜ್ಞಾನ ಉದ್ಯಮದ ಕ್ಷೇತ್ರದಲ್ಲಿ ಅಡೋಬ್(Adobe) ಅತ್ಯುತ್ತಮ ಕಂಪೆನಿಗಳಲ್ಲಿ ಒಂದಾಗಿದೆ. ಇದರ ನಂತರದ ಸ್ಥಾನದಲ್ಲಿ ಎನ್ವಿಡಿಯಾ(Nvidia) ಮತ್ತು ಮೈಕ್ರೋಸಾಫ್ಟ್(Microsoft) ಕಂಪನಿಗಳಿವೆ. ಗ್ಲೋಬಲ್ ಎಂಪ್ಲಾಯ್ಮೆಂಟ್ ವೆಬ್ಸೈಟ್ ಇನ್ಡಿಡ್ ಇದರ ಬಗ್ಗೆ ಮಂಗಳವಾರ ತನ್ನ ಅಧ್ಯಯನದಲ್ಲಿ ತಿಳಿಸಿದೆ. ವಾಸ್ತವವಾಗಿ ಟಾಪ್ ರಾಕಿಂಗ್ ವರ್ಕ್ ಪ್ಲೇಸ್ ಆಯ್ಕೆ ಮಾಡಲು ಭಾರತೀಯ ಕಂಪನಿಗಳ ಅಧ್ಯಯನ ಮಾಡಲಾಗಿತ್ತು. ಈ ಪಟ್ಟಿಯಲ್ಲಿ ಮಲ್ಟಿ ನ್ಯಾಷನಲ್ ಕಂಪನಿಗಳ ಪ್ರಾಬಲ್ಯ ಮುಂದುವರೆದಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಟ್ಟಿಯಲ್ಲಿ 10 ನೇ ಸ್ಥಾನ ಪಡೆದಿದೆ. ಈ ಪಟ್ಟಿಯಲ್ಲಿರುವ ಏಕೈಕ ಸರ್ಕಾರಿ ಕಂಪನಿ ಕೂಡ ಆಗಿದೆ.
ಟಾಪ್ 15 ಕಂಪನಿಗಳಲ್ಲಿ ಟಿಸಿಎಸ್ ಕೂಡಾ ಸೇರಿದೆ:
ಟಾಪ್ 10 ಕಂಪನಿಗಳಲ್ಲಿ SAP, ಅಕಾಮಾಯ್ ಟೆಕ್ನಾಲಜೀಸ್, VMware, ಸಿಸ್ಕೋ, ಇಂಟೆಲ್ ಮತ್ತು ಸಿಟ್ರಿಕ್ಸ್ ಸಿಸ್ಟಮ್ಸ್ ಇಂಕ್ ಸೇರಿವೆ. ವರದಿಯಲ್ಲಿ ಟಾಪ್ 5 ಕಂಪನಿಗಳಲ್ಲಿ ಮಲ್ಟಿ ನ್ಯಾಷನಲ್ ಕಂಪನಿಗಳು(MNCs) ಸೇರಿವೆ. ಉದ್ಯೋಗ ಹುಡುಕುವವರಿಗೆ ತಮ್ಮ ಉತ್ತಮವಾದ ವೃತ್ತಿ ಜೀವನ ಪ್ರಾರಂಭಿಸಾಲು ಭಾರತೀಯ ಮಲ್ಟಿ ನ್ಯಾಷನಲ್ ಕಂಪನಿಗಳು ಉತ್ತಮ ಆಯ್ಕೆ ಎಂಬುದು ಸ್ಪಷ್ಟ ಸೂಚನೆಯಾಗಿದೆ. ಟಾಪ್ 15 ಕಂಪನಿಗಳಲ್ಲಿ ಇ-ಕಾಮರ್ಸ್ ಕಂಪೆನಿ, ಮಿಂತ್ರಾ ಮತ್ತು ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಯಂತಹ ಭಾರತೀಯ ಕಂಪೆನಿಗಳು ಸೇರಿರುವುದು ಹೆಮ್ಮೆಯ ವಿಷಯವಾಗಿದೆ.
ಇದಕ್ಕೂ ಮೊದಲು ಫಾರ್ಚ್ಯೂನ್ ಬಿಡುಗಡೆ ಮಾಡಿದ ವಿಶ್ವದ ಅತ್ಯುತ್ತಮ ವರ್ಕ್ ಪ್ಲೇಸ್ ಪಟ್ಟಿಯಲ್ಲಿ ಸತತ ಎರಡನೆಯ ವರ್ಷದಲ್ಲಿ ಸೇಲ್ಸ್ಫೋರ್ಸ್ ಒಂದನೇ ಸ್ಥಾನವನ್ನು ಉಳಿಸಿಕೊಂಡಿದೆ. ಇದರ ನಂತರ, ಹಿಲ್ಟನ್ ಎರಡನೆಯ ಸ್ಥಾನದಲ್ಲಿದ್ದರು ಮತ್ತು ಮಾರ್ಸ್ ಮೂರನೆಯ ಸ್ಥಾನದಲ್ಲಿದ್ದರು. ನಾಲ್ಕನೇ ಕಂಪೆನಿ ಬಗ್ಗೆ ಹೇಳುವುದಾದರೆ, ಇಂಟ್ಯೂಟ್ ಇಂಕ್ ಅತ್ಯುತ್ತಮ ವರ್ಕ್ ಪ್ಲೇಸ್ ಆಗಿದೆ.