ನವದೆಹಲಿ :  Ration Card Latest News: ಪಡಿತರ ಚೀಟಿದಾರರಿಗೆ ಒಳ್ಳೆಯ ಸುದ್ದಿ ಇದೆ. 'ಒನ್ ನೇಶನ್ ಒನ್ ರೇಶನ್ ಕಾರ್ಡ್ ' (One nation one ration card) ಅಡಿಯಲ್ಲಿ, ಈಗ ಫಲಾನುಭವಿಗಳು ತಮ್ಮ ಆಯ್ಕೆಯ ಪಡಿತರ ವಿತರಕರಿಂದ ಪಡಿತರವನ್ನು ಪಡೆದುಕೊಳ್ಳಬಹುದು.  ಸೆಪ್ಟೆಂಬರ್ ತಿಂಗಳಿನಿಂದಲೇ ಈ ನಿಯಮ ಜಾರಿಗೆ ಬಂದಿದೆ.  ಅಂದರೆ, ಈಗ ಗ್ರಾಹಕರ ಇಚ್ಛೆಯಂತೆ ಪಡಿತರ ವಿತರಕರನ್ನು ಬದಲಾಯಿಸಬಹುದು. ಈ ಕುರಿತು ಅಧಿಕೃತ ಜ್ಞಾಪನಾ ಪತ್ರವನ್ನು ನೀಡಲಾಗಿದೆ. ಇದರ ಪ್ರಕಾರ, ಒಬ್ಬ ವ್ಯಕ್ತಿಯು ಪಡಿತರ ಚೀಟಿಯೊಂದಿಗೆ (Ration card) ಪಡಿತರ ತೆಗೆದುಕೊಳ್ಳಲು ಬಂದರೆ, ಆ ಅಂಗಡಿಯ ಫಲಾನುಭವಿಯಲ್ಲ ಎಂದು ವಾಪಾಸ್ ಕಳುಹಿಸುವಂತಿಲ್ಲ.  ಪಡಿತರ ಚೀಟಿ ಇದ್ದರೆ ಯಾವ ವಿತರಕರಿದಲೂ ಪಡಿತರ ಪಡೆದುಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಫಲಾನುಭವಿಗಳಿಗೆ ಸಿಹಿ ಸುದ್ದಿ : 
ರಾಂಚಿಯಲ್ಲಿ  ಜಿಲ್ಲೆಯ ಎಲ್ಲಾ ಪಡಿತರ ಚೀಟಿ ಹೊಂದಿರುವವರಿಗೆ ಈ ನಿರ್ದೇಶನ ನೀಡಲಾಗಿದೆ. ಪಡಿತರ ಚೀಟಿ (Rationa card) ಹೊಂದಿದ್ದರೂ ಕೆಲವು ವಿತರಕರು ತಮ್ಮ ಇಚ್ಚೆಯಂತೆ ನಡೆದುಕೊಳ್ಳುವುದು ಗಮನಕ್ಕೆ ಬಂದಿದೆ. ಈಗ ಪಡಿತರ ಚೀಟಿ ಹೊಂದಿರುವವರ ಬಳಿ ವಿಶೇಷ ಅಧಿಕಾರವಿದ್ದು, ಅವರು ಇಂಥಹ ವಿತರಕರಿಂದ (Ration dealer) ಪಡಿತರ ಪಡೆದುಕೊಳ್ಳುವುದನ್ನೇ ನಿಲ್ಲಿಸಬಹುದು ಎಂದು ಸೂಚಿಸಲಾಗಿದೆ. 


ಇದನ್ನೂ ಓದಿ : Good News: ಕಾಯಿಲೆಯಿಂದ ಬಳಲುತ್ತಿರುವವರಿಗೆ ಭಾರಿ ನೆಮ್ಮದಿ, 39 ಅತ್ಯಾವಶ್ಯಕ ಔಷಧಿಗಳ ಬೆಲೆ ಇಳಿಕೆಗೆ ಮೋದಿ ಸರ್ಕಾರದ ಸಿದ್ಧತೆ


ಪಡಿತರವನ್ನು ವಿತರಿಸುವ ಇಲಾಖೆ : 
ಈ ವ್ಯವಸ್ಥೆಯಲ್ಲಿ,  ನಿಯೋಜಿತ ಫಲಾನುಭವಿಗಳಿಗಿಂತ (Ratoncard holder) ಹೆಚ್ಚು ಫಲಾನುಭವಿಗಳು, ಪಡಿತರಕ್ಕಾಗಿ ಪಡಿತರ ವಿತರಕರನ್ನು ತಲುಪಿದರೆ, ಅಂತಹ ವಿತರಕರಿಗೆ ಜಿಲ್ಲಾಡಳಿತದ ಸರಬರಾಜು ಇಲಾಖೆಯಿಂದ ಹೆಚ್ಚಿನ ಪಡಿತರವನ್ನು ನೀಡಲಾಗುವುದು. ಹೀಗಾದಾಗ,  ಪ್ರತಿಯೊಬ್ಬರೂ ಸುಲಭವಾಗಿ ಪಡಿತರ ಪಡೆಯುವುದು ಸಾಧ್ಯವಾಗುತ್ತದೆ. ಈ ಆದೇಶ ಹೊರಡಿಸಿದ ನಂತರ, ಯಾವುದೇ ವಿತರಕರು, ಪಡಿತರ ನೀಡಲು ನಿರಾಕರಿಸಿದರೆ, ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.  ಪಡಿತರ ಅಂಗಡಿಯಲ್ಲಿ (Ration shop) ಅನೇಕ ಬಾರಿ ಈ ರೀತಿಯ ನಡವಳಿಕೆಗಳು ಕಂಡುಬರುತ್ತವೆ. ಈ ಹಿನ್ನೆಲೆಯಲ್ಲಿ ಫಲಾನುಭವಿಯು ನಿರ್ದಿಷ್ಟ ಪಡಿತರ ಅಂಗಡಿಯಿಂದ ಪಡಿತರವನ್ನು ತೆಗೆದುಕೊಳ್ಳಲು ಬಯಸಿದರೆ, ಆ ಗ್ರಾಹಕ ತನಗೆ ಬೇಕಾದ ಪಡಿತರ ಅಂಗಡಿಯಿಂದ ಪಡಿತರವನ್ನು ಪಡೆದುಕೊಳ್ಳಬಹುದು.  


ಇದನ್ನೂ ಓದಿ : ಪ್ರಜಾಪ್ರಭುತ್ವದಲ್ಲಿ ನಾಗರಿಕರ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮಹತ್ವದ್ದಾಗಿದೆ-ಅಮಿತ್ ಷಾ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.