ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಗಳಿಗೆ ದಿನಾಂಕವನ್ನು ಘೋಷಣೆಯಾದ ಕೂಡಲೇ , ಎಲ್ಲಾ ಪಕ್ಷಗಳು ಗೆಲುವಿಗಾಗಿ ತಮ್ಮ ತಮ್ಮ ಹಕ್ಕು ಸಾಧಿಸುತ್ತಿದ್ದರೆ, ಮತದಾರರನ್ನು ಸೆಳೆಯಲು ಹೊಸ ಹೊಸ ಘೋಷಣೆಗಳು ಮೊಳಗಲಾರಂಭಿಸಿವೆ. ಬಿಹಾರ ವಿಧಾನಸಭೆ ಚುನಾವಣೆಗೂ ಮುನ್ನ ಯುವಕರು ಮತ್ತು ನಿರುದ್ಯೋಗಿಗಳ ಮೇಲೆ ತನ್ನ ಗಮನ ಕೇಂದ್ರೀಕರಿಸುವ ಬಿಹಾರದ ಪ್ರತಿಪಕ್ಷ ನಾಯಕ ಹಾಗೂ ಲಾಲು ಪುತ್ರ ತೇಜಸ್ವಿ ಯಾದವ್ ದೊಡ್ಡ ಘೋಷಣೆಯೊಂದನ್ನೇ  ಮಾಡಿದ್ದಾರೆ. ಈ ಕುರಿತು ಮಾತನಾಡಿರುವ RJD ಮುಖಂಡ ತೇಜಸ್ವಿ ಯಾದವ್ (Tejaswi Yadav) ಒಂದು ವೇಳೆ ಬಿಹಾರದಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 10 ಲಕ್ಷ ಯುವಕರಿಗೆ ಉದ್ಯೋಗ ಕಲ್ಪಿಸಲಾಗುವುದು ಎಂದು ಘೋಷಿಸಿದ್ದಾರೆ. ತೇಜಸ್ವಿ ಯಾದವ್ ಸತತ ಯುವಕರನ್ನು ಫೋಕಸ್ ಮಾಡುತ್ತಿರುವುದು ಇಲ್ಲಿ ಗಮನಾರ್ಹ.


ಲೋಕ ಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್ ಗೆ ಟಾಂಗ್ ಕೊಟ್ಟ ಬಿಹಾರ್ ಸಿಎಂ ನಿತೀಶ್ ಕುಮಾರ್


COMMERCIAL BREAK
SCROLL TO CONTINUE READING

ಈ ಕುರಿತು ಹೇಳಿಕೆ ನೀಡಿರುವ RJD ಪಕ್ಷದ ವತಿಯಿಂದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ತೇಜಸ್ವಿ ಯಾದವ್, ನಾವು ಆಗಸ್ಟ್ 5 ರಂದು ನಿರುದ್ಯೋಗಿಗಳಿಗೆ ಸಂಬಂಧಿಸಿದಂತೆ ಪೋರ್ಟಲ್ ವೊಂದನ್ನು ಲಾಂಚ್ ಮಾಡಿರುವುದಾಗಿ ಹೇಳಿದ್ದಾರೆ. ಈಗಾಗಲೇ ಇದರಲ್ಲಿ ಸುಮಾರು 9 ಲಕ್ಷ 47, 324 ನಿರುದ್ಯೋಗಿಗಳು ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ. ಅಷ್ಟೇ ಅಲ್ಲ ಸುಮಾರು 13 ಲಕ್ಷ 11626 ಜನರು ಮಿಸ್ ಕಾಲ್ ನೀಡಿದ್ದಾರೆ ಎಂದು ತೇಜಸ್ವಿ ಮಾಹಿತಿ ನೀಡಿದ್ದಾರೆ. ನಮ್ಮ ಪಕ್ಷ ನಿರುದ್ಯೋಗದ ಕುರಿತು ತುಂಬಾ ಗಂಭೀರವಾಗಿದೆ. ಬಿಹಾರ ಯುವಕರ ಪ್ರದೇಶವಾಗಿದ್ದು, ಶೇ.60 ಕ್ಕೂ ಹೆಚ್ಚು ಜನರು ಯುವಕರಾಗಿದ್ದಾರೆ ಅಲ್ಲದೆ ಶೇ.46.6 ರಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ.


ಇದೆ ವೇಳೆ ತೇಜಸ್ವಿ ಯಾದವ್ ಬಿಹಾರ ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿ ಕೂಡ ನೀಡಿದ್ದಾರೆ. ಈ ಕುರಿತು ಹೇಳಿರುವ ಅವರು ರಾಜ್ಯದ ಆರೋಗ್ಯ ಇಲಾಖೆಯಲ್ಲಿ 2.5ಲಕ್ಷ ನೌಕರರ ಅವಶ್ಯಕತೆ ಇದ್ದು, ಪೋಲೀಸ್ ಇಲಾಖೆಯಲ್ಲಿ 50 ಸಾವಿರ ಹುದ್ದೆಗಳು ಖಾಲಿ ಇವೆ.


ಇದನ್ನು ಓದಿ- ಬಿಹಾರ ವಿಧಾನಸಭಾ ಚುನಾವಣೆ 2020: ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ


ನಿತೀಶ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ತೇಜಸ್ವಿ
ಇದಕ್ಕೂ ಒಂದು ದಿನ ಮೊದಲು ಬಿಹಾರದ ಪ್ರತಿಪಕ್ಷ ನಾಯಕರಾಗಿರುವ ತೇಜಸ್ವಿ ಯಾದವ್, ಬಿಹಾರದಲ್ಲಿ ಉದ್ಯೋಗ ಸೃಷ್ಟಿ ಕುರಿತು ನಿತೀಶ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಕಳೆದ 15 ವರ್ಷಗಳಿಂದ ಬಿಹಾರ ಹಿಂದುಳಿದಿದೆ ಎಂದು ಹೇಳಿದ್ದಾರೆ.


ಶನಿವಾರ ಈ ಕುರಿತು ಟ್ವೀಟ್ ಮಾಡಿರುವ ತೇಜಸ್ವಿ ಯಾದವ್, ಉದ್ಯೋಗ ಸೃಷ್ಟಿ ಹಾಗೂ ಆನ್ತರಿಕವ್ಯಾಪರದಲ್ಲಿ ಬಿಹಾರ 26ನೆ ಸ್ಥಾನದಲ್ಲಿದೆ. ಹೂಡಿಕೆ ಹಾಗೂ ಹೊಸ ಉದ್ದಿಮೆಗಳ ವಿಚಾರದಲ್ಲಿ ಬಿಹಾರ ಅತ್ಯಂತ ಹಿಂದುಳಿದಿದೆ. ಉದಾರೀಕರಣದ ಬಳಿಕ ಕಳೆದ  15 ವರ್ಷಗಳಿಂದ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ NDA ಸರ್ಕಾರ ಈ ಅಂಕಿ ಅಂಶಗಳ ಕುರಿತು ಏಕೆ ಮಾತನಾಡುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.