ಲಖನೌ: ಉತ್ತರಪ್ರದೇಶದಲ್ಲಿ, ಲವ್ ಜಿಹಾದ್ (Love Jihad) ಕುರಿತು ಕಾನೂನು ರೂಪಿಸಲು ಯೋಗಿ ಸರ್ಕಾರ ಸಂಪೂರ್ಣ ಸಿದ್ಧತೆಗಳನ್ನು ಮಾಡಿದೆ. ಮಂಗಳವಾರ, ಕ್ಯಾಬಿನೆಟ್ ಸಭೆಯಲ್ಲಿ ಕಾನೂನುಬಾಹಿರ ಧರ್ಮದ ಸುಗ್ರೀವಾಜ್ಞೆ ಸಹ ಅಂಗೀಕಾರ ನೀಡಲಾಗಿದೆ. ಸುಗ್ರೀವಾಜ್ಞೆಯ ಪ್ರಕಾರ,  ಬೇರೆ ಧರ್ಮದಲ್ಲಿ ಮದುವೆಯಾಗಲು ಇದೀಗ DM ಅನುಮತಿ ಪಡೆಯಬೇಕಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- 'ಲವ್ ಜಿಹಾದ್' ವಿರುದ್ಧ ಕಾನೂನು: ಬಿಜೆಪಿಗೆ 'ಬಿಗ್ ಶಾಕ್' ಕೊಟ್ಟ ಹೈಕೋರ್ಟ್!


ಮೂಲಗಳು ನೀಡಿರುವ ಮಾಹಿತಿ ಅನುಸಾರ ಯೋಗಿ ಆದಿತ್ಯನಾಥ್ ಸರ್ಕಾರದ ಸುಗ್ರೀವಾಜ್ಞೆಯ ಪ್ರಕಾರ, ಬೇರೆ ಧರ್ಮದಲ್ಲಿ ಮದುವೆಯಾಗಲು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರಲಿದೆ. ಇದಕ್ಕಾಗಿ ಮದುವೆಗೆ ಮೊದಲು 2 ತಿಂಗಳ ನೋಟಿಸ್ ನೀಡಬೇಕು. ಅನುಮತಿ ಇಲ್ಲದೆ ಮದುವೆಯಾಗಲು ಅಥವಾ ಮತಾಂತರಗೊಳ್ಳಲು, 6 ತಿಂಗಳಿಂದ 3 ವರ್ಷಗಳವರೆಗೆ ಶಿಕ್ಷೆಯ ಜೊತೆಗೆ 10 ಸಾವಿರ ದಂಡ ಪಾವತಿಸಬೇಕು.


ಇದನ್ನು ಓದಿ- ಸಿಎಂ ಯೋಗಿ, ಕೇಜ್ರಿವಾಲ್, ಮೋಹನ್ ಭಾಗವತ್ ಜೈಶ್ ಉಗ್ರರ ನೆಕ್ಸ್ಟ್ ಟಾರ್ಗೆಟ್!


ಸಾಮೂಹಿಕ ಧರ್ಮ ಪರಿವರ್ತನೆ ಮಾಡಿದ್ರೆ 10 ವರ್ಷ ಜೈಲು ಶಿಕ್ಷೆ
ತನ್ನ ಹೆಸರನ್ನು ಮರೆಮಾಚುವ ಮೂಲಕ ಮದುವೆಯಾದ ವ್ಯಕ್ತಿಗೆ 10 ವರ್ಷಗಳ ಶಿಕ್ಷೆ ವಿಧಿಸಲು ಈ ಸುಗ್ರೀವಾಜ್ಞೆಯು ಅವಕಾಶ ನೀಡುತ್ತದೆ. ಇದಲ್ಲದೆ ಅಕ್ರಮ ಮತಾಂತರಕ್ಕೆ ಒಂದರಿಂದ 10 ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಅಲ್ಲದೆ, 15 ಸಾವಿರವರೆಗೆ ದಂಡವನ್ನು ಸಹ ಪಾವತಿಸಬೇಕಾಗಬಹುದು. ಇದಲ್ಲದೆ, ನೀವು ಕಾನೂನುಬಾಹಿರ ರೀತಿಯಲ್ಲಿ ಧರ್ಮಕ್ಕೆ ಮತಾಂತರಗೊಂಡರೆ, ನಿಮಗೆ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದು, ಜೊತೆಗೆ ನಿಮಗೆ 50 ಸಾವಿರವರೆಗೆ ದಂಡ ವಿಧಿಸಲಾಗುವುದು.


ಇದನ್ನು ಓದಿ- ಲೋಹಿಯಾ ಹೇಳಿದಂತೆ 25 ವರ್ಷಗಳ ಕಾಲ ಮೋದಿ ಪ್ರಧಾನಿಯಾಗಿರುತ್ತಾರೆ: ಯೋಗಿ ಆದಿತ್ಯನಾಥ್


ಸುಗ್ರೀವಾಜ್ಞೆ ಕುರಿತು ಹೇಳಿಕೆ ನೀಡಿದ ಯೋಗಿ ಸರ್ಕಾರದ ಮಂತ್ರಿ
ಕಾನೂನುಬಾಹಿರ ಧರ್ಮ ಪರಿವರ್ತನೆಯಾ  ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಮಾತನಾಡಿರುವ ಯೋಗಿ ಸರ್ಕಾರದ ಕ್ಯಾಬಿನೆಟ್ ಸಚಿವ ಸಿದ್ಧಾರ್ಥ್ ನಾಥ್ ಸಿಂಗ್, ಉತ್ತರಪ್ರದೇಶದ ಕ್ಯಾಬಿನೆಟ್ ಇಂದು 'ಧಾರ್ಮಿಕ ಮತಾಂತರ ನಿಷೇಧದ ಸುಗ್ರೀವಾಜ್ಞೆ 2020 'ಜಾರಿಗೆ ತಂದಿದೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಸಾಮಾನ್ಯವಾಗಿಸಲು ಮತ್ತು ಮಹಿಳೆಯರಿಗೆ ನ್ಯಾಯ ಒದಗಿಸಲು ಇದು ಅವಶ್ಯಕವಾಗಿದೆ ಎಂದು ಅವರು ಹೇಳಿದ್ದಾರೆ. 'ಈ ಹಿಂದೆ 100 ಕ್ಕೂ ಹೆಚ್ಚು ಘಟನೆಗಳು ನಡೆದಿವೆ, ಅದರಲ್ಲಿ ಧರ್ಮವನ್ನು ಮತಾಂತರ ಮಾಡಲಾಗುತ್ತಿದೆ.  ಮೋಸ, ವಂಚನೆಯ ಮೂಲಕ  ಧರ್ಮವನ್ನು ಪರಿವರ್ತಿಸಲಾಗುತ್ತಿದೆ. ಈ ಕುರಿತು ಕಾನೂನಿನಲ್ಲಿ ಅಗತ್ಯವಾದ ನೀತಿಯನ್ನು ರೂಪಿಸಲಾಗಿದ್ದು, ಅದರ ಮೇಲೆ ನ್ಯಾಯಾಲಯದ ಆದೇಶಗಳು ಬಂದಿವೆ ಮತ್ತು ಇಂದು ಯೋಗಿಯ ಕ್ಯಾಬಿನೆಟ್ ಕೂಡ ಸುಗ್ರೀವಾಜ್ಞೆಯನ್ನು ತಂದಿದೆ' ಎಂದು ಅವರು ಹೇಳಿದ್ದಾರೆ.