Bharat Bandh: ನಾಳೆ ಏನಿರುತ್ತೆ? ಏನಿರಲ್ಲ?
Bharat Bandh: ನಾಳೆ ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಹಲವು ಸಾರಿಗೆ ಸಂಸ್ಥೆಗಳು, ಬ್ಯಾಂಕಿಂಗ್ ಯೂನಿಯನ್, ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಸಹ ಸಹಕಾರ ನೀಡಲು ಮುಂದಾಗಿವೆ.
ನವದೆಹಲಿ: ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ಐದನೇ ಹಂತದ ಸಭೆಯ ನಂತರವೂ ಯಾವುದೇ ಪ್ರಯೋಜನ ಆಗಿಲ್ಲ. ಡಿಸೆಂಬರ್ 9 ರಂದು ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ. ಆದರೆ ಈ ಮಧ್ಯೆ ಡಿಸೆಂಬರ್ 8 ರಂದು ರೈತರ ಸಂಘಟನೆಗಳು ರಾಷ್ಟ್ರವ್ಯಾಪಿ 'ಭಾರತ್ ಬಂದ್' ಗೆ ಕರೆ ನೀಡಿವೆ. ರೈತರ ಆಂದೋಲನಕ್ಕೆ ವಿರೋಧ ಪಕ್ಷಗಳು, ಕಾರ್ಮಿಕ ಸಂಘಗಳು, ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳ ಬೆಂಬಲವೂ ಸಿಗುತ್ತಿದೆ. ರಾಷ್ಟ್ರವ್ಯಾಪಿ ಮುಷ್ಕರದ ಮಧ್ಯೆ ಸೇವಾ ಕ್ಷೇತ್ರದ ಸೇವೆಗಳ ಮೇಲೂ ಪರಿಣಾಮ ಬೀರುವ ನಿರೀಕ್ಷೆಯಿದೆ. ದೆಹಲಿ-ಎನ್‌ಸಿಆರ್ ಮತ್ತು ಹರಿಯಾಣದಲ್ಲಿ ಬಂದ್‌ನ ಗರಿಷ್ಠ ಪರಿಣಾಮವನ್ನು ಕಾಣಬಹುದು.
ರೈತ ಮುಖಂಡ ಬಲದೇವ್ ಸಿಂಗ್ ಯಾದವ್ ಮಾತನಾಡಿ, 'ನಾವು ಡಿಸೆಂಬರ್ 8 ರಂದು ಭಾರತ್ ಬಂದ್ ಘೋಷಿಸಿದ್ದೇವೆ. ಭಾರತ್ ಬಂದ್ (Bharat Bandh) ಬೆಳಿಗ್ಗೆಯಿಂದ ಪ್ರಾರಂಭವಾಗುತ್ತದೆ. ಮುಷ್ಕರದ ಸಮಯದಲ್ಲಿ ಅಂಗಡಿಗಳು ಮತ್ತು ವ್ಯವಹಾರಗಳು ಮುಚ್ಚಲ್ಪಡುತ್ತವೆ. ಆದಾಗ್ಯೂ ಆಂಬ್ಯುಲೆನ್ಸ್‌ಗಳು ಸೇರಿದಂತೆ ಇತರ ತುರ್ತು ಸೇವೆಗಳು ಬಂದ್ ಸಮಯದಲ್ಲಿ ಕಾರ್ಯನಿರ್ವಹಿಸುತ್ತಲೇ ಇರುತ್ತವೆ ಎಂದು ಹೇಳಿದ್ದಾರೆ.
ನಾಳೆ ರೈತರು ಕರೆ ನೀಡಿರುವ ‘ಭಾರತ ಬಂದ್’ಗೆ ಭಾರೀ ಬೆಂಬಲ
ಆಟೋ ಮತ್ತು ಟ್ಯಾಕ್ಸಿ ಯೂನಿಯನ್‌ಗಳು ಭಾರತ್ ಬಂದ್‌ಗೆ ಸೇರ್ಪಡೆಯಾಗುವುದರಿಂದ ಸಾರ್ವಜನಿಕರ ಪ್ರಯಾಣಕ್ಕೆ ತೊಂದರೆ ಉಂಟಾಗಬಹುದು. ದೆಹಲಿ ಟ್ಯಾಕ್ಸಿ ಪ್ರವಾಸಿ ಸಾರಿಗೆ ಸಂಘದ ಅಧ್ಯಕ್ಷ ಸಂಜಯ್ ಸಾಮ್ರಾಟ್ ಅವರು ದೆಹಲಿ ರಾಜ್ಯ ಟ್ಯಾಕ್ಸಿ (Taxi) ಕೋಆಪರೇಟಿವ್ ಸೊಸೈಟಿ ಮತ್ತು ಕೌಮಿ ಏಕ್ತಾ ವೆಲ್ಫೇರ್ ಅಸೋಸಿಯೇಷನ್ ಸಹ ಡಿಸೆಂಬರ್ 8 ರಂದು ಭಾರತ್ ಬಂದ್‌ಗೆ ಬೆಂಬಲ ನೀಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮುಖ್ಯವಾಗಿ ಓಲಾ-ಉಬರ್ ಚಾಲಕರನ್ನು ಒಳಗೊಂಡಿರುವ ಸರ್ವೋದಯ ಚಾಲಕರ ಸಂಘವೂ ಸಹ ಬೆಂಬಲ ನೀಡಲಿದೆ.
ಭಾರತ್ ಬಂದ್ ಸಮಯದಲ್ಲಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ:
ಅನೇಕ ಬ್ಯಾಂಕಿಂಗ್ ಒಕ್ಕೂಟಗಳು ರೈತ ಚಳವಳಿಗೆ (Farmers Protest) ಬೆಂಬಲ ವ್ಯಕ್ತಪಡಿಸಿವೆ. ಇದರಿಂದಾಗಿ ಡಿಸೆಂಬರ್ 8 ರಂದು ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು. ಈ ಒಕ್ಕೂಟಗಳು ರೈತರ ಸಮಸ್ಯೆಯನ್ನು ಆದಷ್ಟು ಬೇಗ ನಿವಾರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿವೆ.
ಮತ್ತೆ ಡಿ.8 ರಂದು ರಾಜ್ಯ ರೈತರಿಂದ 'ಕರ್ನಾಟಕ ಬಂದ್ ಗೆ ಕರೆ'
ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ) ಮತ್ತು ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್‌ಬಿಒಸಿ) ರೈತರ ಸಮಸ್ಯೆಯನ್ನು ಪರಿಹರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿವೆ. ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಹೇಳಿಕೆಯಲ್ಲಿ ಸರ್ಕಾರ ಮುಂದೆ ಬಂದು ರೈತರ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದೆ.
ಇನ್ನು ಮೊದಲೇ ನಿಶ್ಚಯವಾಗಿರುವ ಮದುವೆ ಮತ್ತು ಔತಣಕೂಟಗಳನ್ನು ಹೊರತುಪಡಿಸಿ ಡಿಸೆಂಬರ್ 8 ರಂದು ಎಲ್ಲಾ ಹೋಟೆಲ್‌ಗಳು, ರೆಸಾರ್ಟ್‌ಗಳು ಮತ್ತು ಬಾರ್‌ಗಳನ್ನು ಮುಚ್ಚಲಾಗುವುದು ಎಂದು ಪಂಜಾಬ್‌ನ ಹೊಟಾನ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್ ಹೇಳಿದೆ.