Asaduddin Owaisi: ಹೈದರಾಬಾದ್ ಹೊರತುಪಡಿಸಿದರೆ ಭಾರತ ಅಪೂರ್ಣ, ಅಮಿತ್ ಶಾಗೆ ಒವೈಸಿ ತಿರುಗೇಟು

Asaduddin Owaisi Statement: ವೋಟ್ ಬ್ಯಾಂಕ್ ರಾಜಕಾರಣದ ಹಿನ್ನೆಲೆ ತೆಲಂಗಾಣದಲ್ಲಿ ಟಿಆರ್ಎಸ್ ಅಧಿಕೃತವಾಗಿ 'ಹೈದ್ರಾಬಾದ್ ವಿಮೋಚನಾ ದಿನಾಚರಣೆ ಆಚರಿಸುತ್ತಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಕ್ಕೆ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ತಿರುಗೇಟು ನೀಡಿದ್ದಾರೆ.   

Written by - Nitin Tabib | Last Updated : Sep 19, 2022, 07:08 PM IST
  • ಹೈದರಾಬಾದ್ ಇಲ್ಲದೆ ಭಾರತ ಅಪೂರ್ಣ ಮತ್ತು ಭಾರತವಿಲ್ಲದೆ ಹೈದರಾಬಾದ್ ಅಪೂರ್ಣ ಎಂಬುದನ್ನು ಮರೆಯಬೇಡಿ.
  • ಈ ಸಂಗತಿಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ.
  • ನಾವು ಯಾವಾಗ ವಿರೋಧಿಗಳಾಗಿದ್ದೆವು? ಸೆಪ್ಟೆಂಬರ್ 17 ಅನ್ನು ಮಜ್ಲಿಸ್ ಆಚರಿಸಬಾರದು ಎಂದು ಹೇಳುತ್ತದೆಯೇ?
Asaduddin Owaisi: ಹೈದರಾಬಾದ್ ಹೊರತುಪಡಿಸಿದರೆ ಭಾರತ ಅಪೂರ್ಣ, ಅಮಿತ್ ಶಾಗೆ ಒವೈಸಿ ತಿರುಗೇಟು title=
Asaduddin Owaisi On Amit Shah Statement

Owaisi On Shah Remarks: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. ನಾವು ಅಂದೂ ಇದ್ದೇವು ಹಾಗೂ ಈಗಲೂ ಇದ್ದೇವೆ ಎಂದು ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಹೈದರಾಬಾದ್ ಇಲ್ಲದೆ ಭಾರತ ಅಪೂರ್ಣ. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್-ಬಿಜೆಪಿ ಇರಲಿಲ್ಲ ಎಂದು ಅವರು ಹೇಳಿದ್ದಾರೆ. ಸೆಪ್ಟೆಂಬರ್ 17 ರಂದು ತೆಲಂಗಾಣ ದಿನದಂದು ಅಮಿತ್ ಶಾ ಅವರು ಓವೈಸಿ ಮತ್ತು ರಾಜ್ಯದಲ್ಲಿ ಆಡಳಿತಾರೂಢ ಕೆಸಿಆರ್ ಸರ್ಕಾರವನ್ನು ಗುರಿಯಾಗಿಸಿ, ವೋಟ್ ಬ್ಯಾಂಕ್ ರಾಜಕಾರಣದಿಂದಾಗಿ ಟಿಆರ್‌ಎಸ್‌ಗೆ ‘ಹೈದರಾಬಾದ್ ವಿಮೋಚನಾ ದಿನ’ ಆಚರಿಸುವ ಧೈರ್ಯ ಬರುತ್ತಿಲ್ಲ ಎಂದು ಶಾ ಹೇಳಿದ್ದರು.

ಹೈದರಾಬಾದ್ ಇಲ್ಲದೆ ಭಾರತ ಅಪೂರ್ಣ
ಅಮಿತ್ ಶಾ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, "ಹೈದರಾಬಾದ್ ಇಲ್ಲದೆ ಭಾರತ ಅಪೂರ್ಣ ಮತ್ತು ಭಾರತವಿಲ್ಲದೆ ಹೈದರಾಬಾದ್ ಅಪೂರ್ಣ ಎಂಬುದನ್ನು ಮರೆಯಬೇಡಿ ಎಂದಿದ್ದಾರೆ. ಈ ಸಂಗತಿಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆ ಇದೆ. ನಾವು ಯಾವಾಗ ವಿರೋಧಿಗಳಾಗಿದ್ದೆವು? ಸೆಪ್ಟೆಂಬರ್ 17 ಅನ್ನು ಮಜ್ಲಿಸ್ ಆಚರಿಸಬಾರದು ಎಂದು ಹೇಳುತ್ತದೆಯೇ? ಅರೆ ಬಾಬಾ ಆಗ ನೀವೆಲ್ಲಿದ್ದೀರಿ? ನಾವು ಇಲ್ಲೇ ಇದ್ದೆವು, ಇಂದು ಮತ್ತು ನಾಳೆಯೂ ಇಲ್ಲೇ ಇರಲಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಇರಲಿಲ್ಲ, ಬಿಜೆಪಿಯೂ ಇರಲಿಲ್ಲ. 1947 ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು.  ಅದರಲ್ಲಿಯೂ ಸಹ ನೀವು ಇರಲಿಲ್ಲ.

