ನವದೆಹಲಿ: ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಮೇ.3ರವರೆಗೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಮನೆಯ ಅತ್ಯಾವಶ್ಯಕ ವಸ್ತುಗಳ ಖರೀದಿಗಾಗಿ ಮಾತ್ರ ಮನೆಯಿಂದ ಹೊರಬೀಳುವ ಅನುಮತಿ ಇದೆ. ಮನೆಯಿಂದ ಹೊರಬೀಳುವ ವ್ಯಕ್ತಿಗೆ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಲಾಗಿದೆ.


COMMERCIAL BREAK
SCROLL TO CONTINUE READING

ಆದರೆ, ಹಲವೆಡೆ ಜನರು ಸರ್ಕಾರ ಜಾರಿಗೊಳಿಸಿರುವ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಎಲ್ಲಾ ರಾಜ್ಯಗಳ ಪೊಲೀಸರು ಇಂತಹ ಜನರಲ್ಲಿ ತಿಳುವಳಿಕೆ ಮೂಡಿಸಲು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಒಂದೆಡೆ ಪೊಲೀಸರು ಇವರಲ್ಲಿ ಅರಿವೂ ಮೂಡಿಸಲು ಹಾಡುಗಳನ್ನು ಹೇಳುತ್ತಿದ್ದರೆ, ಇನ್ನೂ ಕೆಲವೆಡೆ ಇಂತವರಿಗೆ ಪೊಲೀಸರು ಶಿಕ್ಷೆ ನೀಡುವ ಮೂಲಕ ಕೂಡ ಪಾಠ ಕಲಿಸುತ್ತಿದ್ದಾರೆ.



ಏತನ್ಮಧ್ಯೆ ಇಂತಹ ಜನರಿಗೆ ತಕ್ಕ ಪಾಠ ಕಲಿಸಲು ತಮಿಳುನಾಡು ಪೊಲೀಸರು ಹೊಸ ವಿಧಾನವೊಂದನ್ನು ಹುಡುಕಿದ್ದಾರೆ. ಲಾಕ್ ಡೌನ್ ಅವಧಿಯಲ್ಲಿ ಅನಾವಶ್ಯಕವಾಗಿ ರಸ್ತೆಗೆ ಇಳಿಯುವವರನ್ನು ತಮಿಳುನಾಡು ಪೊಲೀಸರು ಅವರನ್ನು ತಡೆದು ಬಲವಂತವಾಗಿ ಅಂಬ್ಯುಲೆನ್ಸ್ ವೊಂದಕ್ಕೆ ತಳ್ಳುತ್ತಿದ್ದಾರೆ. ಅಂಬ್ಯುಲೆನ್ಸ್ ನಲ್ಲಿ ಸಾಮಾನ್ಯ ಪೆದೆಯೋರ್ವನಿಗೆ ಕೊರೊನಾ ಸೊಂಕಿತನ ನಾಟಕ ಮಾಡಲು ಹೇಳಲಾಗಿದೆ. ಇದನ್ನು ಗಮನಿಸಿದ ಜನರು ಅಂಬ್ಯೂಲೆನ್ಸ್ ಒಳಗೆ ಹೋಗಲು ಭಯಪಡುತ್ತಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಅಂಬ್ಯೂಲೆನ್ಸ್ ನಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ವಿಡಿಯೋ ಕೊನೆಯಲ್ಲಿ ಪೊಲೀಸರು ಈ ಕೊರೊನಾ ವೈರಸ್ ಕುರಿತಾದ ಜಾಗೃತಿ ಸಂದೇಶವನ್ನು ನೀಡಿ ಜನರಿಗೆ ಮನೆಯಿಂದ ಹೊರಬೀಳದಂತೆ ಮನವಿ ಮಾಡಿದ್ದಾರೆ. ಈ ವಿಡಿಯೋ ಅನ್ನು ನೀವೂ ನೋಡಿ..