ನಾಮಪತ್ರ ಸಲ್ಲಿಸುವ ವೇಳೆ ಮಡಿಕೆಯಲ್ಲಿ ನಾಣ್ಯ ಒಯ್ಯುತ್ತಿದ್ದ ಬಿಜೆಪಿ ಅಭ್ಯರ್ಥಿ!
ಮಧ್ಯಪ್ರದೇಶದ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ನಾರಾಯಣ್ ತ್ರಿಪಾಠಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನವದೆಹಲಿ: ಮಧ್ಯಪ್ರದೇಶದ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ನಾರಾಯಣ್ ತ್ರಿಪಾಠಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಾರಾಯಣ್ ತ್ರಿಪಾಟಿ ಅವರು ತಮ್ಮ ನಾಮಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಕೆಂಪು ಬಣ್ಣದ ಬಟ್ಟೆಯಿಂದ ಮುಚ್ಚಿದ ಮಡಕೆಯೊಂದರಲ್ಲಿ 10 ಸಾವಿರ ರೂಗಳನ್ನು ಹೊತ್ತೊಯ್ಯುತ್ತಿದ್ದರು ಎಂದು ಎಂದು ತಿಳಿದು ಬಂದಿದೆ.ಆದರೆ ಅವರು ಹೇಳುವಂತೆ ಜನರ ಆಶೀರ್ವಾದದಿಂದ ಆ ಹಣವನ್ನು ಸಂಗ್ರಹಿಸಿರುವುದಾಗಿ ತಿಳಿಸಿದ್ದಾರೆ.ತ್ರಿಪಾಠಿ ನಾಣ್ಯಗಳನ್ನು ಒಯ್ಯುತ್ತಿದ್ದ ಮಡಕೆಯು ಅಂತ್ಯಕ್ರಿಯೆ ಸಂದರ್ಭದಲ್ಲಿ ಸಾಗಿಸಲು ಬಳಸಿದ ಚಿತಾಭಸ್ಮವನ್ನು ಹೋಲುತ್ತದೆ.
ಸತ್ನಾ ರಿಟರ್ನಿಂಗ್ ಅಧಿಕಾರಿ ಮತ್ತು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಮಯಿಹರ್ ಎಚ್.ಕೆ. ಧುರ್ವ್ ಅವರು ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಪರಿಗಣಿಸಿ ಜನಪ್ರತಿನಿಧಿ ಕಾಯ್ದೆ 125 ಎ ಅಡಿಯಲ್ಲಿ ತ್ರಿಪಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈಗ ಇದಕ್ಕೆ ಪ್ರತಿಕ್ರಿಯಿಸಿರುವ ತ್ರಿಪಾಟಿ ಕಾಂಗ್ರೆಸ್ ಸುಮ್ಮನೆ ವಿವಾದ ಸೃಷ್ಟಿಸುತ್ತದೆ ತಾವು ಯಾವುದೇ ರೀತಿಯ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿಲ್ಲ ಎಂದು ಅವರು ತಿಳಿಸಿದರು.