ಇದನ್ನೂ ಓದಿ-Congress President: ಕಾಂಗ್ರೆಸ್ ಪಕ್ಷದಲ್ಲಿ ಸುಧಾರಣೆಯ ಅವಶ್ಯಕತೆ ಬೆಂಬಲಿಸಿ ಸೋನಿಯಾ ಭೇಟಿಯಾದ ಶಶಿ ತರೂರ್

ಭಾರತದ ಭಾಗವಾಗಿರುವುದಕ್ಕೆ ಹೈದರಾಬಾದ್ ಜನರು ಖುಷಿಯಾಗಿದ್ದಾರೆ
ಇಂದು ಎಲ್ಲರ ಮುಂದೆ ಬಂದು ನಾನು ನಿಷ್ಠಾವಂತ, ನಿಷ್ಠಾವಂತ ಎಂದು ಹೇಳುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಲೇವಡಿ ಮಾಡಿದ್ದಾರೆ. ರ್ಯಾಲಿಯನ್ನು ಉದ್ದೇಶಿಸಿ  ಮಾತನಾಡುವಾಗ ಅಸದುದ್ದೀನ್ ಒವೈಸಿ ಈ ಹೇಳಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಪ್ರಶ್ನಿಸಿರುವ ಒವೈಸಿ, ಹೈದರಾಬಾದ್ ಭಾರತದ ಭಾಗವಾಗಿರುವುದು ನಿಮಗೆ ಸಂತೋಷ ತಂದಿಲ್ಲವೇ? ಆದರೆ, ಕೆಲ ಜನರಿಗೆ ಕೇಳಿಸುವುದಿಲ್ಲ, ಕೇವಲ ವಾಟ್ಸ್ ಆಪ್ ಯುನಿವರ್ಸಿಟಿಯಲ್ಲಿ ಬಂದದ್ದನ್ನು ಮಾತ್ರ ಓದುತ್ತಾರೆ  ಎಂದು ಹೇಳಿದ್ದಾರೆ. 

ಇದನ್ನೂ ಓದಿ-Controversy: 'ಮದರ್ಸಾ ಹಾಗೂ ಎಎಂಯುಗಳನ್ನು ಬಾಂಬ್ ಬಳಸಿ ಬ್ಲಾಸ್ಟ್ ಮಾಡಬೇಕು' : ಸ್ವಾಮಿ ಯತಿ ನರಸಿಂಹಾನಂದ್

ಅಮಿತ್ ಶಾ ಮಾಡಿದ ಆರೋಪವೇನು?
ಇದಕ್ಕೂ ಮೊದಲು ಆರೋಪ ಮಾಡಿದ್ದ ಬಿಜೆಪಿ, ವೋಟ್ ಬ್ಯಾಂಕ್ ರಾಜಕೀಯದ ಕಾರಣ ಟಿಆರ್ಎಸ್ ಇದುವರೆಗೆ ಅಧಿಕೃತವಾಗಿ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸುವುದಿಲ್ಲ. ಕೋಮುವಾದಿ ಶಕ್ತಿಗಳು ಸಮಾಜವನ್ನು ಒಡೆಯಲು ಯತ್ನಿಸುತ್ತಿವೆ . ‘ಹೈದರಾಬಾದ್ ವಿಮೋಚನಾ ದಿನ’ವನ್ನು ಸರ್ಕಾರದ ಸಹಭಾಗಿತ್ವದಲ್ಲಿ ಆಚರಿಸಬೇಕು ಎಂಬ ಆ ಭಾಗದ ಜನರ ಆಗ್ರಹವಿತ್ತು, ಆದರೆ 75 ವರ್ಷಗಳು ಕಳೆದರೂ ಅದು ಸಾಧ್ಯವಾಗಿಲ್ಲ. ಇದಕ್ಕೆ ಅಧಿಕಾರದಲ್ಲಿ ಕುಳಿತವರೇ ಕಾರಣ ಎಂದು ಅಮಿತ್ ಶಾ ಹೇಳಿದ್ದರು. ವೋಟ್ ಬ್ಯಾಂಕ್ ರಾಜಕೀಯ ಮಾಡಲು, 'ಹೈದರಾಬಾದ್ ವಿಮೋಚನಾ ದಿನ' ಆಚರಿಸಲು ಅವರಿಗೆ ಧೈರ್ಯ ಸಾಲುತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದರು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News