ನವದೆಹಲಿ: ಜನರಿಗೆ ಹಲವು ಏಕಕಾಲಕ್ಕೆ ಹಲವು ಇ-ಮೇಲ್ ಗಳನ್ನು ಕಳುಹಿಸುವ ಮೂಲಕ ವಂಚನೆಗಳನ್ನು ಎಸಗಲಾಗುತ್ತಿರುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಇ-ಮೇಲ್ ಗಳ ಮೂಲಕ ನಿಮ್ಮ ಕಂಪ್ಯೂಟರ್ ಅನ್ನು ಹ್ಯಾಕ್ ಮಾಡಲಾಗಿದೆ, ನಿಮ್ಮ ಪಾಸ್ ವರ್ಡ್ ಅನ್ನೂ ಕೂಡ ಪಡೆದುಕೊಳ್ಳಲಾಗಿದೆ, ವೆಬ್ ಕ್ಯಾಮ್ ಬಳಸಿ ನಿಮ್ಮ ಆಕ್ಷೇಪಾರ್ಹ ವಿಡಿಯೋ ಅನ್ನು ಚಿತ್ರೀಸಲಾಗಿದೆ ಎಂದು ಬೆದರಿಕೆಯೊಡ್ಡಿ ಹಣ ಸುಲಿಗೆ ಮಾಡಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (CERT-in) ಜನರಿಂದ ಸುಲಿಗೆ ಮಾಡುವ ಈ ರೀತಿಯ ಇ-ಮೇಲ್ ವಂಚನೆ ಕುರಿತು ಎಚ್ಚರಿಕೆಯಿಂದ ಇರಲು ಸೂಚಿಸಿದೆ. ಅಷ್ಟೆ ಅಲ್ಲ ಈ ರೀತಿಯ ಇ-ಮೇಲ್ ಗಳಿಗೆ ಹೆದರುವ ಅಗತ್ಯತೆ ಕೂಡ ಇಲ್ಲ ಎಂದು ಸಂಸ್ಥೆ ಹೇಳಿದೆ.


ಕಂಪ್ಯೂಟರ್ ಹಾಗೂ ಇ-ಮೇಲ್ ಖಾತೆಗಳನ್ನು ಹ್ಯಾಕ್ ಮಾಡಿದ ಕುರಿತು ಕೆಲ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ವಂಚನೆ ಎಸಗುತ್ತಿರುವ ಈ ಜನರು ಬಿಟ್ ಕಾಯಿನ್ ಅಥವಾ ಟ್ರೇಸ್ ಮಾಡದೆ ಬಾರದ ಮಾಧ್ಯಮದ ಮೂಲಕ ಪೇಮೆಂಟ್ ಮಾಡಲು ಹೇಳುತ್ತಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಹಣ ನೀಡದೆ ಹೋದಲ್ಲಿ ಅಂತವರ ಖಾಸಗಿ ಚಿತ್ರಗಳನ್ನು ಹಾಗೂ ವೈಯಕ್ತಿಕ ಸೂಕ್ಷ್ಮ ಮಾಹಿತಿಯನ್ನು ಸಾರ್ವಜನಿಕಗೊಳಿಸಲಾಗುವುದು ಎಂದು ಬೆದರಿಕೆ ಸಹ ನೀಡಲಾಗುತ್ತಿದೆ ಎನ್ನಲಾಗಿದೆ.


CERT ಜಾರಿಗೊಳಿಸಿರುವ ಅಡ್ವೈಸರಿ ಪ್ರಕಾರ, ನಿಮ್ಮ ಇ-ಮೇಲ್ ಅನ್ನು ಹ್ಯಾಕ್ ಮಾಡಲಾಗಿರುವ ಕುರಿತು ತೋರಿಸಲಾಗುವ ಸಾಕ್ಷ್ಯಗಳಲ್ಲಿ ಬಳಕೆದಾರರು ಈ ಹಿಂದೆ ಬಳಸಿದ ಪಾಸ್ವರ್ಡ್ ಗಳನ್ನು ತೋರಿಸಲಾಗುತ್ತದೆ ಎಂದು ಹೇಳಿದೆ. ಆದರೆ, ನಿಮ್ಮ ಅಕೌಂಟ್ ಅನ್ನು ಹ್ಯಾಕ್ ಮಾಡಿ ಖದೀಮರು ಈ ಮಾಹಿತಿಯನ್ನು ಪಡೆಯಲು ಸಾಧ್ಯವಿಲ್ಲ. ಆನ್ಲೈನ್ ನಲ್ಲಿ ಹಂಚಿಕೊಳ್ಳಲಾದ ಡೇಟಾ ಲೀಕ್ ಮೂಲಕ ಮಾತ್ರ ಇದು ಸಾಧ್ಯ ಅಂದು ಸಂಸ್ಥೆ ಹೇಳಿದೆ.


