ಬಿಹಾರ ವಿಧಾನಸಭಾ ಚುನಾವಣೆ 2020: ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ

ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಶುಕ್ರವಾರ ಪ್ರಕಟಿಸಬಹುದು.

Last Updated : Sep 25, 2020, 02:20 PM IST
  • ಕೋವಿಡ್ -19 (Covid-19) ರ ಬಿಕ್ಕಟ್ಟಿನ ನಂತರದ ಮೊದಲ ಚುನಾವಣೆ ಇದಾಗಿದೆ.
  • ಅಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ದೂರವನ್ನು ಉಳಿಸಿಕೊಳ್ಳುವುದು ಮತ್ತು ಮತದಾನವನ್ನು ಸುಗಮವಾಗಿ ಪೂರ್ಣಗೊಳಿಸುವುದು ಆಯೋಗಕ್ಕೆ ದೊಡ್ಡ ಸವಾಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆ 2020: ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ title=

ನವದೆಹಲಿ: ಚುನಾವಣಾ ಆಯೋಗ  ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದ್ದು ಅಕ್ಟೋಬರ್ 28 ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಘೋಷಿಸಿದೆ.  ಈ ಪ್ರಕಟಣೆಯೊಂದಿಗೆ ಮಾದರಿ ನೀತಿ ಸಂಹಿತೆ (ಎಂಸಿಸಿ) ಜಾರಿಯಾಗಿದೆ. ಎಂಸಿಸಿ ಮಾರ್ಗಸೂಚಿಗಳ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಆಯೋಗವು ಈಗಾಗಲೇ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ ಎಂದು ಸಿಇಸಿ ಸುನಿಲ್ ಅರೋರಾ (Sunil Arora) ತಿಳಿಸಿದ್ದಾರೆ.

ಚುನಾವಣಾ ಆಯೋಗ ಇಂದು ಮಧ್ಯಾಹ್ನ 12: 30ಕ್ಕೆ ಪತ್ರಿಕಾಗೋಷ್ಠಿ ನಡೆಸಿ ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿದರು. ಬಿಹಾರ ವಿಧಾನಸಭಾ ಚುನಾವಣೆ (Bihar assembly elections) ಯ ವಿವರವಾದ ಘೋಷಣೆ ಮಾಡಿದ್ದು  ಮೂರು ಹಂತಗಳಲ್ಲಿ ಬಿಹಾರದಲ್ಲಿ ಚುನಾವಣೆ ನಡೆಸಿದ್ದಾರೆ. ಆದರೆ ಕಳೆದ ಬಾರಿ ಐದು ಹಂತಗಳಲ್ಲಿ ಚುನಾವಣೆ ನಡೆದಿತ್ತು.

ಬಿಹಾರ ವಿಧಾನಸಭಾ ಚುನಾವಣೆ 2020 ವಿವರಗಳು:

ಮೊದಲ ಹಂತ: 71 ವಿಧಾನಸಭಾ ಕ್ಷೇತ್ರ, 31,000 ಮತಗಟ್ಟೆ

ಎರಡನೇ ಹಂತ: 94 ವಿಧಾನಸಭಾ ಕ್ಷೇತ್ರ, 42,000 ಮತಗಟ್ಟೆ

ಮೂರನೇ ಹಂತ: 78 ವಿಧಾನಸಭಾ ಕ್ಷೇತ್ರ, 33.5 ಸಾವಿರ ಮತಗಟ್ಟೆ

ಬಿಹಾರದ 243 ಸದಸ್ಯರ ವಿಧಾನ ಸಭೆಯ ಅವಧಿ ನವೆಂಬರ್ 29ಕ್ಕೆ ಮುಕ್ತಾಯಗೊಳ್ಳಲಿದೆ.

ಚುನಾವಣಾ ಆಯೋಗದ ಹೊಸ ಮಾರ್ಗಸೂಚಿ: ಅಪರಾಧ ಪ್ರಕರಣಗಳನ್ನು ಪತ್ರಿಕೆಗಳಲ್ಲಿ 3 ಬಾರಿ ಮುದ್ರಿಸುವುದು ಕಡ್ಡಾಯ

ಈ ಮೊದಲು ಕರೋನಾ ಬಿಕ್ಕಟ್ಟಿನಿಂದಾಗಿ ಎಲ್ಲಾ ವಿರೋಧ ಪಕ್ಷಗಳು ವಿಧಾನಸಭಾ ಚುನಾವಣೆಯನ್ನು ವಿರೋಧಿಸಿದ್ದವು, ಆದರೆ ಚುನಾವಣಾ ಆಯೋಗವು ಚುನಾವಣೆಯನ್ನು ಸಮಯಕ್ಕೆ ಸರಿಯಾಗಿ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ ಬಳಿಕ ಎಲ್ಲಾ ಪಕ್ಷಗಳೂ ಚುನಾವಣಾ ಸಿದ್ಧತೆಯಲ್ಲಿ ನಿರತರಾಗಿದ್ದಾರೆ. 

ಕೋವಿಡ್ -19 (Covid-19) ರ ಬಿಕ್ಕಟ್ಟಿನ ನಂತರದ ಮೊದಲ ಚುನಾವಣೆ ಇದಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಸಾಮಾಜಿಕ ದೂರವನ್ನು ಉಳಿಸಿಕೊಳ್ಳುವುದು ಮತ್ತು ಮತದಾನವನ್ನು ಸುಗಮವಾಗಿ ಪೂರ್ಣಗೊಳಿಸುವುದು ಚುನಾವಣಾ ಆಯೋಗಕ್ಕೆ (Election Commission) ದೊಡ್ಡ ಸವಾಲಾಗಿದೆ.

Bihar Assembly elections: 65 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿಗೆ ಅಂಚೆ ಮತಪತ್ರವಿಲ್ಲ..!

Trending News