IND vs ZIM: ಇತಿಹಾಸ ಸೃಷ್ಟಿಸಿದ ರಿಯಾನ್‌ ಪರಾಗ್‌..!

Riyan Parag: ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಇತಿಹಾಸ ಸೃಷ್ಟಿಸಿದ್ದಾರೆ. ಶನಿವಾರ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಈಶಾನ್ಯ ರಾಜ್ಯಗಳ ಮೊದಲ ಆಟಗಾರ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  

Written by - Zee Kannada News Desk | Last Updated : Jul 7, 2024, 07:24 AM IST
  • ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಇತಿಹಾಸ ಸೃಷ್ಟಿಸಿದ್ದಾರೆ.
  • ಈಶಾನ್ಯ ರಾಜ್ಯಗಳ ಯಾವುದೇ ಆಟಗಾರ ಈ ಮೊದಲು ಟೀಮ್ ಇಂಡಿಯಾವನ್ನು ಪ್ರತಿನಿಧಿಸಲಿಲ್ಲ.
  • ಈ ವಿಶೇಷವಾದ ಟೀಂ ಇಂಡಿಯಾ ಕ್ಯಾಪ್‌ ಅನ್ನು ರಾಯನ್‌ ಪರಾಗ್‌ ತನ್ನ ತಂದೆಯ ಕೈಯಲ್ಲಿ ತೆಗೆದುಕೊಂಡರು.
IND vs ZIM: ಇತಿಹಾಸ ಸೃಷ್ಟಿಸಿದ ರಿಯಾನ್‌ ಪರಾಗ್‌..! title=

Riyan Parag: ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ರಿಯಾನ್ ಪರಾಗ್ ಇತಿಹಾಸ ಸೃಷ್ಟಿಸಿದ್ದಾರೆ. ಶನಿವಾರ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ ಈಶಾನ್ಯ ರಾಜ್ಯಗಳ ಮೊದಲ ಆಟಗಾರ ಎಂಬ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈಶಾನ್ಯ ರಾಜ್ಯಗಳ ಯಾವುದೇ ಆಟಗಾರ ಈ ಮೊದಲು ಟೀಮ್ ಇಂಡಿಯಾವನ್ನು ಪ್ರತಿನಿಧಿಸಲಿಲ್ಲ. ರಿಯಾನ್ ಪರಾಗ್‌ ಅವರು ಈಶಾನ್ಯ ರಾಜ್ಯಗಳ ಅಂಡರ್-19 ವಿಶ್ವಕಪ್‌ನಲ್ಲಿ ಆಡಿದ ಮೊದಲ ಆಟಗಾರರಾಗಿದ್ದು, 2018 ರ ಅಂಡರ್-19 ವಿಶ್ವಕಪ್‌ನಲ್ಲೂ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ: ಕೆಕೆಆರ್‌ ಗೆ ಗುಡ್‌ ಬೈ ಹೇಳಿದ ಗೌತಮ್‌ ಗಂಭೀರ್‌..!

ಇದುವರೆಗೆ 115 ಟಿ20 ವೃತ್ತಿಪರ ಪಂದ್ಯಗಳನ್ನು ಆಡಿರುವ ರಯಾನ್ ಪರಾಗ್ ಒಟ್ಟು 2618 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 22 ಅರ್ಧ ಶತಕಗಳಿವೆ. ಐಪಿಎಲ್ 2024 ರ ಋತುವಿನಲ್ಲಿ ರಾಜಸ್ಥಾನ ರಾಯಲ್ಸ್ ಪರ 15 ಪಂದ್ಯಗಳಲ್ಲಿ 573 ರನ್ ಗಳಿಸಿದ್ದಾರೆ.ಈ ಪ್ರದರ್ಶನದೊಂದಿಗೆ ರಿಯಾನ್ ಪರಾಗ್ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಈ ವಿಶೇಷವಾದ ಟೀಂ ಇಂಡಿಯಾ ಕ್ಯಾಪ್‌ ಅನ್ನು ರಾಯನ್‌ ಪರಾಗ್‌ ತನ್ನ ತಂದೆಯ ಕೈಯಲ್ಲಿ ತೆಗೆದುಕೊಂಡರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್‌ ಆಗುತ್ತಿದೆ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News