ಕಪ್ಪು ಶೀಲಿಂದ್ರ ಔಷಧಿ ಮೇಲೆ ಯಾವುದೇ ತೆರಿಗೆ ಇಲ್ಲ ಎಂದ ಕೇಂದ್ರ ಸರ್ಕಾರ

 ಕೋವಿಡ್ (Coronavirus) ಸೋಂಕಿತ ಜನರ ಮೇಲೆ ಪರಿಣಾಮ ಬೀರುವ ಕಪ್ಪು ಶೀಲಿಂದ್ರ ಚಿಕಿತ್ಸೆಗೆ ಬಳಸುವ ಟೊಸಿಲಿಜುಮಾಬ್ ಮತ್ತು ಆಂಫೊಟೆರಿಸಿನ್ ಬಿ ಯಂತಹ ಔಷಧಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

Written by - Zee Kannada News Desk | Last Updated : Jun 12, 2021, 04:51 PM IST
  • COVID-19 ವಿರುದ್ಧದ ಹೋರಾಟದಲ್ಲಿ ಅಗತ್ಯವಿರುವ ಔಷಧಿಗಳು, ಕೆಲವು ಆಸ್ಪತ್ರೆ ಉಪಕರಣಗಳು ಮತ್ತು ಇತರ ವಸ್ತುಗಳ ಮೇಲಿನ ತೆರಿಗೆಯನ್ನು ಸರಕು ಮತ್ತು ಸೇವಾ ತೆರಿಗೆ ಮಂಡಳಿ ಕಡಿಮೆ ಮಾಡಿದೆ.
  • ಕೋವಿಡ್ (Coronavirus) ಸೋಂಕಿತ ಜನರ ಮೇಲೆ ಪರಿಣಾಮ ಬೀರುವ ಕಪ್ಪು ಶೀಲಿಂದ್ರ ಚಿಕಿತ್ಸೆಗೆ ಬಳಸುವ ಟೊಸಿಲಿಜುಮಾಬ್ ಮತ್ತು ಆಂಫೊಟೆರಿಸಿನ್ ಬಿ ಯಂತಹ ಔಷಧಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ.
ಕಪ್ಪು ಶೀಲಿಂದ್ರ ಔಷಧಿ ಮೇಲೆ ಯಾವುದೇ ತೆರಿಗೆ ಇಲ್ಲ ಎಂದ ಕೇಂದ್ರ ಸರ್ಕಾರ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೋವಿಡ್ (Coronavirus) ಸೋಂಕಿತ ಜನರ ಮೇಲೆ ಪರಿಣಾಮ ಬೀರುವ ಕಪ್ಪು ಶೀಲಿಂದ್ರ ಚಿಕಿತ್ಸೆಗೆ ಬಳಸುವ ಟೊಸಿಲಿಜುಮಾಬ್ ಮತ್ತು ಆಂಫೊಟೆರಿಸಿನ್ ಬಿ ಯಂತಹ ಔಷಧಿಗಳಿಗೆ ಯಾವುದೇ ತೆರಿಗೆ ವಿಧಿಸಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

COVID-19 ವಿರುದ್ಧದ ಹೋರಾಟದಲ್ಲಿ ಅಗತ್ಯವಿರುವ ಔಷಧಿಗಳು, ಕೆಲವು ಆಸ್ಪತ್ರೆ ಉಪಕರಣಗಳು ಮತ್ತು ಇತರ ವಸ್ತುಗಳ ಮೇಲಿನ ತೆರಿಗೆಯನ್ನು ಸರಕು ಮತ್ತು ಸೇವಾ ತೆರಿಗೆ ಮಂಡಳಿ ಕಡಿಮೆ ಮಾಡಿರುವ ಬೆನ್ನಲ್ಲೇ ಸರ್ಕಾರದ ಘೋಷಣೆ ಬಂದಿದೆ.

ಇದನ್ನೂ ಓದಿ: 'KSRTC' ಪ್ರಯಾಣಿಕರಿಗೆ ರಾಜ್ಯ ಸರ್ಕಾರದಿಂದ ಬಿಗ್ ಶಾಕ್! 

ಸಾಂಕ್ರಾಮಿಕ ರೋಗದ ಮಧ್ಯೆ ಸಚಿವರ ಗುಂಪಿನ ಶಿಫಾರಸುಗಳನ್ನು ಆಧರಿಸಿ ತೆರಿಗೆ ಕಡಿತವನ್ನು ಮಾಡಲಾಗಿದೆ, ಆರ್ಥಿಕತೆಯ ಮೇಲೆ ಅವರ ದುರ್ಬಲ ಪರಿಣಾಮಗಳು ಗೃಹ ಹಣಕಾಸಿಗೂ ತೊಂದರೆಯಾಗಿದೆ ಎಂದು ಜಿಎಸ್‌ಟಿಗೆ ದರಗಳನ್ನು ನಿರ್ಧರಿಸುವ ಸಾಂವಿಧಾನಿಕ ಸಂಸ್ಥೆ ಹೇಳಿದೆ.ತೆರಿಗೆ ಕಡಿತವು ಸೆಪ್ಟೆಂಬರ್ 30 ರವರೆಗೆ ಮಾನ್ಯವಾಗಿರುತ್ತದೆ ಇದನ್ನೂ ಇನ್ನು ಮುಂದೆ ವಿಸ್ತರಿಸಬಹುದು ಎನ್ನಲಾಗುತ್ತಿದೆ.ಸದ್ಯಕ್ಕೆ ಕೋವಿಡ್ ಲಸಿಕೆ (Coronavirus Vaccine) ಗಳಿಗೆ ಶೇಕಡಾ 5 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ.

ಇದನ್ನೂ ಓದಿ: SSLC ಯಾವ ವಿದ್ಯಾರ್ಥಿಯನ್ನು ಫೇಲ್ ಮಾಡಲ್ಲ, ಆದ್ರೆ, ಕನಿಷ್ಠ ಅಂಕ ನಿಗದಿ ಮಾಡಿಲ್ಲ!

ಆರ್‌ಟಿ-ಪಿಸಿಆರ್ ಯಂತ್ರಗಳು, ಆರ್‌ಎನ್‌ಎ ಹೊರತೆಗೆಯುವ ಯಂತ್ರಗಳು ಮತ್ತು ಜೀನೋಮ್ ಸೀಕ್ವೆನ್ಸಿಂಗ್ ಯಂತ್ರಗಳಂತಹ ಕೆಲವು ವಸ್ತುಗಳ ಜಿಎಸ್‌ಟಿ ದರದಲ್ಲಿ ಶೇಕಡಾ 18 ರಷ್ಟು ಶುಲ್ಕ ವಿಧಿಸಲಾಗುತ್ತದೆ.ಕೋವಿಡ್ ಪರೀಕ್ಷಾ ಕಿಟ್‌ಗಳಿಗೆ ಕಚ್ಚಾ ವಸ್ತುಗಳ ಮೇಲೆ ಯಾವುದೇ ತೆರಿಗೆ ಕಡಿತ ಇಲ್ಲ ಎನ್ನಲಾಗಿದೆ.

ಇಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯ ಅಧ್ಯಕ್ಷತೆ ವಹಿಸಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್. 44 ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ನಾಯಕರು ತೆರಿಗೆ ಕಡಿತವನ್ನು ಘೋಷಿಸುವ ಮೊದಲು, ಕೋವಿಡ್ ಪರಿಹಾರ ಸಾಮಗ್ರಿಗಳಿಗೆ ತೆರಿಗೆ ರಿಯಾಯಿತಿ ಕುರಿತು ಮೇಘಾಲಯ ಉಪಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಮಂತ್ರಿಗಳ ಗುಂಪಿನ ವರದಿಯನ್ನು ಚರ್ಚಿಸಿದರು.

ಇದನ್ನೂ ಓದಿ: Mansoon: ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ, ಈ ಭಾಗಗಳಲ್ಲಿ ಜೂ.16ರವರೆಗೆ ಆರೆಂಜ್ ಅಲರ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News