ಅಹಮದಾಬಾದ್: ಗುಜರಾತ್‌ ರಾಜ್ಯದ ಜಸ್‌ಧನ್ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು,  ಬಿಜೆಪಿ ಅಭ್ಯರ್ಥಿ ಕುನ್ವರಾಜೀ ಬಾವಾಲಿಯಾ 19,985 ಮತಗಳಿಂದ ಜಯಗಳಿಸಿದ್ದಾರೆ.


COMMERCIAL BREAK
SCROLL TO CONTINUE READING

2019ರ ಲೋಕಸಭಾ ಚುನಾವಣೆಗೂ ಮೊದಲೇ ನಡೆಯುತ್ತಿರುವ ಈ ಉಪಚುನಾವಣೆಯನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಪ್ರತಿಷ್ಠೆಯ ಚುನಾವಣೆ ಎಂದೇ ಪರಿಗನಿಸಿದ್ದವು. ಈ ಕ್ಷೇತ್ರದ ಉಪಚುನಾವಣೆ ಡಿಸೆಂಬರ್ 20ರಂದು ನಡೆದಿತ್ತು. 


ಈ ಉಪಚುನಾವಣೆಯಲ್ಲಿ ಬಿಜೆಪಿ ಕೋಲಿ ಸಮುದಾಯದ ಪ್ರಭಾವಿ ನಾಯಕ ಮತ್ತು ರಾಜ್ಯ ಸಚಿವ ಸಂಪುಟ ಸಚಿವರಾಗಿದ್ದ ಕುನ್ವರಾಜೀ ಬಾವಾಲಿಯಾ ಅವರಿಗೆ ಟಿಕೆಟ್ ನೀಡಿತ್ತು.


ಕುನ್ವರಾಜೀ ಬಾವಾಲಿಯಾ ಜಸ್‌ಧನ್ ಕ್ಷೇತ್ರದಲ್ಲಿ ನಾಲ್ಕು ಬಾರಿ 1995, 1998, 2002, 2017ರಲ್ಲಿ ಕಾಂಗ್ರೆಸ್ ಟಿಕೆಟ್‌ನಿಂದ ಜಯಗಳಿಸಿದ್ದಾರೆ.