Ration Card Update - ಇನ್ಮುಂದೆ ಪಡಿತರ ಚೀಟಿ ಇಲ್ಲದೆಯೇ ಉಚಿತ ಧಾನ್ಯ ಸಿಗಲಿದೆ. ಫಟ್ ಅಂತ ಈ ಕೆಲ್ಸಾ ಮಾಡಿ

One Nation One Ration Card Scheme: ದೆಹಲಿ-NCR ಸೇರಿದಂತೆ ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯ ಪ್ರದೇಶ, ಝಾರ್ಖಂಡ್, ಹರಿಯಾಣಾ, ಪಂಜಾಬ್, ಹಿಮಾಚಲ್ ಪ್ರದೇಶ, ಉತ್ತರಾಖಂಡ ಒಳಗೊಂಡಂತೆ ಎಲ್ಲಾ ಕೇಂದ್ರಾಡಳಿತ ಪ್ರದೇಶಗಳು ಮಾತು ರಾಜ್ಯಗಳಿಗೆ ಉಚಿತ ಪಡಿತರ (Free Ration) ವಿತರಣೆಯಾಗಲಿದೆ.

Written by - Nitin Tabib | Last Updated : Aug 21, 2021, 05:25 PM IST
  • ಉಚಿತ ಪಡಿತರ ಯೋಜನೆಯ ಅಡಿಯಲ್ಲಿ ಉಚಿತ ಚೀಲ ನೀಡಲು ಯೋಜನೆ ಕೂಡ ರೂಪಿಸಲಾಗಿದೆ.
  • ಪಡಿತರ ಚೀಟಿಯ ಮೇಲೆ ಭರದಿಂದ ಸಾಗಿದೆ ಕೆಲಸ.
  • ಪಡಿತರ ಚೀಟಿ ಇಲ್ಲದೆ ಇದ್ದರು ಕೂಡ ಉಚಿತವಾಗಿ ಪಡಿತರ ಸಿಗಲಿದೆ.
Ration Card Update - ಇನ್ಮುಂದೆ ಪಡಿತರ ಚೀಟಿ ಇಲ್ಲದೆಯೇ ಉಚಿತ ಧಾನ್ಯ ಸಿಗಲಿದೆ. ಫಟ್ ಅಂತ ಈ ಕೆಲ್ಸಾ ಮಾಡಿ title=
Ration Card Update (File Photo)

ನವದೆಹಲಿ: Ration Card Update  - ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಉಚಿತವಾಗಿ ಪಡಿತರ ನೀಡಲಿದೆ. ಕಳೆದ ಕೆಲ ದಿನಗಳ ಹಿಂದೆ ದೆಹಲಿ-NCR ಪ್ರದೇಶದಲ್ಲಿ 'ಒನ್ ನೇಶನ್ ಒನ್ ರೇಶನ್ ಕಾರ್ಡ್' (One Nation, One Ration Card) ಯೋಜನೆ ಜಾರಿಗೆ ಬಂದ ಬಳಿಕ ಇದೀಗ ಬೇರೆ ರಾಜ್ಯಗಳಲ್ಲಿನ ಜನರಿಗೂ ಕೂಡ ಉಚಿತ ಪಡಿತರ (Free Ration) ಸಿಗಲು ಆರಂಭವಾಗಲಿದೆ. ಉತ್ತರ ಪ್ರದೇಶ, ಬಿಹಾರ್, ಮಧ್ಯ ಪ್ರದೇಶ್, ರಾಜಸ್ಥಾನ್, ಮಹಾರಾಷ್ಟ್ರ, ಜಾರ್ಖಂಡ್ ಗಳಲ್ಲಿ ಈಗಾಗಲೇ ಪಡಿತರ ಚೀಟಿ (Ration Card) ಇಲ್ಲದೆಯೇ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ. ಹಾಗಾದರೆ ಬನ್ನಿ ಹೇಗೆ ಪಡೆದುಕೊಳ್ಳುವುದು ತಿಳಿದುಕೊಳ್ಳೋಣ ಬನ್ನಿ.

ಪಡಿತರ ಚೀಟಿಯ ಮೇಲೆ ವೇಗವಾಗಿ ಕಾರ್ಯ ನಡೆಯುತ್ತಿದೆ (Ration Card Latest News)
ಇದಲ್ಲದೆ ದೇಶಾದ್ಯಂತ ಹೊಸ ರೇಶನ್ ಕಾರ್ಡ್ ಗಳ ಜೊತೆಗೆ ಹಳೆ ರೇಶನ್ ಕಾರ್ಡ್ ನಲ್ಲಿ ಹೆಸರು ಜೋಡಿಸುವ ಹಾಗೂ ಸೇರಿಸುವ ಕಾರ್ಯ ಕೂಡ ಭರದಿಂದ ಸಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪಡಿತರ ಚೀಟಿಯನ್ನು ಆಧಾರ್ ಅಥವಾ ಬ್ಯಾಂಕ್ ಖಾತೆಗೆ ಲಿಂಕ್ ಮಾಡದಿದ್ದರೆ ಅಥವಾ ನಿಮ್ಮ ಪಡಿತರ ಚೀಟಿಯನ್ನು ಸಸ್ಪೆಂಡ್ ಆಗಿದ್ದರೆ, ನೀವು ಆಗಸ್ಟ್ 31 ರೊಳಗೆ ಈ ಕೆಲಸವನ್ನು ಪೂರ್ಣಗೊಳಿಸಬೇಕು. ಈ ಕೆಲಸ ಇನ್ನೂ ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಬಿಹಾರ, ಜಾರ್ಖಂಡ್, ಉತ್ತರಾಖಂಡ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ನಡೆಯುತ್ತಿದೆ.

