Californium Stone: ಬಿಹಾರ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಚಿನ್ನ, ವಜ್ರಕ್ಕಿಂತಲೂ ಹೆಚ್ಚು ಅತ್ಯಮೂಲ್ಯವಾದ 50 ಗ್ರಾಂ ತೂಕದ ವಿಕಿರಣಶೀಲ ಕ್ಯಾಲಿಫೋರ್ನಿಯಂ ಕಲ್ಲನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 850 ಕೋಟಿ ರೂ. ಆಗಲಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.  


COMMERCIAL BREAK
SCROLL TO CONTINUE READING

ಬಿಹಾರದ STF, ಸ್ಪೆಷಲ್ ಆಪರೇಷನ್ ಗ್ರೂಪ್ 7, ಗೋಪಾಲ್‌ಗಂಜ್ DIU ಹಾಗೂ ಕುಚೈಕೋಟ್ ಪೊಲೀಸ್ ಠಾಣೆ ಜಂಟಿ ಕಾರ್ಯಾಚರಣೆಯ ನಡೆಸಿ 50 ಗ್ರಾಂ ಅತ್ಯಮೂಲ್ಯ ವಿಕಿರಣಶೀಲ ವಸ್ತು ಕ್ಯಾಲಿಫೋರ್ನಿಯಂವನ್ನು ವಶಪಡಿಸಿಕೊಳ್ಳಲಾಗಿದೆ. ಭದ್ರತಾ ಪಡೆಗಳು ಮೂವರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.


ಇದನ್ನೂ ಓದಿ: World Lion Day History: ವಿಶ್ವ ಸಿಂಹ ದಿನದ ಇತಿಹಾಸದ ಬಗ್ಗೆ ಇಲ್ಲಿದೆ ಅಪರೂಪದ ಮಾಹಿತಿ..! ವನರಾಜನ ಮಹತ್ವ ಸಾರುವ ಈ ದಿನ ನಮಗೆಷ್ಟು ಮುಖ್ಯ..!  


ಬಂಧಿತ ಮೂವರನ್ನು ಉತ್ತರಪ್ರದೇಶದ ಕುಶಿನಗರ ಜಿಲ್ಲೆಯ ತಮ್ಕುಹಿ ರಾಮ್ ಪೊಲೀಸ್ ಠಾಣೆಯ ಪರ್ಸೌನಿ ಗ್ರಾಮದ ಛೋಟಾಲಾಲ್ ಪ್ರಸಾದ್, ಗೋಪಾಲಗಂಜ್‌ಗೆ ಸೇರಿದ ಚಂದನ್ ಗುಪ್ತಾ ಮತ್ತು ಚಂದನ್ ರಾಮ್ ಎಂದು ಗುರುತಿಸಲಾಗಿದೆ. ಈ ಮೂವರು ಹಲವು ತಿಂಗಳಿನಿಂದ ಅಮೂಲ್ಯ ವಸ್ತುವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ವಿಷಯ ಪೊಲೀಸರಿಗೆ ತಿಳಿದಿದೆ. ಕೂಡಲೇ ಎಚ್ಚೆತ್ತ ಎಸ್‌ಐಟಿ, ಎಸ್‌ಒಜಿ, ಡಿಐಯು ತಂಡವು ಸ್ಥಳೀಯ ಕುಚೈಕೋಟ್ ಠಾಣೆ ಪೊಲೀಸರೊಂದಿಗೆ ತಪಾಸಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


1 ಗ್ರಾಂ ಕ್ಯಾಲಿಫೋರ್ನಿಯಂನ ಬೆಲೆ 17 ಕೋಟಿ ರೂ. ಆಗಿದೆ. ಸದ್ಯ ವಶಪಡಿಸಿಕೊಂಡಿರುವ ಕ್ಯಾಲಿಫೋರ್ನಿಯಾದ ಮೌಲ್ಯ ಸುಮಾರು 850 ಕೋಟಿ ರೂ.ಗಳಾಗಲಿದೆ. ಇದನ್ನು ಮುಖ್ಯವಾಗಿ ಪರಮಾಣು ಶಕ್ತಿಯ ಉತ್ಪಾದನೆಯಲ್ಲಿ ಮತ್ತು ಮೆದುಳಿನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ.


ಇದನ್ನೂ ಓದಿ: General Knowledge: ಸಾವಿರಕ್ಕೆ ʼKʼ ಅಕ್ಷರ ಯಾಕೆ ಬಳಸ್ತಾರೆ ಗೊತ್ತಾ..?


ಸದ್ಯ ಮೂವರು ಕಳ್ಳಸಾಗಣೆದಾರರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕ್ಯಾಲಿಫೋರ್ನಿಯಂ ಮಾದರಿಯನ್ನು ಮದ್ರಾಸ್ ಐಐಟಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಪೊಲೀಸರು ಅಣುಶಕ್ತಿ ಇಲಾಖೆಯನ್ನು ಸಹ ಸಂಪರ್ಕಿಸುವ ಪ್ರಕ್ರಿಯೆಯಲ್ಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.