ಪಾಟ್ನಾ: ನಿನ್ನೆಯಷ್ಟೇ ಬಿಹಾರದಲ್ಲಿ ಕಾಂಗ್ರೆಸ್-ಆರ್ಜೆಡಿ ಮಹಾಘಟಬಂಧನ್ ನಲ್ಲಿ ಯಾವುದೇ ಬಿರುಕಿಲ್ಲ ಎಂದು ಸ್ಪಷ್ಟಪಡಿಸಿದ್ದ ಮೈತ್ರಿ ಪಕ್ಷಗಳು ಇಂದು ಬಿಹಾರ ಲೋಕಸಭಾ ಚುನಾವಣೆಗಾಗಿ ತಮ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿವೆ. ಮೈತ್ರಿಕೂಟದಿಂದ ಇಂದು ಬಿಡುಗಡೆ ಮಾಡಲಾದ ಪಟ್ಟಿಯಲ್ಲಿ 32 ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.


COMMERCIAL BREAK
SCROLL TO CONTINUE READING

ಅಭ್ಯರ್ಥಿಗಳ ಘೋಷಣೆ ಬಳಿಕ ಮಾತನಾಡಿದ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಮಗ ತೇಜಸ್ವಿ ಯಾದವ್, ಸಹೋದರಿ ಮಿಸ ಭಾರ್ತಿ ಪಾಟಲಿಪುತ್ರದಿಂದ ಸ್ಪರ್ಧಿಸಲಿದ್ದಾರೆ. ತೇಜ್ ಪ್ರತಾಪ್ ಯಾದವ್ ಮಾವ ಚಂದ್ರಿಕಾ ರಾಯ್ ಸರನ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ತಿಳಿಸಿದರು.


ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಂಝಿ ಕತಿಹಾರ್ ಕ್ಷೇತ್ರದಿಂದ ಸ್ಪರ್ದಿಸುತ್ತಿದ್ದರೆ, ಲೋಕಸಭೆಯ ಪ್ರಥಮ ಮಹಿಳಾ ಸ್ಪೀಕರ್ ಹಾಗೂ ಕಾಂಗ್ರೆಸ್ ನಾಯಕಿ ಮೀರಾ ಕುಮಾರ್ ಸಸರಂ ನಿಂದ ಕಣಕ್ಕಿಳಿಯಲಿದ್ದಾರೆ.


ಇದಲ್ಲದೆ ನಿನ್ನೆಯಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಘೋಷಿಸಿರುವ ಶತ್ರುಘ್ನ ಸಿನ್ಹಾ ಅವರ ಸಂಸದೀಯ ಕ್ಷೇತ್ರ ಪಾಟ್ನಾ ಸಾಹಿಬ್‌ ಕಾಂಗ್ರೆಸ್ ಪಾಲಾಗಿದ್ದು, ಅದೇ ಕ್ಷೇತ್ರದಿಂದ ಸಿನ್ಹಾ ಸ್ಪರ್ಧೆ ಬಹುತೇಕ ಖಚಿತ ಎನ್ನಲಾಗಿದೆ.


ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೈತ್ರಿ ಕೂಟ ಮಾಡಿಕೊಂಡಿರುವ ಸೀಟು ಹಂಚಿಕೆ ಪ್ರಕಾರ, ಆರ್ಜೆಡಿಯ 19, ಕಾಂಗ್ರೆಸ್‌ 9 ಮತ್ತು ಬಿಜೆಪಿ ಮೈತ್ರಿಕೂಟ ತೊರೆದು ಮಹಾಘಟಬಂಧನ್ ಭಾಗವಾಗಿರುವ ಆರ್‌ಎಲ್ಎಸ್‌ಪಿಯ 5, ಹಿಂದುಸ್ಥಾನಿ ಆವಮ್ ಮೋರ್ಚಾ (ಸೆಕ್ಯುಲರ್) (HAM-S) 3 ಮತ್ತು ವಿಕಾಸ್ಹಿಲ್ ಇನ್ಸಾನ್ ಪಾರ್ಟಿ (ವಿಐಪಿ) 3, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್) 1 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ.


ಭಾಗಲ್ಪುರ್, ಬಂಕಾ, ಮಧೇಪುರಾ, ದರ್ಬಂಗ, ವೈಶಾಲಿ, ಗೋಪಾಲ್ಗಂಜ್, ಸಿವಾನ್, ಮಹಾರಾಜ್ಗಂಜ್, ಸರನ್, ಹಾಜಿಪುರ್, ಬೇಗುಸಾರೈ, ಪಾಟಲಿಪುತ್ರ, ಜಹಾನಾಬಾದ್, ಸಿಟಮಾರಿ, ಬಕ್ಸಾರ್, ನವಾಡಾ, ಜಾಂಜರ್ಪುರ್, ಅರಿಯಾಯಾ ಮತ್ತು ಶಿಯೋಹರ್ಗಳಲ್ಲಿ ಆರ್ಜೆಡಿ ಸ್ಪರ್ಧಿಸಲಿದೆ.


ಕಿಶನ್ಗಂಜ್, ಕತಿಹಾರ್, ಪೂರ್ನಿಯಾ, ಸಮಸ್ತಿಪುರ್, ಮುಂಗರ್, ಪಟ್ನಾ ಸಾಹಿಬ್, ಸಸಾರಾಮ್, ವಾಲ್ಮೀಕಿ ನಗರ ಮತ್ತು ಸುಪೌಲ್ನಿಂದ ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ.


ಆರ್‌ಎಲ್ಎಸ್‌ಪಿ ಪಸ್ಚಿಮ್ ಚಂಪಾರಣ್, ಪುರ್ವಿ ಚಂಪಾರಣ್, ಉಜಿರ್ಪುರ್, ಕರಕಟ್ ಮತ್ತು ಜಮುಯಿ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.


ನಳಂದ, ಔರಂಗಾಬಾದ್ ಮತ್ತು ಗಯಾ ಸೀಟುಗಳಲ್ಲಿ HAM (ಎಸ್) ಸ್ಪರ್ಧಿಸಲಿದ್ದು, ಮಧುಬಾನಿ, ಮುಜಫರ್ ಪುರ್ ಮತ್ತು ಖಗೇರಿಯಾದಿಂದ ವಿಐಪಿ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ.


ಸಿಆರ್ಐ (ಎಮ್ಎಲ್), ಆರ್ಜೆಡಿ ಕೋಟಾದಿಂದ ಒಂದು ಸ್ಥಾನ ಪಡೆದಿದೆ, ಅರ್ರಹ ಕ್ಷೇತ್ರದಿಂದ ಸ್ಪರ್ಧಿಸಲಿದೆ.