ಚಪ್ರ: ಬಿಹಾರದ ಚಪ್ರ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಟೆರೇಸ್ ನಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ.


COMMERCIAL BREAK
SCROLL TO CONTINUE READING

ಸ್ಥಳಿಯರ ಪ್ರಕಾರ, ಮೇಲ್ಛಾವಣಿಯ ಮೇಲಿಂದ ರಕ್ತ ಜಿನುಗುತ್ತಿರುವ ಬಗ್ಗೆ ವಿದ್ಯಾರ್ಥಿಗಳು ವಿಷಯ ತಿಳಿಸಿದ ಬಳಿಕ ಪರಿಶೀಲನೆ ನಡೆಸಲಾಗಿ ಶವ ಇರುವುದು ಪತ್ತೆಯಾಗಿದೆ. ಬಾಯಿ ಬಟ್ಟೆ ತುರುಕಲಾಗಿದ್ದು, ಕತ್ತು ಮತ್ತು ದೇಹದ ಇತರ ಭಾಗಗಳಲ್ಲಿ ಚಾಕುವಿನಿಂದ ಇರಿದಿರುವ ಗುರುತುಗಳಿವೆ ಎನ್ನಲಾಗಿದೆ. 


ಮೃತನನ್ನು ಪ್ರದ್ಯುಮ್ನ ಕುಮಾರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.