ನವದೆಹಲಿ:Facebook ತನ್ನ ಮೆಸೇಜಿಂಗ್ ಆಪ್ WhatsAppನಲ್ಲಿ ಬಳಕೆದಾರರ ಅನುಭವವನ್ನು ದಿನದಿಂದ ಹೆಚ್ಚಿಸಲು ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಇದೀಗ ಚಾಟಿಂಗ್ ಸೇರಿದಂತೆ ವಿಡಿಯೋ ಕಾಲಿಂಗ್, ಫೋಟೋ ಮತ್ತು gif ಹಂಚಿಕೊಳ್ಳುವಿಕೆ ಮತ್ತಷ್ಟು ಇಂಟರೆಸ್ಟಿಂಗ್ ಆಗಿ ಮಾರ್ಪಟ್ಟಿವೆ. ಆದರೆ, ವಾಟ್ಸ್ ಆಪ್ ತನ್ನ ಬಳಕೆದಾರರ ಖಾಸಗಿತನ ಕಾಪಾಡುವ ನಿಟ್ಟಿನಲ್ಲಿ ವಾಟ್ಸ್ ಆಪ್ ತೀರಾ ಗಂಭೀರವಾಗಿದೆ ಎಂಬುದು ನೆನಪಿನಲ್ಲಿ ಇಟ್ಟುಕೊಳ್ಳುವುದು ಅವಶ್ಯಕವಾಗಿದೆ. ಅಷ್ಟೇ ಅಲ್ಲ ವಾಟ್ಸ್ ಆಪ್ ನ ನೀತಿ ನಿಯಮಗಳನ್ನು ಒಂದು ವೇಳೆ ಉಲ್ಲಂಘಿಸಿ ಯಾರಾದರು ವಾಟ್ಸ್ ಆಪ್ ನ ಬಳಕೆಗೆ ಮುಂದಾದರೆ ವಾಟ್ಸ್ ಆಪ್ ಅಂತವರ ಖಾತೆಯನ್ನು ಬಂದ್ ಮಾಡುವ ಸಾಧ್ಯತೆ ಇದೆ. ಈ ಕುರಿತು ತನ್ನ ಗೈಡ್ ಲೈನ್ಸ್ ನಲ್ಲಿ ಹೇಳಿಕೊಂಡಿರುವ ಕಂಪನಿ, ಬಳಕೆದಾರರ ಖಾಸಗಿತನ ಕಾಪಾಡುವಲ್ಲಿ ಬದ್ಧವಾಗಿದೆ ಎಂದಿದೆ.


COMMERCIAL BREAK
SCROLL TO CONTINUE READING

ಈ ಕೆಳಗೆ ನಮೂದಿಸಿದ ಸಂಗತಿಗಳ ಕುರಿತು ಎಚ್ಚರಿಕೆ ವಹಿಸಿ
1.ಹಲವು ಬಾರಿ ವಾಟ್ಸ್ ಆಪ್ ನಲ್ಲಿ ನಿಮಗೆ ಪರಿಚಯವಿಲ್ಲದವರೂ ಕೂಡ ಸಂದೇಶ ಕಳುಹಿಸುವ ಸೌಲಭ್ಯ ಇದೆ. ಇಂತಹ ಸಂದರ್ಭದಲ್ಲಿ ನೀವು ಅವರ ಸಂದೇಶವನ್ನು ನಿರ್ಬಂಧಿಸಬಹುದಾಗಿದೆ. ಹಲವು ಬಾರಿ ಆಟೋಮ್ಯಾಟೆಡ್ ಗ್ರೂಪ್ ಗಳು ಸಂದೇಶ ಕಳುಹಿಸಲು ನಿಮ್ಮ ಸಂಖ್ಯೆ ಆಯ್ಕೆ ಮಾಡುತ್ತವೆ.  ಇಂತಹ ಖಾತೆಗಳ ಕುರಿತು ವಾಟ್ಸ್ ಆಪ್ ಗೆ ತಿಳಿದರೆ, ಆ ಖಾತೆ ಖುದ್ದಾಗಿ ಡಿಆಕ್ಟಿವೇಟ್ ಆಗಲಿದೆ.
2.ತನ್ನ ಪ್ಲಾಟ್ಫಾರ್ಮ್ ಬಳಸಿ ವೈರಸ್ ಹಾಗೂ ಮಾಲ್ವೇರ್ ಕಳುಹಿಸುವುದನ್ನು ವಾಟ್ಸ್ ಆಪ್ ನಿರ್ಬಂಧಿಸುತ್ತದೆ. ಇಂತಹ ಫೈಲ್ ಯಾರಾದರು ಕಳುಹಿಸಿದರೆ ಅವರ ವಾಟ್ಸ್ ಆಪ್ ಖಾತೆ ಬ್ಯಾನ್ ಆಗಲಿದೆ.
3.ವಾಟ್ಸ್ ಆಪ್ ನಲ್ಲಿರುವ ಬ್ರಾಡ್ ಕಾಸ್ಟ್ ಲಿಸ್ಟ್ ಅನ್ನು ಆದಷ್ಟು ಕಡಿಮೆ ಬಳಕೆ ಮಾಡಿ.
4.ಯಾರಾದರೆ ಮೇಲೆ ನಿಗಾವಹಿಸಲು ಒಂದು ವೇಳೆ ನೀವು ವಾಟ್ಸ್ ಆಪ್ ಸರ್ವರ್ ಅನ್ನು ಹ್ಯಾಕ್ ಮಾಡಲು ಮುಂದಾದರೆ, ನೀವು ನಿಮ್ಮ ಖಾತೆಯಿಂದ ಕೈತೊಳೆದುಕೊಳ್ಳಬೇಕಾಗುತ್ತದೆ.
5.ಯಾವುದೇ ಥರ್ಡ್ ಪಾರ್ಟಿ ಆಪ್ ಗಳ ಬಳಕೆಯನ್ನು ವಾಟ್ಸ್ ಆಪ್ ನಿರ್ಬಂಧಿಸುತ್ತದೆ. ಈಗಾಗಲೇ Whats App mods, WhatsApp Plus, YoWhatsApp ಹಾಗೂ FMWhatsAppಗಳಂತಹ ಆಪ್ ಗಳ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ.