Big News: ಮುಂದಿನ ಕಾಂಗ್ರೆಸ್ ಅಧ್ಯಕ್ಷ ಗಾಂಧಿ ಕುಟುಂಬ ಸದಸ್ಯನಾಗಿರುವುದಿಲ್ಲ! ಸೋನಿಯಾ ಘೋಷಣೆ!
Congress President Election: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜಕೀಯ ಜಿದ್ದಾಜಿದ್ದಿ ಇದೀಗ ಮತ್ತಷ್ಟು ಜೋರಾಗಲಿದೆ. ಮೂಲಗಳ ಪ್ರಕಾರ ಮುಂದಿನ ಕಾಂಗ್ರೆಸ್ ಅಧ್ಯಕ್ಷರು ಗಾಂಧಿ ಕುಟುಂಬ ಸದಸ್ಯರಾಗಿರುವುದಿಲ್ಲ ಎನ್ನಲಾಗಿದೆ.
Congress President Election Candidates: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ, ಕಾಂಗ್ರೆಸ್ ಪಕ್ಷದ ಮುಂದಿನ ಅಧ್ಯಕ್ಷ ಗಾಂಧಿ ಕುಟುಂಬ ಸದಸ್ಯನಾಗಿರುವುದಿಲ್ಲ ಎನ್ನಲಾಗಿದೆ. ದೆಹಲಿಯಲ್ಲಿ ಇಂದು ನಡೆದ ಸೋನಿಯಾ ಹಾಗೂ ಶಶಿ ತರೂರ್ ಭೇಟಿಯ ಬಳಿಕ ಈ ಊಹಾಪೋಹಗಳಿಗೆ ಮತ್ತಷ್ಟು ಬಲ ಸಿಕ್ಕಂತೆ ಗೋಚರಿಸುತ್ತಿದೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ರಾಹುಲ್ ಗಾಂಧಿ ಈ ಮೊದಲೇ ತಿರಸ್ಕರಿಸಿದ್ದಾರೆ. ಮೂಲಗಳು ಈ ಮೊದಲೇ ಸ್ಪಷ್ಟವಾಗಿ ಹೇಳಿರುವಂತೆ ಒಂದು ವೇಳೆ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆದರೆ, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಹಾಗೂ ಕೇರಳದ ಕಾಂಗ್ರೆಸ್ ಮುಖಂಡ ಶಶಿ ತರೂರ್ ಈ ಚುನಾವಣೆಯ ರೇಸ್ ನಲ್ಲಿ ಪ್ರಮುಖರಾಗಿರಲಿದ್ದಾರೆ.
ಸೋನಿಯಾ ಭೇಟಿಯಾದ ಶಶಿ ತರೂರ್
ಮುಂದಿನ ತಿಂಗಳು ನಡೆಯಬೇಕಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿರುವ ಸಂಕೇತ ನೀಡಿರುವ ಶಶಿ ತರೂರ್ ಅವರು ಇಂದು ಸೋಮವಾರ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಸಾರ್ವಜನಿಕವಾಗಿ ಪಕ್ಷದಲ್ಲಿ ಸುಧಾರಣೆಯ ಅವಶ್ಯಕತೆ ಇರುವ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿರುವ ಯುವ ಕಾಂಗ್ರೆಸ್ ಕಾರ್ಯಕರ್ತರ ಪೋಸ್ಟ್ ಅನ್ನು ಬೆಂಬಲಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆಯಾಗಿರುವ ಸೋನಿಯಾ ಗಾಂಧಿ ವಿದೇಶದಿಂದ ತಮ್ಮ ವೈದ್ಯಕೀಯ ಚಿಕಿತ್ಸೆ ಪಡೆದುಕೊಂಡು ದೆಹಲಿಗೆ ವಾಪಸ್ಸಾಗಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಪ್ರಾರಂಭವಾಗುವ ಮೂರು ದಿನಗಳ ಮೊದಲು ಇಂದು ಅವರನ್ನು (ಸೋನಿಯಾ ಗಾಂಧಿ) ಭೇಟಿಯಾಗಲು ಬಂದ ಅನೇಕ ಕಾಂಗ್ರೆಸ್ ನಾಯಕರಲ್ಲಿ ಶಶಿ ತರೂರ್ ಕೂಡ ಒಬ್ಬರಾಗಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-CBI-ED ವಿರುದ್ಧ ಪ.ಬಂಗಾಳ ವಿಧಾನ ಸಭೆಯಲ್ಲಿ ಪ್ರಸ್ತಾಪ ಮಂಡನೆ, ಮಮತಾ ಬ್ಯಾನರ್ಜಿ ಹೇಳಿದ್ದೇನು?
ಶಶಿ ತರೂರ್ ಹೇಳಿದ್ದೇನು?
ಶಶಿ ತರೂರ್ ಇಂದು ಬೆಳಗ್ಗೆ ಪಕ್ಷದ ಯುವ ಸಂಘಟನೆ ಗುಂಪಿನ ಮನವಿಯನ್ನು ಬೆಂಬಲಿಸಿ, ಅವರ ಸುಧಾರಣೆಯ ಮನವಿಯನ್ನು ಪುನರುಚ್ಚರಿಸಿದರು. ನ್ಯಾಯಸಮ್ಮತ ಚುನಾವಣೆಗಳು ಮತ್ತು ಪ್ರತಿ ಕುಟುಂಬಕ್ಕೆ ಒಬ್ಬ ಅಭ್ಯರ್ಥಿ ಮತ್ತು ಪ್ರತಿ ಹುದ್ದೆಗೆ ಒಬ್ಬ ವ್ಯಕ್ತಿ ಮುಂತಾದ ನಿಯಮಗಳ ಜೊತೆಗೆ ಪಕ್ಷದ ಹುದ್ದೆಗಳ ಮೇಲಿನ ಐದು ವರ್ಷಗಳ ಮಿತಿಗೆ ಪೋಸ್ಟ್ ಬದ್ಧವಾಗಿದೆ. ಪಕ್ಷದಲ್ಲಿ ರಚನಾತ್ಮಕ ಸುಧಾರಣೆಗೆ ಒತ್ತಾಯಿಸಿ ಕಾಂಗ್ರೆಸ್‌ನ ಯುವ ಸದಸ್ಯರ ಗುಂಪು ಹಂಚಿಕೊಂಡ ಈ ಮನವಿಯನ್ನು ನಾನು ಸ್ವಾಗತಿಸುತ್ತೇನೆ ಎಂದು ಶಶಿ ತರೂರ್ ಹೇಳಿದ್ದರು. ಇದುವರೆಗೆ 650ಕ್ಕೂ ಹೆಚ್ಚು ಸಹಿಗಳನ್ನು ಈ ಪೋಸ್ಟ್ ಪಡೆದುಕೊಂಡಿದೆ. ಇದನ್ನು ಬೆಂಬಲಿಸಲು ಮತ್ತು ಅದನ್ನು ಮುಂದುವರಿಸಲು ನನಗೆ ಸಂತೋಷವಾಗುತ್ತದೆ ಎಂದು ತರೂರ್ ಹೇಳಿದ್ದರು.
Asaduddin Owaisi: ಹೈದರಾಬಾದ್ ಹೊರತುಪಡಿಸಿದರೆ ಭಾರತ ಅಪೂರ್ಣ, ಅಮಿತ್ ಶಾಗೆ ಒವೈಸಿ ತಿರುಗೇಟು
ರಾಹುಲ್ ಬೆಂಬಲಕ್ಕೆ ನಿಂತ ಅಶೋಕ್ ಗೆಹಲೋಟ್
ಕಾಂಗ್ರೆಸ್ ತನ್ನ ಜನಸಂಪರ್ಕ ಕಾರ್ಯಕ್ರಮವಾಗಿರುವ 'ಭಾರತ್ ಜೋಡೋ ಯಾತ್ರೆ' ಮೂಲಕ ತಳಮಟ್ಟದಲ್ಲಿ ತನ್ನ ಪ್ರಭಾವವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವಾಗ, ಪಕ್ಷದ ಹಿರಿಯ ನಾಯಕರು ನಾಯಕತ್ವದಂತಹ ಇತರ ವಿಚಾರಗಳನ್ನು ಸಹ ಗಮನಿಸುತ್ತಿದ್ದಾರೆ. ಈ ಹಿನ್ನೆಲೆ ಶನಿವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮರುನೇಮಕಗೊಳಿಸುವ ನಿರ್ಣಯವನ್ನು ರಾಜ್ಯ ಘಟಕದಲ್ಲಿ ಅಂಗೀಕರಿಸಿದ್ದಾರೆ. ಅಶೋಕ್ ಗೆಹ್ಲೋಟ್ ಮೊದಲಿನಿಂದಲೂ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಒಲವು ಹೊಂದಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.