ಇದನ್ನೂ ಓದಿ-PM Kisan ರೈತರಿಗೆ ವರ್ಷಕ್ಕೆ ₹6000 ರ ಬದಲು ಸಿಗಲಿದೆ ₹36000 : ಆದಷ್ಟು ಬೇಗ ಈ ಕೆಲಸ ಮಾಡಿ

ಒನ್ ನೇಶನ್ ಒನ್ ರೇಶನ್ ಕಾರ್ಡ್ 
ದೆಹಲಿ ಸರ್ಕಾರದ ವತಿಯಿಂದ ಒನ್ ನೇಶನ್ ಒನ್ ರೇಶನ್ ಕಾರ್ಡ್ ಅಡಿ ಪಡಿತರದ ವಿತರಣೆ ಇದೀಗ ಎಲ್ಲಾ ಇ-PoS ಮಾಧ್ಯಮದ ಮೂಲಕ ಜಾರಿಗೊಳಿಸಲಾಗಿದೆ.

ಆನ್ ಲೈನ್ ಮೂಲಕ ಆಧಾರ್ ಲಿಂಕ್ 
ದೇಶದ ಹಲವು ರಾಜ್ಯಗಳ ಪೂರೈಕೆ ವಿಭಾಗಗಳಲ್ಲಿ ಅಥವಾ ಆನ್ಲೈನ್ ನಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಪಡಿತರ ಚೀಟಿಯ ಜೊತೆಗೆ ಲಿಂಕ್ ಮಾಡಬಹುದು. ಕೇಂದ್ರ ಸರ್ಕಾರದ ನಿರ್ದೇಶನಗಳ ಪ್ರಕಾರ, ರಾಷ್ಟೀಯ ಆಹಾರ ಭದ್ರತೆ ಯೋಜನೆಯ ಅಡಿ ಪಡಿತರ ಚೀಟಿಯ ಮೇಲೆ ನಮೂದಿಸಲಾಗಿರುವವರ ಆಧಾರ್ ಸಂಖ್ಯೆಯನ್ನು ಪಡಿತರ ಚೀಟಿಯ ಜೊತೆಗೆ ಜೋಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆಗಸ್ಟ್ 31ರೊಳಗೆ ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ಪಡಿತರ ಚೀಟಿಯ ಜೊತೆಗೆ ಲಿಂಕ್ ಆಗದೆ ಇದ್ದ ಸಂದರ್ಭದಲ್ಲಿ ನಿಮ್ಮ ಪಡಿತರ ಚೀಟಿ ಬ್ಲಾಕ್ ಆಗಲಿದೆ.

ಇದನ್ನೂ ಓದಿ-SBI ನಗದು ಠೇವಣಿ ಯಂತ್ರದಿಂದ ಜಮಾ ಮಾಡಿದ ಹಣ, ಖಾತೆಗೆ ಜಮಾ ಆಗಲ್ಲವೇ? ಇಲ್ಲಿದೆ ಪರಿಹಾರ

ಈ ಸಂಖ್ಯೆಗೆ ಕಾಲ್ ಮಾಡಿದರೆ ಸಿಗಲಿದೆ ಮಾಹಿತಿ
ಈ ಕುರಿತು ನೀವು ಟೋಲ್ ಫ್ರೀ ಸಂಖ್ಯೆಗಳಾದ 18003456194 ಅಥವಾ 1967 ಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ಪಡೆಯಬಹುದು. ಈ ಸಂಖ್ಯೆಗಳಿಗೆ ಕರೆ ಮಾಡಿದಾಗ ನಿಮಗೆ ನಿಮ್ಮ ರೇಶನ್ ಕಾರ್ಡ್ ಕುರಿತಾದ ಸಂಪೂರ್ಣ ಮಾಹಿತಿ ಸಿಗಲಿದೆ. ಈ ಸೇವೆ ಪ್ರಸ್ತುತ ನಿಮಗೆ ಕವಲ ಆಗಸ್ಟ್ 31ರವರೆಗೆ ಮಾತ್ರ ಇರಲಿದೆ. ಒಂದು ವೇಳೆ ನೀವೂ ಕೂಡ ನಿಮ್ಮ ಆಧಾರ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯನ್ನು ಪಡಿತರ ಚೀಟಿಯ ಜೊತೆಗೆ ಲಿಂಕ್ ಮಾಡಿದರೆ, ಸೆಪ್ಟೆಂಬರ್ 1 ರಿಂದ ನಿಮಗೂ ಕೂಡ ಉಚಿತ ಪಡಿತರ ಸಿಗುವುದು ಮುಂದುವರೆಯಲಿದೆ.

ಇದನ್ನೂ ಓದಿ-Indian Railways ಹೊಸ ನಿಯಮ! ಈಗ ಟಿಕೆಟ್ ಬುಕಿಂಗ್ ಮುನ್ನ, ಈ 'ವಿಶೇಷ ಕೋಡ್' ನೆನಪಿನಲ್ಲಿಡಿ, ಇಲ್ಲದಿದ್ದರೆ ನಿಮಗೆ ಸಿಗುವುದಿಲ್ಲ ಸೀಟು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News