ನವದೆಹಲಿ:  Big Shock! ಕೊರೊನಾ ವೈರಸ್ ನ ಎರಡನೆಯ ಅಲೆಯ (Second Wave Of Corona) ನಡುವೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ (Central Government Employee) ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳಲ್ಲಿ ಕಡಿತ ಉಂಟಾಗುವ ಸಾಧ್ಯತೆ ಇದೆ.  ವಾಸ್ತವದಲ್ಲಿ ಕೊರೊನಾ ಮಹಾಮಾರಿಯ ಹಿನ್ನೆಲೆ ಸರ್ಕಾರದ ಬೊಕ್ಕಸ ಭಾರಿ ಒತ್ತಡಕ್ಕೆ ಒಳಗಾಗಿದೆ. ಕೊರೊನಾ ಕಾರಣ ಒಂದೆಡೆ ಸರ್ಕಾರದ ವೆಚ್ಚದಲ್ಲಿ ನಿರಂತರ ಏರಿಕೆಯಾಗುತ್ತಿದ್ದರೆ, ಇನ್ನೊಂದೆಡೆ ಸರ್ಕಾರದ ಆದಾಯದಲ್ಲಿ (Revenue) ಕೂಡ ಕೊರತೆ ಎದುರಾಗಿದೆ. ಹೀಗಿರುವಾಗ ಇದೀಗ ಕಾಸ್ಟ್ ಕಟಿಂಗ್ (Cost Cutting) ಸರ್ಕಾರದ ಕಛೇರಿಗಳು ಹಾಗೂ ನೌಕರರವರೆಗೆ ತಲುಪಿದೆ. ಕೇಂದ್ರ ಸರ್ಕಾರ ತನ್ನ ಎಲ್ಲಾ ಸಚಿವಾಲಯಗಳು ಹಾಗೂ ವಿಭಾಗಗಳಿಗೆ ವೆಚ್ಚದ ಅಂಕುಶ ಹೇರಲು ಸೂಚಿಸಿದೆ. ಅಂದರೆ, ಅನಾವಶ್ಯಕ ಖರ್ಚುಗಳನ್ನು ತಗ್ಗಿಸಲು ಸರ್ಕಾರ ಆದೇಶ ನೀಡಿದೆ. ಇದರಿಂದ ನೌಕರರ ಓವರ್ ಟೈಮ್ ಭತ್ತೆ (Overtime Allowance)  ಗಳಂತಹ ಹಲವು ಸಂಗತಿಗಳ ಮೇಲೆ ಪ್ರಭಾವ ಉಂಟಾಗಲಿದೆ.


COMMERCIAL BREAK
SCROLL TO CONTINUE READING

ಸರ್ಕಾರದಿಂದ ಶೇ. 20 ರಷ್ಟು ಕಡಿತ ಸಾಧ್ಯತೆ
ದೇಶಾದ್ಯಂತ ಕೋವಿಡ್ -19 ಸಾಂಕ್ರಾಮಿಕದ ನಂತರ ಮೊದಲ ಬಾರಿಗೆ, ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಚಿವಾಲಯಗಳು ಓವರ್ ಟೈಮ್ ಅಲೌನ್ಸ್ ಹಾಗೂ ರಿವೈಸ್ದ್ ಅಲ್ಲೌನ್ಸ್ ಇತ್ಯಾದಿ ವೆಚ್ಚಗಳಲ್ಲಿ ಶೇ. 20ರಷ್ಟು ಕಡಿತಗೊಳಿಸಲಿವೆ. ಅಂದರೆ, ಇದೀಗ ನಾನ್-ಸ್ಕೀಮ್ದ್  ವೆಚ್ಚವನ್ನು (Non-Scheme Expenditure) ಶೇಕಡಾ 20 ರಷ್ಟು ಕಡಿತಗೊಳಿಸಲಾಗುತಿದ್ದು ಇದರಲ್ಲಿ ಟ್ರಾವೆಲ್ ಅಲೌನ್ಸ್ (Travelling Allowance) ಕೂಡ ಶಾಮೀಲಾಗಿದೆ.


