New Strain of COVID-19 in UK:ಬ್ರಿಟನ್ ನಲ್ಲಿ ಸಿಕ್ಕ ಕೊರೊನಾ ವೈರಸ್ ನ ಹೊಸ ಸ್ವರೂಪದ ಕುರಿತು ಕೇಂದ್ರದ ಮಹತ್ವದ ಘೋಷಣೆ
New Strain of COVID-19 in UK:ಯುನೈಟೆಡ್ ಕಿಂಗ್ಡಂನಲ್ಲಿ ಕಂಡುಬಂದಿರುವ `COVID-19 ನ ಹೊಸ ಸ್ವರೂಪ ಭಾರತದಲ್ಲಿ ಇನ್ನೂ ಪತ್ತೆಯಾಗಿಲ್ಲ ಎಂದು NITI Ayoga ಸದಸ್ಯ ವಿ.ಕೆ.ಪಾಲ್ ಮಂಗಳವಾರ ಅಧಿಕೃತವಾಗಿ ದೃಢಪಡಿಸಿದ್ದಾರೆ.
ನವದೆಹಲಿ: ಬ್ರಿಟನ್ ನಲ್ಲಿ ಪತ್ತೆಯಾಗಿರುವ Covid-19ರ ಹೊಸ ಸ್ಟ್ರೇನ್ ಕುರಿತು ಭಾರತೀಯರಿಗಾಗಿ ಒಂದು ನೆಮ್ಮದಿಯ ಸುದ್ದಿ ಪ್ರಕಟಗೊಂಡಿದೆ. ಈ ಕುರಿತು ಅಧಿಕೃತ ಮಂಗಳವಾರ ಹೇಳಿಕೆ ನೀಡಿರುವ ನೀತಿ ಆಯೋಗದ ಸದಸ್ಯ ವಿ.ಕೆ. ಪಾಲ್, "UKಯಲ್ಲಿ ಕಂಡುಬಂದಿರುವ ಕೊರೊನಾ ವೈರಸ್ ನ ಹೊಸ ತಳಿ ಇದುವರೆಗೆ ಭಾರತದಲ್ಲಿ ಕಂಡುಬಂದಿಲ್ಲ" ಎಂದು ಹೇಳಿದ್ದಾರೆ.
ಇದನ್ನು ಓದಿ-ಬಹುಭಾಷಾ ತಾರೆ ರಕುಲ್ ಪ್ರೀತ್ ಗೆ ಕೊರೊನಾ ಧೃಢ
Coronavirus) ಕಾರಣ ಸೋಂಕು ಹರಡುವ ಸಾಧ್ಯತೆ ಮತ್ತೆ ಹೆಚ್ಚಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ. ಹಾಗೆ ನೋಡಿದರೆ ಈ ಮ್ಯೂಟೆಶನ್ ಕಾಯಿಲೆಯ ಗಂಭೀರತೆಯನ್ನು ಪ್ರಭಾವಿತಗೊಳಿಸುತ್ತಿಲ್ಲ ಹಾಗೂ ಸೋಂಕಿನಿಂದ ಉಂಟಾಗುತ್ತಿರುವ ಸಾವಿನ ಸಂಖ್ಯೆಗಳ ಮೇಲೆ ಇದು ಪರಿಣಾಮ ಬೀರುತ್ತಿಲ್ಲ" ಎಂದೂ ಕೂಡ ಡಾ. ಪಾಲ್ ಹೇಳಿದ್ದಾರೆ.
ಇದನ್ನು ಓದಿ- Covid-19 Vaccination Program: ಲಸಿಕಾಕರಣ ಕಾರ್ಯಕ್ರಮ ಸ್ವಯಂಪ್ರೆರಿತ ಎಂದ ಕೇಂದ್ರ ಆರೋಗ್ಯ ಸಚಿವಾಲಯ
SOP ಜಾರಿಗೊಳಿಸಿದ ಕೇಂದ್ರ
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಯುಕೆಯಿಂದ ಭಾರತಕ್ಕೆ ಬರುತ್ತಿರುವ ಯಾತ್ರಿಗಳಿಗೆ ನೂತನ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೋಸಿಜರ್ (SOP) ಜಾರಿಗೊಳಿಸಿದೆ. ನೂತನ ಮಾರ್ಗಸೂಚಿಗಳ ಅನುಸಾರ ಯುಕೆಯಿಂದ ಭಾರತಕ್ಕೆ ಬರುತ್ತಿರುವ ಯಾತ್ರಿಗಳು ತಮ್ಮ 14 ದಿನಗಳ ಮೊದಲಿನ ಟ್ರಾವೆಲ್ ಹಿಸ್ಟರಿ ಹಂಚಿಕೊಳ್ಳಲು ಸೂಚಿಸಲಾಗಿದೆ. ಪರೀಕ್ಷೆಗೆ ಬರುವ ಸಂಪೂರ್ಣ ವೆಚ್ಚ ಸರ್ಕಾರ ಭರಿಸಲಿದೆ ಎಂದು ಮಾರ್ಗಸೂಚಿಗಳಲ್ಲಿ ಸ್ಪಷ್ಟಪಡಿಸಲಾಗಿದೆ.
ಇದನ್ನು ಓದಿ-Covid-19: ಲಸಿಕೆ ಯಾವಾಗ, ಎಲ್ಲಿ ಮತ್ತು ಹೇಗೆ ಪಡೆಯುವುದು? ಇಲ್ಲಿದೆ ಮಹತ್ವದ ಮಾಹಿತಿ
ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ನಾಗರಿಕ ವಿಮಾನಯಾನ ಸಚಿವಾಲಯ, "ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿರಲಿದ್ದು, 31 ಡಿಸೆಂಬರ್, 2020ರವರೆಗೆ ಇದು ಜಾರಿಯಲ್ಲಿರಲಿದೆ. ಇದಕ್ಕೂ ಮೊದಲು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ ಡಿಸೆಂಬರ್ 22 ರಿಂದ ಡಿಸೆಂಬರ್ 31ರವರೆಗೆ ಬ್ರಿಟನ್ ನಿಂದ ಭಾರತಕ್ಕೆ ಬಂದಿಳಿಯುವ ವಿಮಾನಗಳನ್ನು ರದ್ದುಗೊಳಿಸಲು ಸೂಚನೆ ನೀಡಿದೆ. ಡಿಸೆಂಬರ್ 21 ರವರೆಗೆ ಬ್ರಿಟನ್ ನಲ್ಲಿ ಕಂಡುಬಂದಿರುವ ಬಹುತೇಕ ಪ್ರಕರಣಗಳು ಲಂಡನ್, ದಕ್ಷಿಣ ಪೂರ್ವ ಹಾಗೂ ಪೂರ್ವ ಲಂಡನ್ ಗೆ ಸಂಬಂಧಿಸಿದ್ದಾಗಿವೆ. ಯುಕೆ ಹೊರತುಪಡಿಸಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಬ್ರೆಜಿಲ್ ಹಾಗೂ ಡೆನ್ಮಾರ್ಕ್ ಗಳಂತಹ ದೇಶಗಳಲ್ಲಿ ಹೆಚ್ಚು ಸೋಂಕಿತ ಕೊರೊನಾ ವೈರಸ್ ಸ್ವರೂಪ ವನ್ನು ಗಮನಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.