Archana Guatam Big allegations on Priyanka Gandhis PA: ಪ್ರಿಯಾಂಕಾ ಗಾಂಧಿ ಅವರ ಪಿಎ ಸಂದೀಪ್ ಸಿಂಗ್ ಅವರ ಮೇಲೆ ಬಿಗ್ ಬಾಸ್ 16 ರ ಅತ್ಯಂತ ಜನಪ್ರಿಯ ಸ್ಪರ್ಧಿಗಳಲ್ಲಿ ಒಬ್ಬರಾದ ಅರ್ಚನಾ ಗೌತಮ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಬಿಗ್ ಬಾಸ್ ನಲ್ಲಿ ಅರ್ಚನಾ ಮನೆಯ ಇತರ ಸದಸ್ಯರೊಂದಿಗೆ ಜಗಳವಾಡುತ್ತಾ ಫೇಮಸ್ ಆಗಿದ್ದರು. ಇದೀಗ ಪ್ರಿಯಾಂಕಾ ಗಾಂಧಿ ಅವರ ಪಿಎ ವಿರುದ್ಧ ಅಸಭ್ಯವಾಗಿ ಆರೋಪ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ಅರ್ಚನಾ ದೂರಿನ ಬಳಿಕ ಪೊಲೀಸರು ಸಂದೀಪ್ ಸಿಂಗ್ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಈ ಕಾಯಿಲೆಯಿಂದ ಬಳಲುತ್ತಿರುವವರು ಬಾಳೆಹಣ್ಣನ್ನು ಮರೆತೂ ಸೇವಿಸಬಾರದು!


ಅರ್ಚನಾ ಗೌತಮ್, ಪ್ರಿಯಾಂಕಾ ಗಾಂಧಿ ಬಗ್ಗೆ ಆಗಾಗ್ಗೆ ಗೌರವಯುತವಾಗಿ ಮಾತನಾಡುವುದನ್ನು ಕಂಡಿರಬಹುದು. ಅಷ್ಟೇ ಅಲ್ಲದೆ, ನಾನು ಕಾಂಗ್ರೆಸ್ ಸೇರುತ್ತೇನೆ ಎಂದೆಲ್ಲ ಹೇಳುತ್ತಿದ್ದರು. ಆದರೆ ಈ ಮಧ್ಯೆ ಪ್ರಿಯಾಂಕಾ ಗಾಂಧಿ ಅವರ ಆಪ್ತ ಸಂದೀಪ್ ಸಿಂಗ್ ಮೇಲೆ ಅರ್ಚನಾ ಗೌತಮ್ ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಅರ್ಚನಾ ಫೇಸ್ ಬುಕ್ ಲೈವ್ ಬಂದು ಸಂದೀಪ್ ತನ್ನನ್ನು “ಎರಡು ಕಾಸಿನ ಮಹಿಳೆ” ಎಂದು ಕರೆದಿದ್ದಾರೆ.


ಸಂದೀಪ್ ತನಗೆ ಬೆದರಿಕೆ ಹಾಕಿದ್ದಾನೆ. ರಾಯ್‌ಪುರ ಅಧಿವೇಶನದಲ್ಲಿ ತನ್ನನ್ನು ಕಂಬಿ ಹಿಂದೆ ಹಾಕುವುದಾಗಿ ಹೇಳಿದ್ದಾಗಿ ರಚನಾ ಹೇಳಿಕೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಅವರ ಪಿಎಗೆ ಮಹಿಳೆಯೊಂದಿಗೆ ಮಾತನಾಡುವ ಶಿಷ್ಟಾಚಾರವಿಲ್ಲ ಎಂದು ಬಿಗ್ ಬಾಸ್ ಖ್ಯಾತಿಯ ಅರ್ಚನಾ ಹೇಳಿದ್ದಾರೆ.


ಇದೇ ವೇಳೆ, “ಪಾರ್ಟಿಯನ್ನು ಕಚ್ಚಿ ತಿನ್ನುತ್ತಿರುವ ಇಂತಹವರನ್ನು (ಸಂದೀಪ್ ಸಿಂಗ್) ಯಾಕೆ ಇಟ್ಟುಕೊಂಡಿದ್ದಾರೆ” ಎಂದು ಅರ್ಚನಾ ಪ್ರಶ್ನಿಸಿದ್ದಾರೆ. ಇನ್ನು “ಸಂದೀಪ್ ಅವರು ಪ್ರಿಯಾಂಕಾ ಗಾಂಧಿಯನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡುವುದಿಲ್ಲ, ಎಲ್ಲವನ್ನೂ ಆಕೆಯಿಂದ ಗೌಪ್ಯವಾಗಿಡಲಾಗಿದೆ” ಎಂದು ಆರೋಪಿಸಿದ್ದಾರೆ.


ಇದನ್ನೂ ಓದಿ: Edible Oil Latest Price: ಖಾದ್ಯ ತೈಲ ಬೆಲೆಯಲ್ಲಿ ಭಾರಿ ಇಳಿಕೆ, ಇಲ್ಲಿದೆ ಹೊಸ ದರ ಪಟ್ಟಿ!


ಪ್ರಿಯಾಂಕ ಅವರನ್ನು ಭೇಟಿಯಾಗಲು ಸುಮಾರು ಒಂದು ವರ್ಷ ತೆಗೆದುಕೊಂಡೆ. ನಾನು ಕಾಂಗ್ರೆಸ್ ಪಕ್ಷವನ್ನು ಸೇರಿಲ್ಲ, ಆದರೆ ನಾನು ಪ್ರಿಯಾಂಕಾ ದೀದಿಯನ್ನು ಸೇರಿದ್ದೇನೆ. ಅವರಿಂದಲೇ ನಾನು ಕಾಂಗ್ರೆಸ್‌’ಗೆ ಬಂದಿದ್ದೇನೆ” ಎಂದು ಅವರು ಹೇಳಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.