ಮತ್ತೆ ಡಿ.8 ರಂದು ರಾಜ್ಯ ರೈತರಿಂದ 'ಕರ್ನಾಟಕ ಬಂದ್ ಗೆ ಕರೆ'

ದೆಹಲಿಯ ಹೊರಗಡೆ ರೈತರನ್ನು ತಡೆಯುವ ಮೂಲಕ ರೈತರ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಕೆಲಸ

Last Updated : Dec 6, 2020, 02:00 PM IST
  • ದೆಹಲಿಯ ಹೊರಗಡೆ ರೈತರನ್ನು ತಡೆಯುವ ಮೂಲಕ ರೈತರ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಕೆಲಸ
  • ಇದೇ 8 ರಂದು ಭಾರತ ಬಂದ್ ಗೆ ಕರೆ ನೀಡಲಾಗಿದೆ.. ಹಾಗೆ ನಾವು ಕರ್ನಾಟಕ ಬಂದ್ ಗೆ ಕರೆ ನೀಡಿದ್ದೇವೆ
  • ಸರ್ಕಾರ ಕೇವಲ ಬೇಜವಬ್ದಾರಿಯಾಗಿ ಮಾತನಾಡುತ್ತಿದೆ. ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ
ಮತ್ತೆ ಡಿ.8 ರಂದು ರಾಜ್ಯ ರೈತರಿಂದ 'ಕರ್ನಾಟಕ ಬಂದ್ ಗೆ ಕರೆ' title=

ಬೆಂಗಳೂರು: ದೆಹಲಿಯ ಹೊರಗಡೆ ರೈತರನ್ನು ತಡೆಯುವ ಮೂಲಕ ರೈತರ ಹೋರಾಟವನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡಿದೆ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರ ಕೇವಲ ಬೇಜವಬ್ದಾರಿಯಾಗಿ ಮಾತನಾಡುತ್ತಿದೆ. ಸರ್ಕಾರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ... ಇದೇ 8 ರಂದು ಭಾರತ ಬಂದ್(Bharat Bandh) ಗೆ ಕರೆ ನೀಡಲಾಗಿದೆ.. ಹಾಗೆ ನಾವು ಕರ್ನಾಟಕ ಬಂದ್ ಗೆ ಕರೆ ನೀಡಿದ್ದೇವೆ ಎಂದರು.

ಹಲವು ಗ್ರಾ.ಪಂ. ಚುನಾವಣೆ ಕೈ ಬಿಟ್ಟ ಆಯೋಗ! ಪಟ್ಟಿಯಲ್ಲಿ ನಿಮ್ಮೂರು ಇದೆಯಾ?

 ಕರ್ನಾಟಕದ ಎಲ್ಲಾ ಜಿಲ್ಲೆ,ತಾಲ್ಲೂಕುಗಳಲ್ಲಿ ರೈತರು ಭಾಗವಹಿಸುತ್ತಾರೆ. 9ನೇ ತಾರೀಖು ವಿಧಾನಸೌಧ ಮುತ್ತಿಗೆ ಹಾಕಲಾಗುವುದು. 10ನೇ ತಾರೀಖು ಸಾರಿಗೆ ನೌಕರರು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಪ್ರತಿಭಟನೆ ನಡೆಸಲಾಗುತ್ತದೆ. ರೈತರು ಅಹಿಂಸಾತ್ಮಕವಾಗಿ ಚಳುವಳಿ ಮಾಡುತ್ತಿದ್ದಾರೆ. ಜಗತ್ತಿನಾದ್ಯಂತ ಈ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

Students: 8, 9, 10 ನೇ ತರಗತಿ ವಿದ್ಯಾರ್ಥಿಗಳಿಗೆ ಇಲ್ಲಿದೆ ಬಹು ಮುಖ್ಯ ಮಾಹಿತಿ..!

ಕರ್ನಾಟಕದ ಎಲ್ಲಾ ರಸ್ತೆಗಳನ್ನು ಬಂದ್ ಮಾಡಬೇಕು. ನಗರಗಳನ್ನು ರೈತರು ಬಂದ್ ಮಾಡಬೇಕು. 9ನೇ ತಾರೀಖು ರೈತರು ಬಾರುಕೋಲು ಬೀಸುವ ಮೂಲಕ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. 10ನೇ ತಾರೀಖು ಸಾರಿಗೆ ನೌಕರರು ಸಿಟಿ ರೈಲ್ವೆ ನಿಲ್ದಾಣದಿಂದ ವಿಧಾನಸೌಧಕ್ಕೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.

BJP: ಬಿಜೆಪಿ ಕಾರ್ಯಕಾರಿಣಿಯಲ್ಲಿ ಎರಡು ಮಹತ್ವದ ನಿರ್ಣಯ..!

ಭಾರತ ಬಂದ್ ದಿನ ಎಲ್ಲಾ ಹೆದ್ದಾರಿ, ರಸ್ತೆಗಳನ್ನು ಬಂದ್ ಮಾಡ್ತೇವೆ. ಬಂದ್ ಗೆ ಎಡಪಕ್ಷದವರು,ಪುಟ್ಟಣ್ಣಯ್ಯನವರ ರೈತ ಸಂಘಟನೆ, ಕುರುಬೂರು ಶಾಂತಕುಮಾರ್ ಸಂಘಟನೆಯವರು ಭಾಗವಹಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.

Congress: ಗ್ರಾ.ಪಂ. ಚುನಾವಣೆ: ಕ್ಷೇತ್ರವಾರು ಉಸ್ತುವಾರಿಗಳನ್ನು ನೇಮಕ ಮಾಡಿದ ಕಾಂಗ್ರೆಸ್!

 

Trending News