ದಾವೋಸ್: ವಿಶ್ವ ಆರ್ಥಿಕ ವೇದಿಕೆಯಲ್ಲಿ, ಆಕ್ಸ್‌ಫ್ಯಾಮ್ ತನ್ನ ವರದಿಯಲ್ಲಿ ಆಘಾತಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಮಾಧ್ಯಮ ವರದಿಗಳ ಮಾಹಿತಿಯ ಪ್ರಕಾರ, ವಿಶ್ವದ 2153 ಶತಕೋಟ್ಯಾಧಿಪತಿಗಳು 4.6 ಬಿಲಿಯನ್ ಜನರಿಗಿಂತ ಹೆಚ್ಚಿನ ಆಸ್ತಿಯನ್ನು(ವಿಶ್ವದ ಜನಸಂಖ್ಯೆಯ 60 ಪ್ರತಿಶತ) ಹೊಂದಿದ್ದಾರೆ ಎಂದು 'ಟೈಮ್ ಟು ಕೇರ್' ಹೇಳುತ್ತದೆ.


COMMERCIAL BREAK
SCROLL TO CONTINUE READING

ಈ ವರದಿಯಲ್ಲಿ ಭಾರತೀಯ ಶ್ರೀಮಂತರಲ್ಲಿ ಕೇವಲ ಶೇಕಡಾ  ಒಂದರಷ್ಟು ಜನರು ಮಾತ್ರ ಭಾರತದ ಒಟ್ಟು ಜನಸಂಖ್ಯೆಯ 70 ಪ್ರತಿಶತ ಸಂಪತ್ತಿನ ನಾಲ್ಕು ಪಟ್ಟು ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ದೇಶದ 63 ಶತಕೋಟ್ಯಾಧಿಪತಿಗಳು ದೇಶದ 'ಬಜೆಟ್'ಗಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ನಾವು ಅಂಕಿಅಂಶಗಳ ಬಗ್ಗೆ ಮಾತನಾಡುವುದಾದರೆ, 2018-19ರಲ್ಲಿ ಭಾರತದ ಬಜೆಟ್ 24 ಲಕ್ಷ 42 ಸಾವಿರ 200 ಕೋಟಿ ರೂಪಾಯಿಗಳು.


ಜನರು ಶ್ರೀಮಂತರಾಗುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕೋಟ್ಯಾಧಿಪತಿಗಳ ಸಂಖ್ಯೆ ಹೆಚ್ಚಾಗಿದೆ. 2019 ಕ್ಕೆ ಹೋಲಿಸಿದರೆ ಅವರ ಸಂಪತ್ತು ಕೂಡ ಕಡಿಮೆಯಾಗಿದೆ. ಸಿಇಒ ಸೆಕೆಂಡಿನಲ್ಲಿ 106 ರೂಪಾಯಿಗಳಿಗಿಂತ ಹೆಚ್ಚು ಗಳಿಸುತ್ತಾನೆ ಎಂದು ವರದಿ ಹೇಳುತ್ತದೆ, ಆದರೆ ಮಹಿಳಾ ಗೃಹ ಕಾರ್ಮಿಕೆ ಇಷ್ಟು ಸಂಪಾದಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ.