ಆ ನಗುವನ್ನೇ ಕಸಿಯಿತು ಅದೊಂದು ವಿಮಾನ ದುರಂತ! NRI ತಾಯಿ-ಮಗಳ ಕರುಣಾಜನಕ ಕಥೆ

Plane crash in US: ಪತನಗೊಂಡ ವಿಮಾನ ಡೆನ್ನಿ ವೈಸ್‌ಮನ್ ಫ್ಲೈಟ್ ಸ್ಕೂಲ್‌ಗೆ ಸೇರಿದ್ದು ಎಂದು ಗುರುತಿಸಲಾಗಿದೆ. ರೀವಾ ಜೊತೆಗೆ, ರೋಮಾ, ಲಾಂಗ್ ಐಲ್ಯಾಂಡ್ ನಿಂದ ವಿಮಾನದಲ್ಲಿ ಹೊರಟಿದ್ದಾರೆ. ಅಷ್ಟರಲ್ಲಿ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದು,  ಪೈಲಟ್ ಕೂಡಲೇ ಭೂ ನಿಯಂತ್ರಣಕ್ಕೆ ವಿಷಯ ತಿಳಿಸಿದ್ದಾರೆ. ಆದರೆ ವಿಮಾನ ನಿಲ್ದಾಣಕ್ಕೆ ವಾಪಸಾಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಪತನಗೊಂಡಿದೆ.

Written by - Bhavishya Shetty | Last Updated : Mar 7, 2023, 10:27 PM IST
    • ಅಮೆರಿಕದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
    • ಗಂಭೀರವಾಗಿ ಗಾಯಗೊಂಡಿರುವ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
    • ಇದೀಗ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಆ ನಗುವನ್ನೇ ಕಸಿಯಿತು ಅದೊಂದು ವಿಮಾನ ದುರಂತ! NRI ತಾಯಿ-ಮಗಳ ಕರುಣಾಜನಕ ಕಥೆ
NRI

ಅಮೆರಿಕದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಭಾರತೀಯ ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದೀಗ ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಅಂದು ಸಾಮಾನ್ಯ ಮಹಿಳೆ; ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ: ಈಕೆಯ ಅದೃಷ್ಟದಿಂದಲೇ ವಿಶ್ವಕಪ್ ಗೆದ್ದಿದ್ದರಂತೆ ಆ ನಾಯಕ!

ಭಾನುವಾರದಂದು ಲಘು ತರಬೇತಿ ವಿಮಾನವೊಂದು ಬೆಂಕಿಗೆ ಆಹುತಿಯಾಗಿ ನೆಲಕ್ಕೆ ಅಪ್ಪಳಿಸಿತ್ತು. ಆ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ರೋಮಾ ಗುಪ್ತಾ (63) ಮೃತಪಟ್ಟಿದ್ದಾರೆ. ಅವರ ಪುತ್ರಿ ರೀವಾ ಗುಪ್ತಾ ಗಂಭೀರವಾಗಿ ಗಾಯಗೊಂಡಿದ್ದಾರೆ.

ಪತನಗೊಂಡ ವಿಮಾನ ಡೆನ್ನಿ ವೈಸ್‌ಮನ್ ಫ್ಲೈಟ್ ಸ್ಕೂಲ್‌ಗೆ ಸೇರಿದ್ದು ಎಂದು ಗುರುತಿಸಲಾಗಿದೆ. ರೀವಾ ಜೊತೆಗೆ, ರೋಮಾ, ಲಾಂಗ್ ಐಲ್ಯಾಂಡ್ ನಿಂದ ವಿಮಾನದಲ್ಲಿ ಹೊರಟಿದ್ದಾರೆ. ಅಷ್ಟರಲ್ಲಿ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದು,  ಪೈಲಟ್ ಕೂಡಲೇ ಭೂ ನಿಯಂತ್ರಣಕ್ಕೆ ವಿಷಯ ತಿಳಿಸಿದ್ದಾರೆ. ಆದರೆ ವಿಮಾನ ನಿಲ್ದಾಣಕ್ಕೆ ವಾಪಸಾಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಪತನಗೊಂಡಿದೆ. ಈ ಘಟನೆಯಲ್ಲಿ ರೀವಾ ಜೊತೆಗೆ ಪೈಲಟ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಪತನಗೊಂಡ ವಿಮಾನದಲ್ಲಿ ಸಿಲುಕಿದ್ದವರನ್ನು ನಾಗರಿಕರೊಬ್ಬರು ಪತ್ತೆ ಮಾಡಿ ರಕ್ಷಿಸಿದ್ದಾರೆ. ರೇವಾ ಮೌಂಟ್ ಸಿನೈ ಸಿಸ್ಟಮ್ಸ್‌ನಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Shani Uday 2023: ಕುಂಭದಲ್ಲಿ ಶನಿ.. ತೆರೆಯಲಿದೆ ಈ ರಾಶಿಯವರ ಅದೃಷ್ಟ, ಬೇಡ ಬೇಡ ಅಂದ್ರೂ ಶನಿ ಕೊಡ್ತಾನೆ ಹಣ

ಈ ಘಟನೆಯ ಬಗ್ಗೆ ಮಾತನಾಡಿದ ಡೆನ್ನಿ ವೈಸ್‌ಮನ್ ಫ್ಲೈಟ್ ಸ್ಕೂಲ್‌, ”ವಿಮಾನವು ಇತ್ತೀಚೆಗೆ ಎರಡು ಸಂಪೂರ್ಣ ತಪಾಸಣೆಗಳನ್ನು ಪೂರ್ಣಗೊಳಿಸಿದೆ. ಜೊತೆಗೆ ಪೈಲಟ್ ತರಬೇತಿಯಲ್ಲೂ ಉತ್ತಮ ಅನುಭವ ಹೊಂದಿದ್ದರು. ಹಾರಲು ಕಲಿಯಲು ಬಯಸುವವರಿಗೆ ಇಂತಹ ವಿಮಾನಗಳನ್ನು ಆಯೋಜಿಸಲಾಗಿದೆ. ಆದರೆ ಅಪಘಾತಕ್ಕೀಡಾದ ವಿಮಾನವು ಪ್ರವಾಸಕ್ಕಾಗಿ ಉದ್ದೇಶಿಸಲಾಗಿತ್ತು” ಎಂದು ಅವರು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News