ಇದನ್ನೂ ಓದಿ-ಕಪ್ಪು ಶೀಲಿಂದ್ರ ಔಷಧಿ ಮೇಲೆ ಯಾವುದೇ ತೆರಿಗೆ ಇಲ್ಲ ಎಂದ ಕೇಂದ್ರ ಸರ್ಕಾರ


ಗುರುವಾರ ಹಣಕಾಸು ಇಲಾಖೆಯ ಖರ್ಚು ವಿಭಾಗ (Finance Ministry Department Of Expenditure) ಈ ಕುರಿತು ವಿಜ್ಞಪ್ತಿಯೊಂದನ್ನು ಜಾರಿಗೊಳಿಸಿದ್ದು, ಇದರಲ್ಲಿ ಅನಾವಶ್ಯಕ ಖರ್ಚುಗಳನ್ನು ತಡೆಯಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಮತ್ತು ಇದರಿಂದ ಶೇ.20ರಷ್ಟು ಕಡಿತವನ್ನು ನಿರೀಕ್ಷಿಸಲಾಗುತ್ತಿದೆ. ದೇಶಾದ್ಯಂತದ ಜನರಿಗೆ ಉಚಿತ ಕೊರೊನಾ ಲಸಿಕೆ ನೀಡುವುದರಿಂದ ಹಾಗೂ ದೀಪಾವಳಿಯವರೆಗೆ 80 ಕೋಟಿ ಜನರಿಗೆ ಉಚಿತ ಪಡಿತರ ನೀಡುವಿಕೆಯಿಂದ ಸರ್ಕಾರದ ಬೊಕ್ಕಸದ ಮೇಲೆ ಭಾರಿ ಒತ್ತಡ ಬೀಳಲಿದೆ. ಇದರಿಂದ ಫಿಸ್ಕಲ್ ಡೆಫಿಸಿಟ್ ಮೇಲಿನ ನಿಯಂತ್ರಣ ತಪ್ಪಲಿದೆ ಎನ್ನಲಾಗುತ್ತಿದೆ.


ಇದನ್ನೂ ಓದಿ-E-Vehicles: ದ್ವಿಚಕ್ರ ವಾಹನ ಖರೀದಿದಾರರಿಗೆ ಸಂತಸದ ಸುದ್ದಿ ಪ್ರಕಟಿಸಿದ Modi Government


ಈ ಭತ್ಯೆಗಳ ಮೇಲೆ ಪರಿಣಾಮ ಉಂಟಾಗಲಿದೆ 
ಆರ್ಥಿಕ ಸಚಿವಾಲಯ ಹೊರಡಿಸಿರುವ ವಿಜ್ಞಪ್ತಿ ಪ್ರಕಾರ, ಯಾವ ಸಂಗತಿಗಳ ಖರ್ಚಿನಲ್ಲಿ ಕಡಿತ ಮಾಡಲು ಸೂಚಿಸಲಾಗಿದೆಯೋ ಅವುಗಳಲ್ಲಿ ಓವರ್ ಟೈಮ್ ಭತ್ಯೆ, ದೇಶಿ ಪ್ರಯಾಣ, ವಿದೇಶ ಯಾತ್ರೆಗಳ ಮೇಲಿನ ಖರ್ಚು, ಆಫಿಸ್ ವೆಚ್ಚ, ಬಾಡಿಗೆ, ರೇಟ್ಸ ಮತ್ತು ಟ್ಯಾಕ್ಸ್, ರಾಯಲ್ಟಿ, ಆಡಳಿತ ಹಾಗೂ ಆಡಳಿತಾತ್ಮಕ ಖರ್ಚು, ಪೂರೈಕೆ ಹಾಗೂ ಸಾಮಗ್ರಿ,  ಪಡಿತರ ಹೂಡಿಕೆ, POL, ಸಮವಸ್ತ್ರ ಹಾಗೂ ಟೆಂಟೆಜ್, ಜಾಹೀರಾತು ಹಾಗೂ ಪ್ರಸಾರ, ಲಘು ಕಾರ್ಯಗಳು, ಮೆಂಟೆನೆನ್ಸ್, ಸೇವಾ ಶುಲ್ಕ, ಕೊಡುಗೆ ಹಾಗೂ ಇತರೆ ಶುಲ್ಕಗಳು ಇದರಲ್ಲಿ ಶಾಮೀಲಾಗಿವೆ.


ಇದನ್ನೂ ಓದಿ-Terror Attack: ಪೊಲೀಸ್-CRPF ಜಂಟಿಪಡೆ ಮೇಲೆ ಉಗ್ರರ ದಾಳಿ, ಇಬ್ಬರು ಜವಾನರು ಹುತಾತ್ಮ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.