'ಲವ್ ಜಿಹಾದ್' ಪ್ರಕರಣಗಳಿಗೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ತನ್ನ ಆಡಳಿತವು ಪರಿಚಯಿಸಲು ಸಿದ್ಧವಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭಾನುವಾರ ಘೋಷಿಸಿದ್ದಾರೆ.ಸ್ಥಳೀಯ ಜನಸಂಖ್ಯೆಗೆ ಭೂಮಿಯ ಹಕ್ಕು ಮತ್ತು ಸರ್ಕಾರಿ ಉದ್ಯೋಗಗಳನ್ನು ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
Helpline Number: ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ಖಾಸಗಿ ಹೊಟೇಲ್ ನಲ್ಲಿ ಮೂರು ಸಾವಿರಮಠದ ಶ್ರೀ ಗುರುಸಿದ್ಧರಾಜೇಯೋಗಿಂದ್ರ ಮಹಾಸ್ವಾಮಿಗಳಿಂದ ಸಹಾಯವಾಣಿ ಸಂಖ್ಯೆಯನ್ನು ಲೋಕಾರ್ಪಣೆ ಮಾಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಅನೇಕರು ಭಾಗಿಯಾಗಿದ್ದರು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿಗಳು ಹುಬ್ಬಳ್ಳಿಯಲ್ಲಿ ನೇಹಾ ಮನೆಗೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ನಮ್ಮ ಸಚಿವರು, ಕಾರ್ಯಕರ್ತರು ಹಾಗೂ ಸಚಿವ ಹೆಚ್. ಕೆ.ಪಾಟೀಲ್ ಭೇಟಿ ನೀಡಿದ್ದಾರೆ. ಧಾರವಾಡಕ್ಕೆ ತೆರಳಿದ ಸಂದರ್ಭದಲ್ಲಿ ಭೇಟಿ ನೀಡುವುದಾಗಿ ಹೇಳಿದರು.
ಚಾಮರಾಜನಗರದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ರಸ್ತೆತಡೆ ನಡೆ ಪ್ರತಿಭಟನೆ ವೇಳೆ ಮಾತನಾಡಿದ ಎನ್. ಮಹೇಶ್ (N Mahesh), ನ್ಯಾಯಬದ್ಧವಾಗಿ ಮಾತನಾಡಿ, ಒಂದು ಸಮುದಾಯದ ಓಲೈಕೆ ಯಾಕೆ ಮಾಡುತ್ತೀರಿ, ಚುನಾವಣಾ ಪ್ರಚಾರ ಬಿಟ್ಟು ಪ್ರತಿಭಟನೆ ನಡೆಸಬೇಕಾಗಿರುವುದು ನಮ್ಮ ದೌರ್ಭಾಗ್ಯ ಎಂದು ಕಿಡಿಕಾರಿದರು.
Madhya Pradesh: ಮಧ್ಯಪ್ರದೇಶದ ಜಬಲ್ಪುರದಲ್ಲಿ ಹಿಂದೂ ಹುಡುಗಿಯರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿರುವುದರ ಹಿಂದೆ ಲವ್ ಜಿಹಾದ್ ಕಾರಣ ಎಂದು ಹಿಂದೂ ಧರ್ಮ ಸೇನೆ ಆರೋಪಿಸಿದೆ. ಇದರ ವಿರುದ್ಧ ಸಂಘಟನೆಯು ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಹುಡುಗರಿಗೆ 11,000 ರೂಪಾಯಿ ನಗದು ಬಹುಮಾನವನ್ನು ನೀಡಲಾಗುವುದು ಎಂದು ಘೋಷಿಸಿದೆ.
ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಹಿಂದೂಗಳ ರಕ್ಷಣೆಗಾಗಿ ಲವ್ ಜಿಹಾದ್ ಕುರಿತು ಜಾಗೃತಿ ಮೂಡಿಸಲಾಯ್ತು.. ವಿಶ್ವ ಹಿಂದೂ ಪರಿಷತ್ನವರು ದೇವಸ್ಥಾನಕ್ಕೆ ಬಂದ ಮಹಿಳೆಯರಿಗೆ ಕರಪತ್ರ ವಿತರಣೆ ಮಾಡಿದ್ರು..
ಡಾಲರ್ಸ್ ಕಟೀಲ್ 40% ರೂಪಾಯಿ ಮನುಷ್ಯ ಎಂದು ಕಟೀಲ್ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ. ಲವ್ ಜಿಹಾದ್ ವಿಚಾರ ಕಟೀಲ್ ನೀಡಿದ್ದ ಹೇಳಿಕೆಗೆ ಆಕ್ರೋಶ ಹೊರ ಹಾಕಿದ್ದಾರೆ.
Tunisha Suicide Case: ಕಿರುತೆರೆ ನಟಿ ತುನೀಶಾ ಶರ್ಮಾ ಸಾವು ಎಲ್ಲರನ್ನೂ ದಿಗ್ಭ್ರಮೆಗೊಳಿಸಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಧಾರಾವಾಹಿಯೊಂದರ ಸೆಟ್ನಲ್ಲಿ ತುನೀಶಾ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣದಲ್ಲಿ ತುನೀಶಾ ಸಹನಟ ಶೀಜನ್ ಖಾನ್ನನ್ನು ಬಂಧಿಸಲಾಗಿದ್ದು, ಪೊಲೀಸ್ ಕಸ್ಟಡಿಯಲ್ಲಿದ್ದಾನೆ.
ಶಿವಮೊಗ್ಗದಲ್ಲಿ ನಡೆದ ಹಿಂದೂ ಜಾಗರಣ ವೈದಿಕ ದಕ್ಷಿಣ ಪ್ರಾಂತದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಭೋಪಾಲ್ನ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಠಾಕೂರ್ ‘ಲವ್ ಜಿಹಾದ್’ ಕುರಿತು ಪ್ರಚೋಧನಕಾರಿ ಹೇಳಿಕೆ ನೀಡಿದ್ದಾರೆ.
Love Jihad: ಬಲವಂತದ ಮತಾಂತರದ ಕುರಿತು ಖಾಕಿಪಡೆ ತನಿಖೆ ನಡೆಸಿದೆ. ತಾನು ಮನಪೂರ್ವಕವಾಗಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿ, ವಿವಾಹ ಆಗಿರುವುದಾಗಿ ಪೊಲೀಸರ ಎದುರು ಯುವತಿ ಹೇಳಿಕೆ ನೀಡಿದ್ದಾಳೆ.
ಶ್ರದ್ಧಾ ಕೊಲೆ ಪ್ರಕರಣ ರಾಷ್ಟ್ರ ರಾಜಧಾನಿಯನ್ನು ಬೆಚ್ಚಿ ಬೀಳಿಸಿದೆ. ಇತ್ತ ಮಗಳನ್ನು ಕಳೆದುಕೊಂಡಿರುವ ತಂದೆಯ ನೋವು ಮುಗಿಲು ಮುಟ್ಟಿದೆ. ಇದೀಗ ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್, ತನ್ನ ಮಗಳ ಹಂತಕನಿಗೆ ಮರಣದಂಡನೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಘಟನೆಯ ಹಿಂದೆ “ಲವ್ ಜಿಹಾದ್” ಇದೆ ಎಂದು ಶಂಕಿಸಿದ್ದಾರೆ.
ಕನ್ನಡದ ʼಆಕಾಶದೀಪʼ ಧಾರಾವಾಹಿ ಖ್ಯಾತಿಯ ನಟಿ ದಿವ್ಯಾ ಶ್ರೀಧರ್ ತಮ್ಮ ಗಂಡನ ವಿರುದ್ಧ ದೈಹಿಕ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದು, ನಟಿ ಲವ್ ಜಿಹಾದ್ಗೆ ಬಲಿಯಾದ್ರಾ ಎಂಬ ಅನುಮಾನ ಮೂಡುವಂತೆ ಮಾಡಿದೆ.
ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡ್ತಿರೋದಕ್ಕೆ ಸರ್ಕಾರವನ್ನು ಅಭಿನಂದನೆ ಸಲ್ಲಿಸ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಬಾಗಲಕೋಟೆಯ ಇಳಕಲ್ನಲ್ಲಿ ಮಾತನಾಡಿದ ಮುತಾಲಿಕ್, ಇವತ್ತು ಇದರ ಅವಶ್ಯಕತೆ ಬಹಳ ಇದೆ. ಈ ದೇಶದಲ್ಲಿ ಮತಾಂತರ ಅನ್ನೋದು ಒಂದು ಗಂಡಾಂತರ. ಮತಾಂತ ಮಾಡಲು ಯತ್ನಿಸಿದ್ರೆ ಉಗ್ರ ಹೋರಾಟ ಮಾಡೋದಾಗಿ ಎಚ್ಚರಿಸಿದ್ದಾರೆ.
ಈ ಮಣ್ಣಿನ ಕಣ ಕಣದಲ್ಲಿಯೂ ಶಿವಾಜಿ ರಕ್ತ ಇದೆ. ಓವೈಸಿ ಒಬ್ಬ ನಾಯಿ, ಬೋಸಿಡಿಕೆ, ನಿನ್ನಂತವರನ್ನ ಬಹಳ ಜನರನ್ನ ನೋಡಿವಿ. ನಾವು 20 ಕೊಟಿ ಮುಸ್ಲಿಂರು 100 ಕೋಟಿ ಹಿಂದುಗಳನ್ನು ನಾಶ ಮಾಡುತ್ತೇವೆ ಅಂತಾನೆ. ಟಿಪ್ಪು ಸುಲ್ತಾನ, ಗೋರಿ, ಘಜನಿ, ಬಾಬಾರ್ ನನ್ನ ಗೋರಿ ಕಟ್ಟಿದ್ದೇವೆ ಎಂದು ಮುತಾಲಿಕ್ ಗುಡುಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.