ಇದಕ್ಕೆ ಸಂಬಂಧಿಸಿದಂತೆ ಹೇಳಿದೆ ನೀಡಿರುವ CERT ಇಂತಹ ಇ-ಮೇಲ್ ಗಳು ಫೇಕ್ ಇ-ಮೇಲ್ ಗಳಾಗಿದ್ದು, ಚಿಂತಿಸುವ ಅಗತ್ಯತೆ ಇಲ್ಲ. ಇಂತಹ ಇ-ಮೇಲ್ ಕಳುಹಿಸುವ ವಂಚಕರಿಗೆ ಯಾವುದೇ ರೀತಿಯ ಹಣ ನೀಡುವ ಅಗತ್ಯತೆ ಇಲ್ಲ ಎಂದು ಹೇಳಿದೆ.


ಹೇಗೆ ವಂಚನೆ ಎಸಗಲಾಗುತ್ತಿದೆ?
ಮೊದಲು ನಿಮ್ಮ ಗಮನವನ್ನು ಸೆಳೆಯಲು ನಿಮ್ಮ ಖಾತೆಗೆ ಸಂಬಂಧಿಸಿದ ಹಳೆ ಪಾಸ್ವರ್ಡ ಕಳುಹಿಸುತ್ತಾರೆ. ವಂಚಕರು ಕಳುಹಿಸುವ ಇ-ಮೇಲ್ ಫಾರ್ಮ್ಯಾಟ್ ಈ ಕೆಳಕಂಡಂತೆ ಇರುತ್ತದೆ.

" ನನಗೆ ಗೊತ್ತು xxx ನಿಮ್ಮ ಪಾಸ್ವರ್ಡ್ ಆಗಿದೆ. ನಿಮಗೆ ನನ್ನ ಪರಿಚಯ ಇಲ್ಲ ಹಾಗೂ ನಿಮಗೆ ಈ ಇ-ಮೇಲ್ ಯಾಕೆ ಕಳುಹಿಸಲಾಗಿದೆ ಎಂಬುದನ್ನು ನೀವು ಯೋಚಿಸುತ್ತಿರಬಹುದು" ಎಂದು ಕಳುಹಿಸುತ್ತಾರೆ. ಬಳಿಕ ಕಂಪ್ಯೂಟರ್ ಗೆ ಸಂಬಂಧಿಸಿದ ತಾಂತ್ರಿಕ ಶಬ್ದಗಳನ್ನು ಬಳಸಿ ವಂಚಕರು ತಾವು ತುಂಬಾ ಪರಿಣಿತಿ ಹೊಂದಿರುವ ಕುರಿತು ಪೋಸ್ ನೀಡಿ, ನಿಮ್ಮ ವೈಯಕ್ತಿಕ ವಿಡಿಯೋ ಖಾಸಗಿ ಭಾವಚಿತ್ರಗಳನ್ನು ರಿಕಾರ್ಡ್ ಮಾಡಲಾಗಿದೆ ಎಂದು ಹೇಳುತ್ತಾರೆ. ಅಷ್ಟೇ ಅಲ್ಲ ಇದಕ್ಕಾಗಿ ನಿಮ್ಮ ಕಂಪ್ಯೂಟರ್ ನ ವೆಬ್ ಕ್ಯಾಮ್ ಬಳಸಲಾಗಿದೆ ಎಂದೂ ಕೂಡ ಹೇಳುತ್ತಾರೆ.


ಇದಾದ ಬಳಿಕ ಹಣ ಸುಲಿಗೆಯ ಕೆಲಸ ಆರಂಭವಾಗುತ್ತದೆ. ಬಿಟ್ ಕಾಯಿನ್ ಅಥವಾ ಟ್ರೇಸ್ ಮಾಡಲು ಆಗದೆ ಇರುವ ಪೇಮೆಂಟ್ ಮಾಧ್ಯಮದ ಮೂಲಕ ವಂಚಕರು ಸುಲಿಗೆ ಮಾಡಲು ಯತ್ನಿಸುತ್ತಾರೆ. ಜೊತೆಗೆ ನಿಮಗೆ 24 ಗಂಟೆಗಳ ಕಾಲಾವಕಾಶ ಕೂಡ ನೀಡುತ್ತಾರೆ. ಒಂದು ವೇಳೆ ಹಣ ನೀಡದೆ ಹೋದಲ್ಲಿ ನಿಮ್ಮ ಖಾಸಗಿ ಭಾವಚಿತ್ರ ಹಾಗೂ ವಿಡಿಯೋಗಳನ್ನು ಸಾರ್ವಜನಿಕಗೊಳಿಸುವ ಧಮ್ಕಿ ಕೂಡ ನೀಡುತ್ತಾರೆ.